JEE MAIN Session 2 Exams 2023 exam tips
Image Credit source: Jagran Josh
ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ, NTA, JEE (Main) 2023 ಸೆಷನ್ 2 ಅನ್ನು ಏಪ್ರಿಲ್ 6 ರಿಂದ ನಡೆಸಲಿದೆ. ಕೆಲವೇ ದಿನಗಳಲ್ಲಿ ಜೆಇಇ ಮೇನ್ ಪರೀಕ್ಷೆಯು ಸಮೀಪಿಸುತ್ತಿರುವಂತೆ, ಕಠಿಣ ಪರೀಕ್ಷೆಗಳಲ್ಲಿ ಒಂದಾದ ಈ ಎಂಜಿನಿಯರಿಂಗ್ (Engineering) ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಅಭ್ಯರ್ಥಿಗಳು ಅಧ್ಯಯನ ವೇಳಾಪಟ್ಟಿಯನ್ನು (Study Timetable) ಹೊಂದಿರುವುದು ಬಹಳ ಮುಖ್ಯ. ಎಫ್‌ಐಐಟಿಜೆಇಇ (Head-FIITJEE) ನೋಯ್ಡಾ ಮತ್ತು ಗ್ರೇಟರ್ ನೋಯ್ಡಾ ಕೇಂದ್ರಗಳ ಮುಖ್ಯಸ್ಥ ರಮೇಶ್ ಬಟ್ಲಿಶ್, ಇಂಡಿಯಾ ಟುಡೇ ವರದಿಯಲ್ಲಿ ಈ ಕೆಳಗಿನ ಸಲಹೆಗಳನ್ನು ನೆನಪಿನಲ್ಲಿಟ್ಟುಕೊಳ್ಳುವಂತೆ ಸಲಹೆ ನೀಡಿದ್ದಾರೆ.
- ಧನಾತ್ಮಕ ಚಿಂತನೆ ಬಹಳ ಮುಖ್ಯ ಮತ್ತು ನಿಮ್ಮ ಸಿದ್ಧತೆಯ ಬಗ್ಗೆ ಯಾರೊಂದಿಗೂ ಚರ್ಚಿಸಬೇಡಿ ಏಕೆಂದರೆ
- ನೀವು ಚೆನ್ನಾಗಿ ಸಿದ್ಧರಾಗಿದ್ದರೂ ಸಹ ಇದು ಪರೋಕ್ಷವಾಗಿ ನಿಮ್ಮನ್ನು ಆತಂಕಕ್ಕೆ ಒಳಪಡಿಸಬಹುದು.
- ಇತರರೊಂದಿಗೆ JEE (ಮೇನ್) ಬಗ್ಗೆ ಏನನ್ನೂ ಮಾತನಾಡಬೇಡಿ.
- ಜೆಇಇ ಮೇನ್‌ಗೆ ಒಂದು ದಿನ ಮೊದಲು, ಹೊಸ ವಿಷಯವನ್ನು ಅಧ್ಯಯನ ಮಾಡಬೇಡಿ.
- ಶಾಂತವಾಗಿರಿ, ಆತ್ಮವಿಶ್ವಾಸದಿಂದಿರಿ ಮತ್ತು ನಿಮ್ಮನ್ನು ನೀವು ನಂಬಿ.
- ಎಲ್ಲಾ ಮೂರು ವಿಷಯಗಳಲ್ಲಿನ ಪ್ರಮುಖ ಸೂತ್ರಗಳನ್ನು ಬ್ರಷ್ ಅಪ್ ಮಾಡಿ.
- ನೀವೇ ಹೇಳಿ- “ನಾನು JEE ಮೇನ್ ಬಗ್ಗೆ ಉತ್ಸುಕನಾಗಿದ್ದೇನೆ ಮತ್ತು ನಾನು ಅದನ್ನು ಸುಲಭವಾಗಿ ಭೇದಿಸಬಹುದು”.
- ಪರೀಕ್ಷೆಯ ದಿನದಂದು ನೀವು ಉತ್ತಮವಾಗಿ ಪರೀಕ್ಷೆಯನ್ನು ಎದುರಿಸಲು ಪರೀಕ್ಷೆಯ ಒಂದು ದಿನದ ಮೊದಲು ವಿಶ್ರಾಂತಿ ಅಥವಾ ಧ್ಯಾನದಲ್ಲಿ ಪಾಲ್ಗೊಳ್ಳಿ.
- ನಿಮ್ಮ ಸ್ನೇಹಿತರು ಎಷ್ಟು ಓದಿದ್ದಾರೆ ಎಂದು ಕೇಳಬೇಡಿ. ಇದು ಅನಗತ್ಯ ಒತ್ತಡವನ್ನು ಸೃಷ್ಟಿಸುತ್ತದೆ.
ಕನಿಷ್ಠ 6-7 ಗಂಟೆಗಳ ಕಾಲ ಉತ್ತಮ ನಿದ್ರೆ ಮಾಡಿ.
- ಪರೀಕ್ಷೆ ಪ್ರಾರಂಭವಾಗುವ ಕನಿಷ್ಠ ಅರ್ಧ ಘಂಟೆಯ ಮೊದಲು ಪರೀಕ್ಷಾ ಕೇಂದ್ರವನ್ನು ತಲುಪುವಂತೆ ಸಿದ್ದರಾಗಿ.
- ನಿಮ್ಮ JEE ಮುಖ್ಯ 2023 ಹಾಲ್ ಟಿಕೆಟ್ ಅನ್ನು ಒಯ್ಯುವುದನ್ನು ಮರೆಯಬೇಡಿ ಮತ್ತು ಹಾಲ್ ಟಿಕೆಟ್‌ನ ಪ್ರಕಾರ ಸೂಚನೆಗಳನ್ನು ಅನುಸರಿಸಿ. ಪರೀಕ್ಷಾ ಹಾಲ್ ಒಳಗೆ ಏನನ್ನೂ ಎರವಲು ಪಡೆಯುವುದನ್ನು ತಪ್ಪಿಸಿ.
ಇದನ್ನೂ ಓದಿ: UPSC ಆಕಾಂಕ್ಷಿಗಳಿಗೆ ತಜ್ಞರ ಸಲಹೆ; ಮೊದಲನೇ ಪ್ರಯತ್ನದಲ್ಲಿ ಪರೀಕ್ಷೆ ಭೇದಿಸಲು ಮಹಿಳಾ ಅಭ್ಯರ್ಥಿಗಳಿಂದ 5 ಸಲಹೆ