ಜಮ್ಮು ಮತ್ತು ಕಾಶ್ಮೀರದಲ್ಲಿ (Jammu & Kashmir) ಸಂಸ್ಕೃತ (Sanskrit) ಭಾಷೆಯನ್ನು ಜನಪ್ರಿಯಗೊಳಿಸಲು, ಚಕ್ರಗಳ ಮೇಲೆ ಶಿಕ್ಷಣ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ, ಅಲ್ಲಿ ಶಿಕ್ಷಕರು ಪ್ರಾಚೀನ ಭಾಷೆಯ ಬಗ್ಗೆ ಜನರಿಗೆ ಶಿಕ್ಷಣ ನೀಡಲು ಹಳ್ಳಿ-ಹಳ್ಳಿಯಲ್ಲಿ ಮನೆಗಳಿಗೆ ಭೇಟಿ ನೀಡುತ್ತಾರೆ. ಜಮ್ಮು ಮೂಲದ ಎನ್‌ಜಿಒ (NGO) ವೇದಿಕ್ ಸಂಸ್ಥಾನ ಟ್ರಸ್ಟ್‌ನಿಂದ “ಮೊಬೈಲ್ ಸಂಸ್ಕೃತ ಗುರುಕುಲ” ಎಂಬ ಯೋಜನೆಯು ಕಳೆದ ವರ್ಷ ಡಿಸೆಂಬರ್‌ನಲ್ಲಿ ಪ್ರಾರಂಭವಾಯಿತು. ಈ ಯೋಜನೆಯು ಜಮ್ಮುವಿನ ಹನ್ನೆರಡು ಕುಗ್ರಾಮಗಳನ್ನು ಒಳಗೊಂಡಿದೆ. “ಜ್ಞಾನದ ನಿಧಿಯನ್ನು ಜನರೊಂದಿಗೆ ಹಂಚಿಕೊಳ್ಳಲು ಮತ್ತು ವಿಶ್ವದ ಅತ್ಯಂತ ಹಳೆಯ ಭಾಷೆಗಳಲ್ಲಿ ಒಂದಾದ ಸಂಸ್ಕೃತದಲ್ಲಿ ಅನೌಪಚಾರಿಕ ಶಿಕ್ಷಣವನ್ನು ನೀಡಲು ಮುಂದಾಗಿದ್ದೇವೆ”, ಎಂದು ಟ್ರಸ್ಟ್ ತಿಳಿಸಿದೆ.
“ನಾವು ಸಂಸ್ಕೃತವನ್ನು ಕಲಿಸಲು ನಗರ ಮತ್ತು ಗ್ರಾಮೀಣ ಜನರನ್ನು ತಲುಪುತ್ತಿದ್ದೇವೆ, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಪ್ರತಿ ಮನೆಗೆ ತಲುಪುವ ಮೂಲಕ ಅರ್ಹ ಶಿಕ್ಷಕರಿಂದ ಎಲ್ಲರಿಗೂ ಸಂಸ್ಕೃತ ಶಿಕ್ಷಣವನ್ನು ನೀಡುವುದು ನಮ್ಮ ಉದ್ದೇಶವಾಗಿದೆ” ಎಂದು ಟ್ರಸ್ಟ್ ಅಧ್ಯಕ್ಷ ಮಹಂತ್ ರೋಹಿತ್ ‘ಶಾಸ್ತ್ರಿ ಟೈಮ್ಸ್ ನೌ’ ವರದಿಯಲ್ಲಿ ಹೇಳುತ್ತಾರೆ.
“ಸಂಚಾರಿ ಗುರುಕುಲವು ಹೆಚ್ಚಾಗಿ ಯುವಕರು ಮತ್ತು ಮಕ್ಕಳಿಗೆ ಸಂಸ್ಕೃತ ತರಗತಿಗಳನ್ನು ನಡೆಸಲು ಹಳ್ಳಿಯಿಂದ ಹಳ್ಳಿಗೆ ಚಲಿಸುತ್ತಿರುವಾಗ, ಪ್ರತಿಕ್ರಿಯೆಯು ಪ್ರೋತ್ಸಾಹದಾಯಕವಾಗಿದೆ. ಇತರ ಗ್ರಾಮಗಳು ಸಹ ನಮಗೆ ಕರೆ ಮಾಡಿ ಈ ಯೋಜನೆಯನ್ನು ಅವರ ಹಳ್ಳಿಗಳಿಗೆ ತರಬೇಕೆಂದು ವಿನಂತಿಸಿದ್ದಾರೆ. ಎಲ್ಲಾ ಜಾತಿ ಮತ್ತು ಧರ್ಮದ ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದನ್ನು ನೋಡಲು ನಮಗೆ ಸಂತೋಷವಾಗಿದೆ”, ಎಂದು ಶಾಸ್ತ್ರಿ ತಿಳಿಸಿದರು.
ಎನ್‌ಜಿಒ ಜಮ್ಮುವಿನ ಹನ್ನೆರಡು ಕುಗ್ರಾಮಗಳಿಗೆ ಭೇಟಿ ನೀಡಿದೆ ಮತ್ತು ಹೆಚ್ಚಾಗಿ ಹಳ್ಳಿಗಳಲ್ಲಿ ಶಾಲೆಗೆ ಹೋಗುವ ಮಕ್ಕಳು ಸಂಸ್ಕೃತ ಕಲಿಯಲು ಮುಂದೆ ಬಂದಿದ್ದಾರೆ. ಹಂತ ಹಂತವಾಗಿ ಹೆಚ್ಚಿನ ವಿದ್ಯಾರ್ಥಿಗಳಿಗೆ ಸಂಸ್ಕೃತದಲ್ಲಿ ಶಿಕ್ಷಣ ನೀಡುವುದು ಇವರ ಗುರಿಯಾಗಿದೆ. ಎರಡು ವ್ಯಾನ್‌ಗಳು ಮತ್ತು 10 ಶಿಕ್ಷಕರು ಪ್ರತಿ ಗ್ರಾಮ ಪಂಚಾಯಿತಿಯಲ್ಲಿ 4-5 ದಿನಗಳನ್ನು ಕಳೆಯುತ್ತಾರೆ ಮತ್ತು ಕೆಲವೊಂದು ಶಾಲೆಗಳಲ್ಲೂ ಕೂಡ ಪಾಠ ಮಾಡುತ್ತಾರೆ. ಮೊದಲು ಜಮ್ಮುವಿನ ವ್ಯಾಪಾರ ಸಮುದಾಯಕ್ಕೆ ಸಂಸ್ಕೃತವನ್ನು ಕಲಿಸಲು ಅವರು ತರಗತಿಗಳನ್ನು ನಡೆಸುತ್ತಿದ್ದರು ಎಂದು ಶಾಸ್ತ್ರಿ ಅವರು ಹೇಳಿದ್ದಾರೆ.
“ಜನರು ಈ ಪರಿಕಲ್ಪನೆಯ ಬಗ್ಗೆ ಉತ್ಸುಕರಾಗಿದ್ದಾರೆ . ಶಿಕ್ಷಣವನ್ನು ಪಡೆಯಲು ಸ್ವಯಂಪ್ರೇರಣೆಯಿಂದ ಮುಂದೆ ಬರುತ್ತಿದ್ದಾರೆ. ನಾವು ಜನರಿಗೆ ಉಚಿತ ಸಂಸ್ಕೃತ ಪುಸ್ತಕಗಳನ್ನು ವಿತರಿಸುತ್ತಿದ್ದೇವೆ” ಎಂದು ಶಾತ್ರಿ ಹೇಳುತ್ತಾರೆ.
11 ನೇ ತರಗತಿಯ ವಿದ್ಯಾರ್ಥಿಯೊಬ್ಬರು ‘ಮೊಬೈಲ್ ಗುರುಕುಲ’ ಬಗ್ಗೆ ಮಾತನಾಡುವಾಗ,
“ಶಾಲೆ ಮುಗಿಸಿ ಮನೆಗೆ ಹೋಗುತ್ತಿದ್ದ ನಾನು ಈ ‘ಮೊಬೈಲ್ ಸಂಸ್ಕೃತ ಗುರುಕುಲ’ ನೋಡಿದೆ. ನನಗೂ ಸಂಸ್ಕೃತ ಭಾಷೆ ಕಲಿಯಬೇಕು ಎಂದನಿಸಿತು, ಅಲ್ಲಿಂದ ಪುಸ್ತಕವನ್ನು ಪಡೆದುಕೊಂಡೆ. ನಾನು 11ನೇ ತರಗತಿ ಓದುತ್ತಿರುವ ವಿದ್ಯಾರ್ಥಿ, ಇದನ್ನೂ ನೋಡಿದಾಗ ನಾವೂ ಕಲಿಯಬೇಕು ಅನ್ನಿಸುತ್ತದೆ. ಸಂಸ್ಕೃತವು ಇಂಗ್ಲಿಷ್‌ನಂತೆ, ” ಎಂದು ಹೇಳಿದರು.
ಇದನ್ನೂ ಓದಿ: ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಕಾಪಾಡಲು ಕ್ರಮಗಳನ್ನು ಪರಿಶೀಲಿಸಿದ ಧರ್ಮೇಂದ್ರ ಪ್ರಧಾನ್
ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಮೊಬೈಲ್ ಸಂಸ್ಕೃತ ಗುರುಕುಲದ ಉದ್ಘಾಟನಾ ಸಮಾರಂಭದಲ್ಲಿ, ಸಂಸ್ಕೃತವು ಧಾರ್ಮಿಕ ಪಠ್ಯಗಳಿಗೆ ಸೀಮಿತವಾಗಿಲ್ಲ ಮತ್ತು ಪ್ರಾಚೀನ ಭಾರತದ ಸಂಪೂರ್ಣ ಜ್ಞಾನ ರಚನೆಯನ್ನು ನೀಡುತ್ತದೆ ಎಂದು ಹೇಳಿದರು, ಇದು ವಿಜ್ಞಾನಿಗಳು ಮತ್ತು ವೈದ್ಯಕೀಯ, ಸಸ್ಯಶಾಸ್ತ್ರ ಮತ್ತು ಗಣಿತಶಾಸ್ತ್ರ ತಜ್ಞರ ಶ್ರೇಷ್ಠ ಕೃತಿಗಳನ್ನು ಒಳಗೊಂಡಿದೆ. ಸಂಸ್ಕೃತ ಭಾಷೆ ಮತ್ತು ಪ್ರಾಚೀನ ಋಷಿಗಳ ಸಂದೇಶವನ್ನು ಸಂರಕ್ಷಿಸಲು, ಅಭಿವೃದ್ಧಿಪಡಿಸಲು ಮತ್ತು ಪ್ರಚಾರ ಮಾಡಲು ಟ್ರಸ್ಟ್ ಅನ್ನು ಶ್ಲಾಘಿಸಿದ ಸಿನ್ಹಾ, ಸಂಸ್ಕೃತವನ್ನು ಜನಪ್ರಿಯಗೊಳಿಸಲು ಹೊಂದಿಕೊಳ್ಳುವ ಮತ್ತು ಅನೌಪಚಾರಿಕ ವಿಧಾನದೊಂದಿಗೆ ಒಟ್ಟಾಗಿ ಕೆಲಸ ಮಾಡಲು ಕರೆ ನೀಡಿದರು.