ಜಿಯೋ ಗ್ರಾಹಕರೇ ಗಮನಿಸಿ: ಮೈ ಜಿಯೋ ಆ್ಯಪ್​ನಲ್ಲಿ ಸಿಗುತ್ತೆ ಫ್ರೀ ಡೇಟಾ, ಹೇಗೆ ಪಡೆಯುವುದು?

My Jio App: ಹೌದು, ಮೈ ಜಿಯೋ ಆ್ಯಪ್​ನಲ್ಲಿ ಡೇಟಾ ಲೋನ್ ಆಯ್ಕೆ ನೀಡಲಾಗಿದ್ದು, ಅಗತ್ಯವಿರುವಾಗ ಸಾಲದ ರೂಪದಲ್ಲಿ ಡೇಟಾ ಪಡೆದು ನಂತರದ ದಿನಗಳಲ್ಲಿ ಅದಕ್ಕಾಗಿ ಹಣ ಪಾವತಿ ಮಾಡುವ ಸೌಲಭ್ಯ ಇದಾಗಿದೆ.

ಜಿಯೋ ಗ್ರಾಹಕರೇ ಗಮನಿಸಿ: ಮೈ ಜಿಯೋ ಆ್ಯಪ್​ನಲ್ಲಿ ಸಿಗುತ್ತೆ ಫ್ರೀ ಡೇಟಾ, ಹೇಗೆ ಪಡೆಯುವುದು?
My Jio App
Follow us
TV9 Web
| Updated By: Vinay Bhat

Updated on: Jul 19, 2021 | 2:44 PM

ಅತಿ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಸಂಪಾದಿಸಿ ಟೆಲಿಕಾಂ ಮಾರುಕಟ್ಟೆಯಲ್ಲಿ ನಂಬರ್ ಒನ್ ಸ್ಥಾನ ಪಡೆದಿರುವ ರಿಲಯನ್ಸ್ (Reliance) ಒಡೆತನದ ಜಿಯೋ (Jio) ಭರ್ಜರಿ ಆಫರ್​ಗಳನ್ನು ಬಿಡುಗಡೆ ಮಾಡುತ್ತಲೇ ಇದೆ. ಕಡಿಮೆ ಬೆಲೆಗೆ ಅಧಿಕ ಡೇಟಾ, ಅತ್ಯುತ್ತಮ ವ್ಯಾಲಿಡಿಟಿ, ಅನಿಯಮಿತ ಕರೆ ಹೀಗೆ ಅನೇಕ ಪ್ಲಾನ್​ಗಳನ್ನು ಅಗ್ಗದ ಬೆಲೆಗೆ ನೀಡುವುದರಲ್ಲಿ ಜಿಯೋ ಮುಂದಿದೆ. ಇನ್ನೇನು ಅತ್ಯಂತ ಕಡಿಮೆ ಬೆಲೆಗೆ ಹೊಸ ಜಿಯೋ ಫೋನ್ (Jio Phone) ಕೂಡ ಬಿಡುಗಡೆ ಆಗುವುದರಲ್ಲಿದೆ.

ಜಿಯೋ ಸಿಮ್ ಹೊಂದಿರುವವರು ತಮ್ಮ ಸ್ಮಾರ್ಟ್​ಫೋನ್​ನಲ್ಲಿ ಮೈ ಜಿಯೋ ಆ್ಯಪ್ (My jio App) ಅನ್ನು ಇನ್​ಸ್ಟಾಲ್ ಮಾಡಿ ಕೊಂಡಿರುತ್ತಾರೆ. ಸದ್ಯ ಈ ಆ್ಯಪ್​ನಲ್ಲಿ ಹೊಸ ಆಯ್ಕೆಯೊಂದಿದ್ದು, ಉಚಿತವಾಗಿ ಡೇಟಾವನ್ನು ಪಡೆಯಬಹುದಾಗಿದೆ.

ಹೌದು, ಮೈ ಜಿಯೋ ಆ್ಯಪ್​ನಲ್ಲಿ ಡೇಟಾ ಲೋನ್ ಆಯ್ಕೆ ನೀಡಲಾಗಿದ್ದು, ಅಗತ್ಯವಿರುವಾಗ ಸಾಲದ ರೂಪದಲ್ಲಿ ಡೇಟಾ ಪಡೆದು ನಂತರದ ದಿನಗಳಲ್ಲಿ ಅದಕ್ಕಾಗಿ ಹಣ ಪಾವತಿ ಮಾಡುವ ಸೌಲಭ್ಯ ಇದಾಗಿದೆ. ನಿಮ್ಮ ಹೈಸ್ಪೀಡ್ ಡೇಟಾದ ಕೋಟಾ ಮುಗಿದು ಹೋದಾಗ, ತಕ್ಷಣವೇ ರಿಜಾರ್ಜ್ ಮಾಡಿಕೊಳ್ಳಲು ಸಾಧ್ಯವಾಗದಿರುವ ಪರಿಸ್ಥಿತಿಯಲ್ಲಿ ‘ಈಗಲೇ ರೀಚಾರ್ಜ್ ಮಾಡಿಕೊಳ್ಳಿ ಮತ್ತು ನಂತರ ಪಾವತಿಸಿ’ ಅನುಕೂಲತೆಯನ್ನು ತುರ್ತು ಡೇಟಾ ಸಾಲ ಸೌಲಭ್ಯ ಒದಗಿಸುತ್ತದೆ.

ಪ್ರತಿ ಬಾರಿಗೆ 1GB ಯಂತೆ ಒಟ್ಟಾರೆ 5GB ವರೆಗೆ ಗ್ರಾಹಕರು ಡೇಟಾ ಸಾಲವನ್ನು ಪಡೆಯುವ ಆಯ್ಕೆ ನೀಡಲಾಗಿದೆ. ಪ್ರತಿ GB ಡೇಟಾಗೆ ಕೇವಲ 11 ರೂಪಾಯಿ ಚಾರ್ಜ್ ಮಾಡಲಾಗುತ್ತಿದೆ. ಬಹುತೇಕ ಹೆಚ್ಚಿನ ಗ್ರಾಹಕರು ತಮ್ಮ ದೈನಂದಿನ ಡೇಟಾದ ಕೋಟಾ ಖಾಲಿಯಾದ ತಕ್ಷಣವೇ ಹೊಸ ಡೇಟಾ ಟಾಪ್‌–ಅಪ್‌ ಖರೀದಿಸುವ ಪರಿಸ್ಥಿತಿಯಲ್ಲಿ ಇರುವುದಿಲ್ಲ ಎಂದು ಅರಿತಿರುವ ಜಿಯೋ ಅವರಿಗಾಗಿಯೇ ಈ ಹೊಸ ಸೌಲಭ್ಯವನ್ನು ನೀಡಿದೆ.

ಎಮರ್ಜೆನ್ಸಿ ಡೇಟಾ ಲೋನ್ ಸೌಲಭ್ಯ ಪಡೆಯಲು ಹೀಗೆ ಮಾಡಿ:

ಮೈ ಜಿಯೊ ಆ್ಯಪ್ ಓಪನ್ ಮಾಡಿ. ಈಗ ಡಿಸ್​ಪ್ಲೇಯ ಎಡತುದಿಯಲ್ಲಿರುವ ಮೆನು ಆಯ್ಕೆ ಮೇಲೆ ಟಚ್ ಮಾಡಿ.

ಇಲ್ಲಿ Mobile ಆಯ್ಕೆ ಮಾಡಿದ ನಂತರ Emergency Data Loan ಕ್ಲಿಕ್ ಮಾಡಿ.

ಈಗ ಕಾಣಿಸುವ ಎಮರ್ಜೆನ್ಸಿ ಡೇಟಾ ಲೋನ್ ಬ್ಯಾನರಿ ಅಡಿಯ Proceed ಎಂಬುದನ್ನು ಕ್ಲಿಕ್ ಮಾಡಿ.

ನಂತರ ಗೆಟ್ ಎಮರ್ಜೆನ್ಸಿ ಡೇಟಾ ಆಯ್ಕೆಯನ್ನು ಆಯ್ದುಕೊಳ್ಳಿ

ಕೊನೆಯಲ್ಲಿ ಆಕ್ಟೀವ್ ನೌ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಇಷ್ಟು ಮಾಡಿದ ನಂತರ ಈಗ ನಿಮ್ಮ ಕನೆಕ್ಷನ್ ಮೇಲೆ ಡೇಟಾ ಲೋನ್ ಆ್ಯಕ್ಟೀವ್ ಆಗುತ್ತದೆ. ಎಲ್ಲಾದರು ಎಮರ್ಜೆನ್ಸಿ ಡೇಟಾ ಲೋನ್ ಪಡೆದ ಹಣವನ್ನು ಪಾವತಿಸಬೇಕು ಎಂದಿದ್ದಲ್ಲಿ ಇದೇ ಪೇಜಿನಲ್ಲಿ ಆಯ್ಕೆ ಇದೆ.

iPhone 13: ಐಫೋನ್ ಪ್ರಿಯರಿಗೆ ಭಾರೀ ನಿರಾಸೆ: ಐಫೋನ್ 13 ರಲ್ಲಿ ಇರಲ್ಲ ಈ ಆಯ್ಕೆ

ಬಿಡುಗಡೆಗು ಮುನ್ನವೇ ಸ್ಯಾಮ್​ಸಂಗ್​ನ ಹೊಸ Galaxy A22 5G ಫೋನಿನ ಬೆಲೆ ಸೋರಿಕೆ

(Jio How can I apply for Jio Emergency Data Loan facility here is the steps)

ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ