JEE Main Answer Key 2023: JEE ತಾತ್ಕಾಲಿಕ ಕೀ ಉತ್ತರ ಆಕ್ಷೇಪಣೆ ಸಲ್ಲಿಸಲು ಇಂದೇ ಕೊನೆಯ ದಿನ

ಜೆಇಇ ಪ್ರಮುಖ ಪರೀಕ್ಷೆ 2023ರ ತಾತ್ಕಾಲಿಕ ಕೀ ಉತ್ತರಕ್ಕೆ ಆಕ್ಷೇಪಣೆ ಸಲ್ಲಿಸಲು ಇಂದು (ಏ.21) ಕೊನೆಯ ದಿನ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಹೇಳಿದೆ.

JEE Main Answer Key 2023: JEE ತಾತ್ಕಾಲಿಕ  ಕೀ ಉತ್ತರ ಆಕ್ಷೇಪಣೆ ಸಲ್ಲಿಸಲು ಇಂದೇ ಕೊನೆಯ ದಿನ
Tv9 kannada

Updated on: Apr 21, 2023 | 3:30 PM

ಜೆಇಇ (Joint Entrance Examination) ಪ್ರಮುಖ ಪರೀಕ್ಷೆ 2023ರ ತಾತ್ಕಾಲಿಕ ಕೀ ಉತ್ತರಕ್ಕೆ ಆಕ್ಷೇಪಣೆ ಸಲ್ಲಿಸಲು ಇಂದು (ಏ.21) ಕೊನೆಯ ದಿನ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಹೇಳಿದೆ. ಈ ಬಗ್ಗೆ ಆಕ್ಷೇಪಣೆ ಮಾಡಲು ಬಯಸುವವರು JEE ಅಧಿಕೃತ ವೆಬ್‌ಸೈಟ್‌ jeemain.nta.nic.inಗೆ ಭೇಟಿ ನೀಡಿ ಆಕ್ಷೇಪ ಸಲ್ಲಿಸಬಹುದು. ಕೀ ಉತ್ತರಕ್ಕೆ ಆಕ್ಷೇಪಣೆ ಸಲ್ಲಿಸುವ ಪ್ರಕ್ರಿಯೆ ಏಪ್ರಿಲ್ 19ರಂದು ಆರಂಭವಾಗಿದೆ.

ಜೆಇಇ ನೀಡದ ತಾತ್ಕಾಲಿಕ ಕೀ ಉತ್ತರದಿಂದ ತೃಪ್ತರಾಗದ ವಿದ್ಯಾರ್ಥಿಗಳು ಪ್ರತಿ ಪ್ರಶ್ನೆಗೆ 200 ರೂ ಪಾವತಿಸಿ ಆಕ್ಷೇಪಣೆ ಸಲ್ಲಿಸಬಹುದು. ಒಂದು ವೇಳೆ ಇದರಲ್ಲಿ ಆಕ್ಷೇಪ ಇದ್ದರೆ ಖಂಡಿತ ಈ ಹಣವನ್ನು ಮರುಪಾವತಿ ಮಾಡಲಾಗುವುದು ಎಂದು ಹೇಳಿದೆ. JEEಯ 2 ಪರೀಕ್ಷೆಯ ಆಧಾರದ ಮೇಲೆ ಅಭ್ಯರ್ಥಿಗಳ ಕೀ ಉತ್ತರಗಳನ್ನು NTA (National Testing Agency) ಬಿಡುಗಡೆ ಮಾಡಿದೆ. ಪರೀಕ್ಷೆಯು ಏಪ್ರಿಲ್ 6, 8, 10, 11 12, 13 ಮತ್ತು 15 ರಂದು ನಡೆಯಿತು. ಡಿಜಿಟಲ್​​ ವ್ಯವಸ್ಥೆಯಲ್ಲಿ JEE ಪರೀಕ್ಷೆಯನ್ನು ನಡೆಸಲಾಗಿತ್ತು.

NTA ಅಧಿಸೂಚನೆಯಲ್ಲಿ ತಿಳಿಸಿರುವಂತೆ ಅಭ್ಯರ್ಥಿಗಳು ಸಲ್ಲಿಸಿದ ಕೀ ಉತ್ತರ ಆಕ್ಷೇಪವನ್ನು ತಜ್ಞರ ಸಮಿತಿಯು ಪರಿಶೀಲಿಸುತ್ತದೆ. ಯಾವುದೇ ಅಭ್ಯರ್ಥಿಯ ಆಕ್ಷೇಪ ಸರಿ ಎಂದು ಕಂಡುಬಂದರೆ, ಕೀ ಉತ್ತರವನ್ನು ಪರಿಷ್ಕರಿಸಲಾಗುತ್ತದೆ ಮತ್ತು ಅದಕ್ಕೆ ಅನುಗುಣವಾಗಿ ಎಲ್ಲಾ ಅಭ್ಯರ್ಥಿಗಳ ಪ್ರತಿಕ್ರಿಯೆಯನ್ನು ಆಹ್ವಾನಿಸಲಾಗುತ್ತದೆ.

ಇದನ್ನೂ ಓದಿ: JEE Exam Results: ಜೆಇಇ ಮೇನ್ ಪತ್ರಿಕೆ 2 ಫಲಿತಾಂಶ ಪ್ರಕಟ; ಇಲ್ಲಿದೆ ಸಂಪೂರ್ಣ ಮಾಹಿತಿ

JEE ಕೀ ಉತ್ತರ ಆಕ್ಷೇಪ ಸಲ್ಲಿಸುವುದು ಹೇಗೆ?

1. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ– jeemain.nta.nic.in.

2. ಮುಖಪುಟದಲ್ಲಿ, ‘JEE ಮುಖ್ಯ 2023 ಸೆಷನ್ 2 ಕೀ ಉತ್ತರ ಚಾಲೆಂಜ್’ ಲಿಂಕ್ ಅನ್ನು ಕ್ಲಿಕ್ ಮಾಡಿ.

3. ನಿಮ್ಮ ಅಪ್ಲಿಕೇಶನ್ ಸಂಖ್ಯೆ ಮತ್ತು ಜನ್ಮ ದಿನಾಂಕದೊಂದಿಗೆ ಲಾಗ್ ಇನ್ ಮಾಡಿ.

4. ಜೆಇಇ ಮುಖ್ಯ ತಾತ್ಕಾಲಿಕ ಕೀ ಉತ್ತರಗಳೊಂದಿಗೆ ನಿಮ್ಮ ಪ್ರತಿಕ್ರಿಯೆಗಳನ್ನು ಪರಿಶೀಲಿಸಿ.

5. challenge ಟ್ಯಾಬ್ ಅನ್ನು ಆಯ್ಕೆ ಮಾಡಿ ಮತ್ತು ನೀವು ಆಕ್ಷೇಪ ವ್ಯಕ್ತಪಡಿಸಲು ಬಯಸುವ ಪ್ರಶ್ನೆ ಐಡಿಯನ್ನು ಗುರುತಿಸಿ.

6. ನಿಮ್ಮ ಕುಂದುಕೊರತೆಗಳನ್ನು ಸಲ್ಲಿಸಿ ಮತ್ತು ಡೆಬಿಟ್/ಕ್ರೆಡಿಟ್ ಕಾರ್ಡ್/ನೆಟ್ ಬ್ಯಾಂಕಿಂಗ್ ಮೂಲಕ ಆನ್‌ಲೈನ್‌ನಲ್ಲಿ 200 ರೂ. ಸಂಸ್ಕರಣಾ ಶುಲ್ಕವನ್ನು ಪಾವತಿಸಿ.

ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 3:29 pm, Fri, 21 April 23