iPhone 13: ಐಫೋನ್ ಪ್ರಿಯರಿಗೆ ಭಾರೀ ನಿರಾಸೆ: ಐಫೋನ್ 13 ರಲ್ಲಿ ಇರಲ್ಲ ಈ ಆಯ್ಕೆ

ಐಫೋನ್ ಪ್ರಿಯರು ಹಿಂಭಾಗದಲ್ಲಿ ಟಚ್ ಐಡಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಬೇಕೆಂದು ಬೇಡಿಕೆ ಇಟ್ಟಿದ್ದರು. ಐಫೋನ್​ನಲ್ಲಿ ಫೇಸ್ ಐಡಿ ಆನ್​​ಲಾಕ್ ಆಯ್ಕೆ ಇದೆ, ಅಲ್ಲದೆ ಮುಖದಲ್ಲಿ ಮಾಸ್ಕ್ ಇದ್ದರೂ ಆನ್​ಲಾಕ್ ಮಾಡುವ ಆಯ್ಕೆ ನೀಡಲಾಗಿದೆ. ಆದರೆ, ಎಲ್ಲರಿಗೂ ಈ ಆಯ್ಕೆ ಲಭ್ಯವಿಲ್ಲ

iPhone 13: ಐಫೋನ್ ಪ್ರಿಯರಿಗೆ ಭಾರೀ ನಿರಾಸೆ: ಐಫೋನ್ 13 ರಲ್ಲಿ ಇರಲ್ಲ ಈ ಆಯ್ಕೆ
iPhone 13
Follow us
TV9 Web
| Updated By: Vinay Bhat

Updated on: Jul 19, 2021 | 2:02 PM

ಕಳೆದ ಕೆಲವು ತಿಂಗಳುಗಳಿಂದ ಟೆಕ್ ಲೋಕದಲ್ಲಿ ಭರ್ಜರಿ ಸುದ್ದಿಯಲ್ಲಿರುವ ಐಫೋನ್ 13 (iPhone 13) ಬಗ್ಗೆ ಹೊಸ ಮಾಹಿತಿ ಹೊರಬಿದ್ದಿದೆ. ಈ ಹಿಂದೆ ಐಫೋನ್ 13 ಮುಂದಿನ ತಲೆಮಾರಿನ ಫೋನಿನ ಹಿಂಭಾಗದಲ್ಲಿ ಟಚ್ ಐಡಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಆಯ್ಕೆ ನೀಡಲಾಗುತ್ತದೆ ಎನ್ನಲಾಗಿತ್ತು. ಆದರೆ, ಈಗ ಹೊಸ ಮಾಹಿತಿ ಹೊರಬಿದ್ದಿದ್ದು ಈ ಆಯ್ಕೆ ಐಪೋನ್ 13ನಲ್ಲಿ ಲಭ್ಯವಿರುವುದಿಲ್ಲ ಎಂದು ತಿಳಿದುಬಂದಿದೆ.

ಐಫೋನ್ ಪ್ರಿಯರು ಹಿಂಭಾಗದಲ್ಲಿ ಟಚ್ ಐಡಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಬೇಕೆಂದು ಬೇಡಿಕೆ ಇಟ್ಟಿದ್ದರು. ಐಫೋನ್​ನಲ್ಲಿ ಫೇಸ್ ಐಡಿ ಆನ್​​ಲಾಕ್ ಆಯ್ಕೆ ಇದೆ, ಅಲ್ಲದೆ ಮುಖದಲ್ಲಿ ಮಾಸ್ಕ್ ಇದ್ದರೂ ಆನ್​ಲಾಕ್ ಮಾಡುವ ಆಯ್ಕೆ ನೀಡಲಾಗಿದೆ. ಆದರೆ, ಎಲ್ಲರಿಗೂ ಈ ಆಯ್ಕೆ ಲಭ್ಯವಿಲ್ಲ. ಹೀಗಾಗಿ ಫೋನ್ ಹಿಂಭಾಗ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಆಯ್ಕೆ ಕೇಳಿದ್ದರು. ಐಫೋನ್ 13 ಸರಣಿಯಲ್ಲಿ ಫೇಸ್​ಐಡಿ ಮತ್ತು ಟಚ್ ಐಡಿ ಸೌಲಭ್ಯ ಮಾತ್ರ ಇರಲಿದೆ. ಜೊತೆಗೆ ಡಿಸ್​ಪ್ಲೇ ಫಿಂಗರ್​ಪ್ರಿಂಟ್ ಆನ್​ಲಾಕ್ ಆಯ್ಕೆಯ ಕೆಲಸ ನಡೆಯುತ್ತಿದೆಯಂತೆ. ಆದರ, ಹಿಂಭಾಗದಲ್ಲಿ ಯಾವುದೇ ಆನ್​ಲಾಕ್ ಆಯ್ಕೆ ಇಲ್ಲ.

ಇನ್ನೂ ಐಫೋನ್ 13 ನಲ್ಲಿ ವೈರ್‌ಲೆಸ್ ಬಡ್ ಗಳಂತೆ ಇತರ ಸಾಧನಗಳನ್ನು ಚಾರ್ಜ್ ಮಾಡುವ ಸ್ಮಾರ್ಟ್‌ಫೋನ್ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಲಾಗಿದೆ. ಈಗಾಗಲೇ ಈ ವಿಶೇಷ ವೈಶಿಷ್ಟ್ಯವು ಸ್ಯಾಮ್‌ಸಂಗ್‌ನಂತಹ ಆಂಡ್ರಾಯ್ಡ್ ಸ್ಮಾರ್ಟ್‌ಫೋನುಗಳಲ್ಲಿ ಲಭ್ಯವಿದೆ. ಶೀಘ್ರದಲ್ಲೇ ಈ ಸೌಲಭ್ಯವು ಆ್ಯಪಲ್ ಐಫೋನ್ ಬಳಕೆದಾರರಿಗೂ ಲಭ್ಯವಾಗಲಿದೆ.

ಜೊತೆಗೆ ಈಗಾಗಲೇ ಐಫೋನ್ 12ರ ಸರಣಿಯಲ್ಲಿ ಲಭ್ಯವಿರುವ ಮ್ಯಾಗ್‌ಸೇಫ್ ವೈರ್‌ಲೆಸ್ ಚಾರ್ಜಿಂಗ್ ವೈಶಿಷ್ಟ್ಯವು ಐಫೋನ್ 13 ರಲ್ಲಿಯೂ ದೊರಕಲಿದೆ. ಈ ಮ್ಯಾಗ್‌ಸೇಫ್‌ನ ವಿಶೇಷತೆಯು ಐಫೋನ್ ಮಾದರಿಯ ಫೋನ್‌ಗಳಿಗೆ ವೇಗವರ್ಧಿತ ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸುತ್ತದೆ. ಮ್ಯಾಗ್‌ಸೇಫ್ ಐಫೋನ್ 12ರ ಗಾಜಿನ ಹಿಂಭಾಗದಲ್ಲಿ ವೈರ್‌ಲೆಸ್ ಚಾರ್ಜಿಂಗ್ ಕಾಯಿಲ್ ಅನ್ನು ಬಳಸಲಾಗುತ್ತದೆ.

ಏರ್‌ಪಾಡ್‌ಗಳಂತಹ ಉಪಕರಣಗಳಿಗೆ ರಿವರ್ಸ್ ಚಾರ್ಜಿಂಗ್ ಅನ್ನು ಮತ್ತಷ್ಟು ಬೆಂಬಲಿಸಲು ಆ್ಯಪಲ್ ದೊಡ್ಡ ಕಾಯಿಲ್ ಗಾತ್ರದೊಂದಿಗೆ ಬರಬಹುದು ಎಂಬ ವದಂತಿಕೂಡ ಇದೆ.

ಬಿಡುಗಡೆಗು ಮುನ್ನವೇ ಸ್ಯಾಮ್​ಸಂಗ್​ನ ಹೊಸ Galaxy A22 5G ಫೋನಿನ ಬೆಲೆ ಸೋರಿಕೆ

How To: ವಿಂಡೋಸ್ 11 ಆಪರೇಟಿಂಗ್ ಸಿಸ್ಟಂ ಬಳಸಲು ನಿಮ್ಮ ಕಂಪ್ಯೂಟರ್​​ನಲ್ಲಿ ಏನೆಲ್ಲ ಇರಬೇಕು?

(Apple iPhone 13 Will Not Have Touch ID this generation Everything We Know About This Years iPhone)

ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್