CBSE Board: ಏಪ್ರಿಲ್ 1 ರ ಮೊದಲು ತರಗತಿಗಳನ್ನು ಪ್ರಾರಂಭಿಸಬಾರದೆಂದು ಶಾಲೆಗಳಿಗೆ ಎಚ್ಚರಿಕೆ ನೀಡಿದ CBSE ಬೋರ್ಡ್
ತರಗತಿಗಳನ್ನು ಪೂರ್ವಭಾವಿಯಾಗಿ ನಡೆಸುವುದರಿಂದ ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳಿಗೆ ಸಾಕಷ್ಟು ಸಮಯವನ್ನು ನೀಡುವುದಿಲ್ಲ ಎಂದು ಮಂಡಳಿಯು ಗಮನಿಸಿದೆ.
ಏಪ್ರಿಲ್ 1 ರ ಮೊದಲು ತರಗತಿಗಳನ್ನು ಪ್ರಾರಂಭಿಸದಂತೆ ಸಿಬಿಎಸ್‌ಇ ಬೋರ್ಡ್ ಶಾಲೆಗಳಿಗೆ ಎಚ್ಚರಿಕೆ ನೀಡಿದೆ, ಇದು ವಿದ್ಯಾರ್ಥಿಗಳಲ್ಲಿ ಆತಂಕ ಮತ್ತು ಒತ್ತಡದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಹೇಳಿದೆ. ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಎಚ್ಚರಿಕೆ ನೀಡುವ ಮೊದಲೇ ಹಲವಾರು ಶಾಲೆಗಳು ವಿಶೇಷವಾಗಿ 10 ಮತ್ತು 12 ನೇ ತರಗತಿಗಳಿಗೆ ತಮ್ಮ ಶೈಕ್ಷಣಿಕ ಅವಧಿಯನ್ನು ಪ್ರಾರಂಭಿಸಿದೆ. ಶೈಕ್ಷಣಿಕ ಅವಧಿಯನ್ನು ಪೂರ್ವಭಾವಿಯಾಗಿ ಪ್ರಾರಂಭಿಸುವುದರಿಂದ ವಿದ್ಯಾರ್ಥಿಗಳಿಗೆ ಜೀವನ ಕೌಶಲ್ಯ, ಮೌಲ್ಯ ಶಿಕ್ಷಣ, ಆರೋಗ್ಯ ಮತ್ತು ದೈಹಿಕ ಶಿಕ್ಷಣ, ಕೆಲಸದ ಶಿಕ್ಷಣ ಮತ್ತು ಸಮುದಾಯ ಸೇವೆಯಂತಹ ಪಠ್ಯೇತರ ಚಟುವಟಿಕೆಗಳಿಗೆ ಸಾಕಷ್ಟು ಸಮಯವನ್ನು ನೀಡಲಾಗುವುದಿಲ್ಲ ಎಂದು ಮಂಡಳಿಯು ಗಮನಿಸಿದೆ.
“ಶಿಕ್ಷಣದಷ್ಟೆ ಈ ಎಲ್ಲಾ ಚಟುವಟಿಕೆಗಳು ವಿದ್ಯಾರ್ಥಿಗಳ ಜೀವನದಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಆದ್ದರಿಂದ ಮಂಡಳಿಯೊಂದಿಗೆ ಸಂಯೋಜಿತವಾಗಿರುವ ಶಾಲೆಗಳ ಪ್ರಾಂಶುಪಾಲರು ಮತ್ತು ಸಂಸ್ಥೆಗಳ ಮುಖ್ಯಸ್ಥರು, ನಿಗದಿತ ಸಮಯಕ್ಕಿಂತ ಮೊದಲು ಶೈಕ್ಷಣಿಕ ಅವಧಿಗಳನ್ನು ಪ್ರಾರಂಭಿಸಬಾರದು. ಶಾಲೆಗಳಿಗೆ ಏಪ್ರಿಲ್ 1 ರಿಂದ ಮಾರ್ಚ್ 31 ರವರೆಗಿನ ಶೈಕ್ಷಣಿಕ ಅವಧಿಯನ್ನು ಕಟ್ಟುನಿಟ್ಟಾಗಿ ಅನುಸರಿಸಲು ಸೂಚಿಸಲಾಗಿದೆ”, ಎಂದು ತ್ರಿಪಾಠಿ ಹೇಳಿದರು.
“ಕೆಲವು ಸಂಯೋಜಿತ ಶಾಲೆಗಳು ತಮ್ಮ ಶೈಕ್ಷಣಿಕ ಅವಧಿಯನ್ನು ವರ್ಷದ ಆರಂಭದಲ್ಲಿಯೇ ಪ್ರಾರಂಭಿಸಿರುವುದು ಗಮನಕ್ಕೆ ಬಂದಿದೆ. ಕಡಿಮೆ ಅವಧಿಯಲ್ಲಿ ಸಂಪೂರ್ಣ ವರ್ಷದ ಕೋರ್ಸ್ ಕೆಲಸವನ್ನು ಪೂರ್ಣಗೊಳಿಸಲು ಪ್ರಯತ್ನಿಸುವುದು ವಿದ್ಯಾರ್ಥಿಗಳಿಗೆ ಹೆಚ್ಚಿನ ಅಪಾಯವನ್ನುಂಟುಮಾಡುತ್ತದೆ.. ಕಲಿಕೆಯ ವೇಗವು ಆತಂಕ ಮತ್ತು ಒತ್ತಡಕ್ಕೆ ಕಾರಣವಾಗುತ್ತದೆ” ಎಂದು CBSE ಕಾರ್ಯದರ್ಶಿ ಅನುರಾಗ್ ತ್ರಿಪಾಠಿ ಅಧಿಕೃತ ಆದೇಶದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ರಾಜ್ಯದ 7 ವಿಶ್ವವಿದ್ಯಾಲಯಗಳಿಗೆ ನೂತನ ಕುಲಪತಿಗಳ ನೇಮಕ: ರಾಜ್ಯ ಸರ್ಕಾರ ಆದೇಶ
CBSE ಪ್ರಸ್ತುತ 10 ಮತ್ತು 12 ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆಗಳನ್ನು ನಡೆಸುತ್ತಿದೆ. ಎರಡೂ ತರಗತಿಗಳಿಗೆ ಪರೀಕ್ಷೆಗಳು ಫೆಬ್ರವರಿ 15 ರಂದು ಪ್ರಾರಂಭವಾಯಿತು. 10 ನೇ ತರಗತಿಗೆ ಮಾರ್ಚ್ 21 ರಂದು ಮತ್ತು 12 ನೇ ತರಗತಿಗೆ ಏಪ್ರಿಲ್ 5 ರಂದು ಮುಕ್ತಾಯಗೊಳ್ಳಲಿದೆ
CBSE ಫೌಂಡೇಶನಲ್ ಹಂತ – 2022 ರ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ ಅನುಷ್ಠಾನವನ್ನು ಘೋಷಿಸಿತು. “CBSE ಶಾಲೆಗಳಲ್ಲಿ 2023-24ರ ಅವಧಿಯಲ್ಲಿ ನರ್ಸರಿಯಿಂದ II ನೇ ತರಗತಿಯವರೆಗೆ CBSE ಫೌಂಡೇಶನಲ್ ಹಂವನ್ನು (3-8 ವರ್ಷ ವಯಸ್ಸಿನ ವಿದ್ಯಾರ್ಥಿಗಳಿಗೆ) ಪರಿಚಯಿಸಲಾಗುವುದು.” ಎಂದು ಅಧಿಕೃತ CBSE ಅಧಿಸೂಚನೆ ತಿಳಿಸಿದೆ
Published On - 11:01 am, Tue, 21 March 23