BSNL ನಿಂದ ಬಂಪರ್ ಪ್ಲಾನ್ ಬಿಡುಗಡೆ: ದಿನಕ್ಕೆ 5GB ಡೇಟಾ, 84 ದಿನ ವ್ಯಾಲಿಡಿಟಿ, ಬೆಲೆ ಎಷ್ಟು?

ಬಿಎಸ್‌ಎನ್‌ಎಲ್‌ 599 ರೂ. ಡೇಟಾ ಯೋಜನೆ ವರ್ಕ್ ಫ್ರಂ ಹೋಮ್‌ಗೆ ಉತ್ತಮ ಎನಿಸಿದೆ. ರಾತ್ರಿ ವೇಳೆ ಅನಿಯಮಿತ ಡೇಟಾ ಬಳಕೆಯ ಸೌಲಭ್ಯ ನೀಡಲಾಗಿದ್ದು, ರಾತ್ರಿ 12AM ನಿಂದ ಬೆಳಗ್ಗೆ 5AM ವರೆಗೂ ಯಾವುದೇ ಹೆಚ್ಚುವರಿ ಟಾರೀಫ್‌ ಇಲ್ಲದೇ ಅನಿಯಮಿತ ಡೇಟಾ ಸಿಗಲಿದೆ.

BSNL ನಿಂದ ಬಂಪರ್ ಪ್ಲಾನ್ ಬಿಡುಗಡೆ: ದಿನಕ್ಕೆ 5GB ಡೇಟಾ, 84 ದಿನ ವ್ಯಾಲಿಡಿಟಿ, ಬೆಲೆ ಎಷ್ಟು?
BSNL 485 ರೂ. ಪ್ಲ್ಯಾನ್: ಬಿಎಸ್​ಎನ್​ಎಲ್ ಪರಿಚಯಿಸಿರುವ 485 ರೂ.ಗಳ ಈ ಪ್ಲ್ಯಾನ್​ನ ವಾಲಿಡಿಟಿ 90 ದಿನಗಳು. ಈ ರಿಚಾರ್ಜ್​ ಪ್ಲ್ಯಾನ್​ ಮೂಲಕ ಗ್ರಾಹಕರಿಗೆ ಅನಿಯಮಿತ ಕರೆ ಸೌಲಭ್ಯ ದೊರೆಯಲಿದೆ. ಜೊತೆಗೆ ಪ್ರತಿದಿನ 1.5GB ಉಚಿತ ಡೇಟಾ ಹಾಗೂ 100 SMS ಸಿಗಲಿದೆ.
TV9kannada Web Team

| Edited By: Vinay Bhat

Jul 22, 2021 | 6:43 AM

ಸರ್ಕಾರಿ ಸ್ವಾಮ್ಯದ ಬಿಎಸ್​ಎನ್​ಎಲ್ (BSNL) ಸಂಸ್ಥೆ ಜಿಯೋ (Jio), ಏರ್ಟೆಲ್​ಗೆ (Airtel) ಪೈಪೋಟಿ ನೀಡಲು ಕಳೆದ ಕೆಲವು ತಿಂಗಳುಗಳಿಂದ ವಿನೂತನ ಪ್ಲಾನ್​ಗಳನ್ನು ಪರಿಚಯಿಸುತ್ತಿದೆ. ಹೊಸ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿರುವ ಬಿಎಸ್​ಎನ್​ಎಲ್ ಕಡಿಮೆ ಬೆಲೆಗೆ ಅಧಿಕ ಡೇಟಾ, ಅನಿಯಮಿತ ಕರೆ, ಅಧಿಕ ವ್ಯಾಲಿಡಿಟಿ ಹೊಂದಿರುವ ಉಪಯುಕ್ತ ಆಫರ್​ಗಳನ್ನು ಪರಿಚಯಿಸುತ್ತಿದೆ. ಸದ್ಯ ಮತ್ತೊಂದು ಹೊಸ ಪ್ರಿಪೇಯ್ಡ್ ಪ್ಲಾನ್ (Prepaid Plan) ಅನ್ನು ಬಿಡುಗಡೆ ಮಾಡಲು ಬಿಎಸ್​ಎನ್​ಎಲ್ ಮುಂದಾಗಿದೆ.

ಬಿಎಸ್​ಎನ್​ಎಲ್ ಪರಿಚಯಿಸಲಿರುವ ಈ ಹೊಸ ಪ್ಲಾನ್​ನಲ್ಲಿ ನೀವು ಪ್ರತಿದಿನ ಬರೋಬ್ಬರಿ 5GB ಡೇಟಾ ಪ್ರಯೋಜನವನ್ನು ಪಡೆಯಬಹುದು. ಜೊತೆಗೆ 84 ದಿನಗಳ ವ್ಯಾಲಿಡಿಟಿ ಹೊಂದಿದೆ. ಇದರ ಬೆಲೆ ಕೇವಲ 599 ರೂ. ಆಗಿದೆ. ಈದ್ ವಿಶೇಷವಾಗಿ ಈ ಹೊಸ ಯೋಜನೆಯನ್ನು ಪರಿಚಯಿಸಲಾಗುತ್ತಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಬಿಎಸ್‌ಎನ್‌ಎಲ್‌ 599 ರೂ. ಡೇಟಾ ಯೋಜನೆ ವರ್ಕ್ ಫ್ರಂ ಹೋಮ್‌ಗೆ ಉತ್ತಮ ಎನಿಸಿದೆ. ರಾತ್ರಿ ವೇಳೆ ಅನಿಯಮಿತ ಡೇಟಾ ಬಳಕೆಯ ಸೌಲಭ್ಯ ನೀಡಲಾಗಿದ್ದು, ರಾತ್ರಿ 12AM ನಿಂದ ಬೆಳಗ್ಗೆ 5AM ವರೆಗೂ ಯಾವುದೇ ಹೆಚ್ಚುವರಿ ಟಾರೀಫ್‌ ಇಲ್ಲದೇ ಅನಿಯಮಿತ ಡೇಟಾ ಸಿಗಲಿದೆ.

ಇನ್ನೂ ಪ್ರತಿದಿನ 5GB ಡೇಟಾ ಬಳಕೆಯ ನಂತರ 40 Kbps ವೇಗದಲ್ಲಿ ಇಂಟರ್ನೆಟ್ ಮುಂದುವರೆಯಲಿದೆ. ಯಾವುದೇ ನೆಟ್‌ವರ್ಕ್‌ಗೆ ದಿನಕ್ಕೆ ಅನಿಯಮಿತ ವಾಯಿಸ್ ಕರೆ, 100 ಉಚಿತ ಎಸ್‌ಎಂಎಸ್, ಉಚಿತ ಬಿಎಸ್‌ಎನ್‌ಎಲ್ ಟ್ಯೂನ್‌ಗಳು ಮತ್ತು ಜಿಂಗ್ ಮ್ಯೂಸಿಕ್ ಅಪ್ಲಿಕೇಶನ್‌ಗೆ ಉಚಿತ ಒಟಿಟಿ ಚಂದಾದಾರಿಕೆಯನ್ನು ಪಡೆಯಬಹುದು. ಈ ಯೋಜನೆಯು 84 ದಿನಗಳ ವ್ಯಾಲಿಡಿಟಿ ಹೊಂದಿದೆ. ಬಿಎಸ್‌ಎನ್‌ಎಲ್‌ ಟೆಲಿಕಾಂನ ಹೊಸ 599ರೂ. ಡೇಟಾ ಯೋಜನೆಯು ಈದ್ ವಿಶೇಷದ ಕೊಡುಗೆಯಾಗಿದೆ. ಈ ಯೋಜನೆಯು ಜುಲೈ 21, 2021 ರಿಂದ ಗ್ರಾಹಕರಿಗೆ ಲಭ್ಯವಾಗಲಿದೆ ಎನ್ನಲಾಗಿದೆ.

ಇನ್ನೂ ಬಿಎಸ್​ಎನ್​ನಲ್ಲಿ 447 ರೂ. ಗಳ ಪ್ರಿಪೇಯ್ಡ್ ಪ್ಲಾನ್ ಕೂಡ ಇದ್ದು, ಇದು ಗ್ರಾಹಕರಿಗೆ 100GB ಡೇಟಾ ಆಫರ್ ಮಾಡುತ್ತಿದೆ. ಆದರೆ ಡೇಟಾ ಲಿಮಿಟ್ ಇರುವುದಿಲ್ಲ. ಅದರ ಜತೆಗೆ ದಿನಕ್ಕೆ 100 ಎಸ್ಎಮ್ಎಸ್ ನೀಡುತ್ತಿದೆ. ಅನಿಯಮಿತ ಕರೆ ಸೌಲಭ್ಯವು ಇದರಲ್ಲಿದೆ. 60 ದಿನಗಳ ವ್ಯಾಲಿಡಿಟಿ ಈ ಪ್ಲಾನ್ ಹೊಂದಿದೆ.

Redmi Note 10T 5G: ಭಾರತದಲ್ಲಿ ಅತಿ ಕಡಿಮೆ ಬೆಲೆಗೆ ಬಿಡುಗಡೆ ಆಯ್ತು ಭರ್ಜರಿ ಫೀಚರ್​ನ ರೆಡ್ನಿ ನೋಟ್ 10T ‘5G’ ಸ್ಮಾರ್ಟ್​ಫೋನ್

ನೀವುಹೋದ ಲಾಡ್ಜ್ ಅಥವಾ ಮಾಲ್​ನ ಟ್ರಯಲ್ ರೂಮ್​ನಲ್ಲಿ ಹಿಡನ್ ಕ್ಯಾಮೆರಾ ಇದೆಯೇ?: ಹೀಗೆ ಪತ್ತೆ ಹಚ್ಚಿ

(BSNL Rs 599 special plan to give 5GB Data per day and 84 days validity)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada