ನೀವುಹೋದ ಲಾಡ್ಜ್ ಅಥವಾ ಮಾಲ್​ನ ಟ್ರಯಲ್ ರೂಮ್​ನಲ್ಲಿ ಹಿಡನ್ ಕ್ಯಾಮೆರಾ ಇದೆಯೇ?: ಹೀಗೆ ಪತ್ತೆ ಹಚ್ಚಿ

ಈ ಆ್ಯಪ್ ಡೌನ್​ಲೋಡ್ ಮಾಡಿದ ನಂತರ ನೀವು ತಂಗುವ ಜಾಗದಲ್ಲಿ ಅಥವಾ ನಿಮಗೆಲ್ಲಾದರು ಈ ಪ್ರದೇಶದಲ್ಲಿ ಹಿಡನ್ ಕ್ಯಾಮೆರಾ ಇದೆಯೇ? ಎಂಬ ಅನುಮಾನ ಮೂಡಿಬಂದಲ್ಲಿ ನಿಮಗೆ ಸಹಕರಿಸುತ್ತದೆ.

ನೀವುಹೋದ ಲಾಡ್ಜ್ ಅಥವಾ ಮಾಲ್​ನ ಟ್ರಯಲ್ ರೂಮ್​ನಲ್ಲಿ ಹಿಡನ್ ಕ್ಯಾಮೆರಾ ಇದೆಯೇ?: ಹೀಗೆ ಪತ್ತೆ ಹಚ್ಚಿ
Hidden camera
Follow us
TV9 Web
| Updated By: Vinay Bhat

Updated on:Jul 20, 2021 | 12:42 PM

ಇಂದು ತಂತ್ರಜ್ಞಾನ (Technology) ಮುಂದುವರೆದಷ್ಟು ಅದರಿಂದ ಎಷ್ಟು ಉಪಯೋಗವಾಗುತ್ತಿದೆಯೋ ಅಷ್ಟೆ ದುರುಪಯೋಗ ಕೂಡ ಆಗುತ್ತಿರುವುದು ದುರದೃಷ್ಟಕರ. ಇತ್ತೀಚೆಗಂತು ಹಿಡನ್ ಕ್ಯಾಮೆರಾವನ್ನು (Hidden Camera) ಬಳಸಿ ಅಸಹ್ಯಕರ ವಿಡಿಯೋವನ್ನು ಮಾಡಿ ಇಂಟರ್​ನೆಟ್​ನಲ್ಲಿ ಹರಿಯಬಿಡುತ್ತಿರುವ ಪ್ರಕರಣ ಹೆಚ್ಚಾಗುತ್ತಿದೆ. ಕಳೆದ ವರ್ಷ ದಕ್ಷಿಣ ಕೊರಿಯಾದಲ್ಲಿ ಹೋಟೆಲ್, ಲಾಡ್ಜ್​ಗಳಲ್ಲಿ ಉಳಿದುಕೊಳ್ಳುವ ದಂಪತಿಗಳನ್ನೇ ಟಾರ್ಗೆಟ್ ಮಾಡಿ ಸ್ಪೈ ಕ್ಯಾಮ್‌ಗಳ (Spy Cam) ಮೂಲಕ ಸುಮಾರು 1600ಕ್ಕೂ ಹೆಚ್ಚು ದಂಪತಿಗಳ ಅಶ್ಲೀಲ ವಿಡಿಯೋವನ್ನು ಚಿತ್ರೀಕರಿಸಿ ಸಿಕ್ಕಿಬಿದ್ದವನ ಕಥೆ ಕೇಳಿರಬಹುದು. ಇವುಗಳಿಗೆ ಕಡಿವಾಣ ಹಾಕುವುದು ಅಷ್ಟೊಂದು ಸುಲಭವಲ್ಲ.

ಯಾಕೆಂದರೆ ಸ್ಪೈ ಕ್ಯಾಮೆರಾಗಳು ಸಿಸಿಟಿವಿ ಕ್ಯಾಮೆರಾಗಳಂತೆ ಕಣ್ಣಿಗೆ ಕಾಣಿಸುವುದಿಲ್ಲ. ಅಷ್ಟೊಂದು ಪುಟ್ಟದಾಗಿರುತ್ತವೆ. ಎಲ್ಲಿ ಇರಿಸುತ್ತಾರೆ ಎಂಬುದನ್ನು ಪತ್ತೆ ಹಚ್ಚುವುದೇ ಕಷ್ಟ. ಉದಾಹರಣೆಗೆ ಇವುಗಳನ್ನು ಪೆನ್ನಿನ ಕ್ಯಾಪ್‌ನಲ್ಲಿರುವ ಕ್ಲಿಪ್‌ನ ತುದಿಯಲ್ಲಿ, ಅಂಗಿಯ ಬಟನ್‌ನಲ್ಲಿ, ಡೆಸ್ಕ್‌ ಮೇಲಿರುವ ಪೆನ್‌ ಸ್ಟ್ಯಾಂಡ್‌, ಗೊಂಬೆಗಳ ಕಣ್ಣು, ಗಡಿಯಾರದ ಮುಳ್ಳು ಹೀಗೆ ನಾನಾಕಡೆಗಳಲ್ಲಿ ಇರಿಸಬಹುದು.

ಹೀಗಾಗಿ ನಾವು ಬಹಳ ಎಚ್ಚರಿಕೆಯಿಂದ ಇರುವುದು ಒಳಿತು. ಇದಕ್ಕಾಗಿ ನೀವು ಸ್ಮಾರ್ಟ್‌ಫೋನ್ ಬಳಕೆ ಮಾಡುತ್ತಿದ್ದರೆ ಒಂದು ಆ್ಯಪ್ ಡೌನ್‌ಲೋಡ್ ಮಾಡಿದರೆ ಇದರ ಮೂಲಕ ನೀವಿರುವ ಪ್ರದೇಶದಲ್ಲಿ ಹಿಡನ್ ಕ್ಯಾಮೆರಾ ಇದೆಯೇ ಎಂಬುದನ್ನು ತಿಳಿಯಬಹುದು.

ನಿಮ್ಮ ಸ್ಮಾರ್ಟ್‌ಫೋನ್​ನಲ್ಲಿ ಪ್ಲೇ ಸ್ಟೋರ್​ಗೆ ಹೋಗಿ “ಹಿಡನ್‌ ಕ್ಯಾಮೆರಾ ಡಿಟೆಕ್ಟರ್” ಎಂಬ ಆ್ಯಪ್‌ ಡೌನ್‌ಲೋಡ್ ಮಾಡಿ ಅದರ ಸಹಾಯದಿಂದ ಹಿಡನ್‌ ಕ್ಯಾಮೆರಾಗಳನ್ನು ಪತ್ತೆಹಚ್ಚಬಹುದು. ಆದರೆ, ಇದು ಥರ್ಡ್ ಪಾರ್ಟಿ ಆ್ಯಪ್ ಎಂಬುದು ನೆಪಪಿರಲಿ.

ಈ ಆ್ಯಪ್ ಡೌನ್​ಲೋಡ್ ಮಾಡಿದ ನಂತರ ನೀವು ತಂಗುವ ಜಾಗದಲ್ಲಿ ಅಥವಾ ನಿಮಗೆಲ್ಲಾದರು ಈ ಪ್ರದೇಶದಲ್ಲಿ ಹಿಡನ್ ಕ್ಯಾಮೆರಾ ಇದೆಯೇ? ಎಂಬ ಅನುಮಾನ ಮೂಡಿಬಂದಲ್ಲಿ ನಿಮಗೆ ಸಹಕರಿಸುತ್ತದೆ.

ಸ್ಮಾರ್ಟ್‌ಫೋನ್‌ನಲ್ಲಿ ಆ್ಯಪ್‌ ಇನ್​ಸ್ಟಾಲ್ ಆದ ಬಳಿಕ ತೆರೆದರೆ ಇದರಲ್ಲಿ 8 ಆಯ್ಕೆಗಳಿರುತ್ತವೆ. ಮೊದಲನೆಯದು Detect Wired Camera ಎಂಬ ಆಯ್ಕೆ. ಇದನ್ನು ಸೆಲೆಕ್ಟ್ ಆಡಿ ನೀವು ಮೂವ್ ಆದ ಜಾಗದಲ್ಲಿ ಸ್ಕ್ಯಾನ್ ಮಾಡುತ್ತದೆ. ಹಿಡನ್ ಕ್ಯಾಮೆರಾ ಇದೆಯಾ ಎಂಬುದನ್ನು ತಿಳಿಸುತ್ತದೆ. ಜೊತೆಗೆ ಇದರಲ್ಲಿ ಇನ್ನಷ್ಟು ಅನೇಕ ಉಪಯುಕ್ತ ಆಯ್ಕೆಗಳಿವೆ.

ಇನ್ನೂ ಟೂ ವೇ ಮಿರರ್ ಅಥವಾ ಒಂದು ಬದಿಯಿಂದ ಕನ್ನಡಿ, ಇನ್ನೊಂದು ಬದಿಯಿಂದ ಪಾರದರ್ಶಕವಾದ ನಿಲುವುಗನ್ನಡಿ ಈ ಬಗೆಯ ಕನ್ನಡಿಗಳನ್ನು ಕ್ಯಾಮೆರಾ ಬದಲಾಗಿ ಅಳವಡಿಸಲಾಗಿರುತ್ತದೆ. ಅದರ ಹಿಂದೆ ದೊಡ್ಡ ಗಾತ್ರದ ಕ್ಯಾಮೆರಾ ನಿಲ್ಲಿಸಲಾಗಿರುತ್ತದೆ. ಹಾಗಾಗಿ, ನೀವು ನಿಮ್ಮ ಬೆರಳನ್ನು ನೇರವಾಗಿ ಕನ್ನಡಿಯ ಮೇಲೆ ತಾಗಿಸಿ. ಒಂದು ವೇಳೆ ಇದು ಟೂ ವೇ ಮಿರರ್ ಆಗಿದ್ದರೆ ಬೆರಳಿಗೂ ಕನ್ನಡಿಯ ಬುಡಕ್ಕೂ ಕೊಂಚ ಅಂತರವಿರುತ್ತದೆ. ಈ ಮೂಲಕ ಎಚ್ಚರಿಕೆಯಿಂದ ಇರಬಹುದು.

One Plus Nord 2: ಬಿಡುಗಡೆಗೆ ಎರಡೇ ದಿನ ಬಾಕಿ: ರೋಚಕತೆ ಸೃಷ್ಟಿಸುತ್ತಿದೆ ಹೊಸ ಒನ್​ಪ್ಲಸ್ ನಾರ್ಡ್ 2

WhatsApp New Feature: ಕರೆ ಮಧ್ಯೆ ಸೇರಿಕೊಳ್ಳಲು ಅವಕಾಶವಿರುವ ಹೊಸ ಗ್ರೂಪ್​ ಕಾಲ್​ ಆಯ್ಕೆ ಪರಿಚಯಿಸಿದ ವಾಟ್ಸ್ಯಾಪ್

(How to find out hidden camera in trial room of lodge and mall)

Published On - 12:40 pm, Tue, 20 July 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ