JEE Main 2022: ಈ ಬಾರಿಯೂ ಜೆಇಇ ಮುಖ್ಯ ಪರೀಕ್ಷೆ ಮುಂದೂಡುವ ಸಾಧ್ಯತೆ; ಶೀಘ್ರವೇ ದಿನಾಂಕ ಪ್ರಕಟ, ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ ನೋಡಿ

ಕಳೆದ ಬಾರಿ ಕೊವಿಡ್ 19 ಸಾಂಕ್ರಾಮಿಕ ತೀವ್ರತೆ ಜಾಸ್ತಿ ಇರುವ ಕಾರಣ ಜೆಇಇ ಪರೀಕ್ಷೆಯನ್ನು ನಾಲ್ಕು ಸೆಷನ್ಸ್​ಗಳಲ್ಲಿ ನಡೆಸಲಾಗಿತ್ತು. ಮೊದಲ ಹಂತ ಮತ್ತು ಎರಡನೇ ಹಂತ ಬೇಗನೇ ಮುಗಿದು ಹೋಗಿದ್ದರೂ, ಉಳಿದೆರಡು ಹಂತದ ಪರೀಕ್ಷೆ ನಡೆಸಲು ಕೊವಿಡ್ 2ನೇ ಅಲೆ ಸಮಸ್ಯೆ ತಂದೊಡ್ಡಿತ್ತು.

JEE Main 2022: ಈ ಬಾರಿಯೂ ಜೆಇಇ ಮುಖ್ಯ ಪರೀಕ್ಷೆ ಮುಂದೂಡುವ ಸಾಧ್ಯತೆ; ಶೀಘ್ರವೇ ದಿನಾಂಕ ಪ್ರಕಟ, ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ ನೋಡಿ
ಸಾಂಕೇತಿಕ ಚಿತ್ರ
Updated By: Lakshmi Hegde

Updated on: Jan 01, 2022 | 6:14 PM

ಕೊರೊನಾ ಬಂದಾಗಿನಿಂದಲೂ ಬಹುತೇಕ ಪರೀಕ್ಷೆಗಳು ನಡೆಯಲು ವಿಳಂಬವಾಗುತ್ತಲೇ ಇವೆ. ಅದರಲ್ಲೂ ಕಳೆದ ವರ್ಷ ಕೂಡ ಜೆಇಇ ಮುಖ್ಯ ಪರೀಕ್ಷೆ (JEE Main Exam) ಹಲವು ಬಾರಿ ಮುಂದೂಡಲ್ಪಟ್ಟಿತ್ತು. ಹಾಗೇ, ಈ ಬಾರಿಯೂ ಸಹ ರಾಷ್ಟ್ರಮಟ್ಟದ ಇಂಜನಿಯರಿಂಗ್​ ಪ್ರವೇಶ ಮುಖ್ಯ ಪರೀಕ್ಷೆ (JEE Main 2022) ಫೆಬ್ರವರಿ ತಿಂಗಳ ಬದಲು ಮಾರ್ಚ್​ನಲ್ಲಿ ನಡೆಯಬಹುದು ಎಂದು ಹೇಳಲಾಗಿದೆ. ಆದರೆ ಈ ಸಲಕ್ಕೆ ಕಾರಣ ಕೊರೊನಾ ಅಲ್ಲ, ಬದಲಿಗೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳು.

2022ರ ಜೆಇಇ ಮುಖ್ಯ ಪರೀಕ್ಷೆಯ ದಿನಾಂಕವನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ಶೀಘ್ರವೇ ಘೋಷಣೆ ಮಾಡಲಿದೆ. ಹಾಗೇ, ಈ ಸಲವೂ ಕೂಡ ಮಾರ್ಚ್​, ಏಪ್ರಿಲ್​, ಮೇ, ಜೂನ್​ ತಿಂಗಳಲ್ಲಿ (4 ಸೆಷನ್ಸ್​)ಪರೀಕ್ಷೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಕಳೆದ ಬಾರಿ ಕೊವಿಡ್ 19 ಸಾಂಕ್ರಾಮಿಕ ತೀವ್ರತೆ ಜಾಸ್ತಿ ಇರುವ ಕಾರಣ ಜೆಇಇ ಪರೀಕ್ಷೆಯನ್ನು ನಾಲ್ಕು ಸೆಷನ್ಸ್​ಗಳಲ್ಲಿ ನಡೆಸಲಾಗಿತ್ತು. ಮೊದಲ ಹಂತ ಮತ್ತು ಎರಡನೇ ಹಂತ ಬೇಗನೇ ಮುಗಿದು ಹೋಗಿದ್ದರೂ, ಉಳಿದೆರಡು ಹಂತದ ಪರೀಕ್ಷೆ ನಡೆಸಲು ಕೊವಿಡ್ 2ನೇ ಅಲೆ ಸಮಸ್ಯೆ ತಂದೊಡ್ಡಿತ್ತು. ಇನ್ನುಳಿದಂತೆ ಹಳೇ ನಿಯಮಗಳೇ ಇಲ್ಲೂ ಅನ್ವಯ ಆಗುತ್ತವೆ. ಜೆಇಇ ಮುಖ್ಯ ಮತ್ತು ಇಂಜಿನಿಯರಿಂಗ್​ ಪ್ರವೇಶ ಪರೀಕ್ಷೆಯಲ್ಲಿ ಉನ್ನತ ಶ್ರೇಣಿ ಪಡೆಯುವ ಅಭ್ಯರ್ಥಿಗಳು ಐಐಟಿ (Indian Institutes of Technology) ಪ್ರವೇಶಕ್ಕೆ ಅರ್ಹರಾಗುತ್ತಾರೆ.  ಇನ್ನು 2023ರ ಜೆಇಇ ಅಭ್ಯರ್ಥಿಗಳಿಗಾಗಿ ಜಂಟಿ ಪ್ರವೇಶ ಮಂಡಳಿ ಪಠ್ಯಕ್ರಮಗಳಲ್ಲಿ ಕೆಲವು ಬದಲಾವಣೆ ಮಾಡಿದೆ. ಈ ಹೊಸ ಪಠ್ಯಕ್ರಮ, ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಆ್ಯಂಡ್​ ಟ್ರೇನಿಂಗ್​ ಮತ್ತು ಜೆಇಇ ಮುಖ್ಯ ಪಠ್ಯಕ್ರಮಕ್ಕೆ ತುಂಬ ಹೋಲಿಕೆಯಿರುತ್ತದೆ ಎಂದು ಹೇಳಲಾಗಿದೆ. ಹಾಗೇ, ಜೆಇಇ ಅಡ್ವಾನ್ಸ್ಡ್ ಗೆ​ 2022ರ ಪ್ರಠ್ಯಕ್ರಮ ಮುಂದುವರಿಯುತ್ತದೆ.

ಜೆಇಇ ಮುಖ್ಯ ಪರೀಕ್ಷೆ ಅರ್ಜಿ ತುಂಬುವುದು ಹೇಗೆ?
1. jeemain.nta.nic.in ವೆಬ್​ಸೈಟ್​ಗೆ ಲಾಗಿನ್ ಆಗಿ
2. ಅದರಲ್ಲಿ ಜೆಇಇ ಮುಖ್ಯ ಅರ್ಜಿ ಫಾರ್ಮ್​ 2022ರ ನೋಂದಣಿ ಲಿಂಕ್​ನ್ನು ಆಯ್ಕೆ ಮಾಡಿ
3. ಅದಾರ ಮೇಲೆ ಅಲ್ಲಿ ನಿಮ್ಮ ವಿವರಗಳು, ಕ್ವಾಲಿಫಿಕೇಶನ್​, ಹೆಸರು, ವಿಳಾಸಿ ಇತ್ಯಾದಿಗಳನ್ನು ತುಂಬಿ
4.  ನಂತರ ನಿಮ್ಮ ಫೋಟೋವನ್ನು ಸ್ಕ್ಯಾನ್​ ಮಾಡಿ ಅಟ್ಯಾಚ್​ ಮಾಡಿ ಮತ್ತು ಅಗತ್ಯ ದಾಖಲೆಗಳನ್ನು ನೀಡಿ
5.  ದಾಖಲೆಯಲ್ಲಿ ಕಾಣುವ ವಿವರಗಳನ್ನೆಲ್ಲ ತುಂಬಿ, ಅದನ್ನು ಸಬ್​ಮಿಟ್ ಮಾಡಿ
6. ಆನ್​ಲೈನ್ ಮೂಲಕ ಶುಲ್ಕ ಪಾವತಿಸಿ

ಇದನ್ನೂ ಓದಿ: GST Collection: ಡಿಸೆಂಬರ್ ತಿಂಗಳಲ್ಲಿ 1.29 ಲಕ್ಷ ಕೋಟಿ ರೂಪಾಯಿ ಜಿಎಸ್​ಟಿ ಸಂಗ್ರಹ