ಐಸಿಎಐ ಸಿಎ ಫಲಿತಾಂಶ 2023 ಶೀಘ್ರದಲ್ಲೇ ಪ್ರಕಟ, ಪರಿಶೀಲಿಸುವುದು ಹೇಗೆ?

|

Updated on: Jul 31, 2023 | 12:27 PM

ICAI CA ಫೌಂಡೇಶನ್ ಫಲಿತಾಂಶ 2023: ICAI ಫಲಿತಾಂಶ ಶೀಘ್ರದಲ್ಲೇ ಪ್ರಕಟವಾಗುವ ಸಾಧ್ಯತೆ ಇದೆ. ಫಲಿತಾಂಶವನ್ನು ಪರಿಶೀಲಿಸುವುದು ಹೇಗೆ? ಇಲ್ಲಿದೆ ಮಾಹಿತಿ

ಐಸಿಎಐ ಸಿಎ ಫಲಿತಾಂಶ 2023 ಶೀಘ್ರದಲ್ಲೇ ಪ್ರಕಟ, ಪರಿಶೀಲಿಸುವುದು ಹೇಗೆ?
ಸಾಂದರ್ಭಿಕ ಚಿತ್ರ
Follow us on

ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ), ಚಾರ್ಟರ್ಡ್ ಅಕೌಂಟೆನ್ಸಿ 2023 ಪರೀಕ್ಷಾ ಫಲಿತಾಂಶವನ್ನು ಶೀಘ್ರದಲ್ಲೇ ಪ್ರಕಟ ಮಾಡುವ ಸಾಧ್ಯತೆ ಇದೆ. ICAI CA ಫಲಿತಾಂಶದ ಲಿಂಕ್​​ನ್ನು ಅಧಿಕೃತದಲ್ಲಿ ವೆಬ್​ಸೈಟ್​​ನಲ್ಲಿ (websiteicai.org) ಪ್ರಕಟ ಮಾಡಲಾಗವುದು. ಇನ್ನು ಫಲಿತಾಂಶ ಪ್ರಕಟ ಮಾಡುವ ದಿನಾಂಕ ಅಥವಾ ಸಮಯವನ್ನು ತಿಳಿಸಿಲ್ಲ. ಅಭ್ಯರ್ಥಿಗಳು ಫಲಿತಾಂಶ ನೋಡಲು ಅಧಿಕೃತ ವೆಬ್​​ಸೈಟ್​ websiteicai.org ಲಾಗಿನ್ ಆಗಿ, ಅಲ್ಲಿ ಕೇಳಿರುವ ದಾಖಲೆ ನೀಡಿ, ತಮ್ಮ ಫಲಿತಾಂಶವನ್ನು ನೋಡಬಹುದು.

CA ಫಲಿತಾಂಶವನ್ನು ಪ್ರಕಟ ಮಾಡುವುದರ ಜತೆಗೆ ICAI ಉತ್ತರ ಕೀಗಳನ್ನು ಪ್ರಕಟ ಮಾಡಲಿದೆ. ಇದರ ಜತೆಗೆ ICAI ಫಲಿತಾಂಶದ ದಿನಾಂಕವನ್ನು ಆ ದಿನದಂದೆ ತಿಳಿಸಲಿದೆ ಎಂದು ಹೇಳಲಾಗಿದೆ. ಫಲಿತಾಂಶ ನೋಡಲು ICAI ವೆಬ್​ಸೈಟ್​​​ನಲ್ಲಿ ನೋಂದಾಯಿತ ಐಡಿ ಸಂಖ್ಯೆ, ಮೊಬೈಲ್​​ ಸಂಖ್ಯೆ ನೀಡಬೇಕು, ಎಸ್​ಎಂಎಸ್​​​ ಅಥವಾ ಇಮೇಲ್​​​ ಮೂಲಕವೂ ಫಲಿತಾಂಶವನ್ನು ಪಡೆಯುವ ಆಯ್ಕೆಯನ್ನು ಅಭ್ಯರ್ಥಿಗಳಿಗೆ ನೀಡಿದೆ.

ICAI CA ಫಲಿತಾಂಶ 2023: ಫಲಿತಾಂಶ ಪರಿಶೀಲಿಸುವುದು ಹೇಗೆ?

ಹಂತ 1- ಅಧಿಕೃತ ವೆಬ್​​ಸೈಟ್​​ icai.org ಗೆ ಭೇಟಿ ನೀಡಿ .

ಹಂತ 2 – ಮುಖಪುಟದಲ್ಲಿರುವ ಫಲಿತಾಂಶ ಪುಟದ ಮೇಲೆ ಕ್ಲಿಕ್ ಮಾಡಿ.

ಹಂತ 3 – CA Foundation Result 2023 ಮೇಲೆ ಕ್ಲಿಕ್ ಮಾಡಿ .

ಹಂತ 4- ಅಭ್ಯರ್ಥಿಗಳಿಗೆ ನೀಡಿರುವ ಪಿನ್​​ ಅಥವಾ ನೋಂದಣಿ ಸಂಖ್ಯೆಯನ್ನು ನಮೂದಿಸಿ.

ಹಂತ 5 – ಸಲ್ಲಿಸು ಮೇಲೆ ಕ್ಲಿಕ್ ಮಾಡಿ.

ಹಂತ 6 – ICAI CA ಫಲಿತಾಂಶ ಪರದೆ ಮೇಲೆ ಕಾಣಿಸುತ್ತದೆ.

ಇನ್ನೂ ನಿಮ್ಮ ದಾಖಲೆಗೆ ಈ ಫಲಿತಾಂಶ ಬೇಕು ಎಂದು ಡೌನ್​​ಲೋಡ್​ ಮಾಡಿಕೊಂಡು ಪ್ರಿಂಟ್​​ ತೆಗೆಯಬಹುದು.

ಇದನ್ನೂ ಓದಿ:ಐಸಿಎಐ ಸಿಎ ಮಧ್ಯಂತರ, ಅಂತಿಮ ಪರೀಕ್ಷೆಗಳ ಫಲಿತಾಂಶ ಪ್ರಕಟ

ICAI CA ಫಲಿತಾಂಶ 2023: ಫಲಿತಾಂಶವನ್ನು SMS ಮೂಲಕ ಪರಿಶೀಲಿಸುವುದು ಹೇಗೆ?

ಹಂತ 1 – ನಿಮ್ಮ ಮೊಬೈಲ್​​ನಲ್ಲಿ SMS ಅಪ್ಲಿಕೇಶನ್​​ಗೆ ಹೋಗಿ.

ಹಂತ 2 – CAFND (ಸ್ಪೇಸ್)XXXXXX ಮತ್ತು ಅಭ್ಯರ್ಥಿಯ 6-ಅಂಕಿಯ ರೋಲ್ ನಂಬರ್​ ನಮೂದಿಸಿ

ಹಂತ 3- ನಂತರ 57575ಗೆ SMS ಕಳುಹಿಸಿ

ಹಂತ 4 – ನಂತರ ಅಲ್ಲಿಂದ ನಿಮ್ಮ ಮೊಬೈಲ್​​ ಸಂಖ್ಯೆಗೆ ಫಲಿತಾಂಶ ಬರುತ್ತದೆ.

ಮತ್ತಷ್ಟು ಶೈಕ್ಷಣಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ