Karnataka 1st PUC Result 2026: ಪ್ರಥಮ ಪಿಯುಸಿ ಫಲಿತಾಂಶ ಚೆಕ್ ಮಾಡಲು, ಅಂಕಪಟ್ಟಿ ಡೌನ್‌ಲೋಡ್ ಇಲ್ಲಿದೆ ಲಿಂಕ್

ಕರ್ನಾಟಕ ಪ್ರಥಮ ಪಿಯು ಫಲಿತಾಂಶ 2026: ಕರ್ನಾಟಕ ಪ್ರಥಮ ಪಿಯುಸಿ ಪರೀಕ್ಷೆಯ ಫಲಿತಾಂಶ ಇಂದು ಬಿಡುಗಡೆಯಾಗುತ್ತಿದೆ. ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆಯನ್ನು ಬಳಸಿ ಅಧಿಕೃತ ವೆಬ್‌ಸೈಟ್‌ನಲ್ಲಿ ಫಲಿತಾಂಶ ವೀಕ್ಷಿಸಬಹುದು. ಫಲಿತಾಂಶ ವೀಕ್ಷಿಸುವ ನೇರ ಲಿಂಕ್ ಮತ್ತು ಆನ್​​ಲೈನ್​ನಲ್ಲಿ ತಿಳಿಯುವುದು ಹೇಗೆಂಬ ಹಂತ-ಹಂತದ ಮಾಹಿತಿ ಇಲ್ಲಿದೆ.

Karnataka 1st PUC Result 2026: ಪ್ರಥಮ ಪಿಯುಸಿ ಫಲಿತಾಂಶ ಚೆಕ್ ಮಾಡಲು, ಅಂಕಪಟ್ಟಿ ಡೌನ್‌ಲೋಡ್ ಇಲ್ಲಿದೆ ಲಿಂಕ್
ಸಾಂದರ್ಭಿಕ ಚಿತ್ರ
Image Credit source: tv9
Edited By:

Updated on: Mar 31, 2026 | 10:08 AM

ಬೆಂಗಳೂರು, ಮಾರ್ಚ್​ 31: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು (KSEAB) 2026ನೇ ಸಾಲಿನ ಪ್ರಥಮ ಪಿಯುಸಿ (1st PUC) ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ಇಂದು ಅಧಿಕೃತವಾಗಿ ಪ್ರಕಟಿಸುತ್ತಿದೆ. ಕರ್ನಾಟಕ ರಾಜ್ಯಾದ್ಯಂತ 2026ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳಿನಲ್ಲಿ ನಡೆದಿದ್ದ ಪರೀಕ್ಷೆಗೆ ಹಾಜರಾಗಿದ್ದ ಲಕ್ಷಾಂತರ ವಿದ್ಯಾರ್ಥಿಗಳು ಫಲಿತಾಂಶವನ್ನು ಆನ್‌ಲೈನ್ ಮೂಲಕ ವೀಕ್ಷಿಸಬಹುದಾಗಿದೆ. ವಿದ್ಯಾರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್ karresults.nic.in ಗೆ ಭೇಟಿ ನೀಡಿ, ತಮ್ಮ ರಿಜಿಸ್ಟರ್ ನಂಬರ್ ಮತ್ತು ಹುಟ್ಟಿದ ದಿನಾಂಕವನ್ನು ನಮೂದಿಸುವ ಮೂಲಕ ಅಂಕಪಟ್ಟಿಯನ್ನು ಪಡೆಯಬಹುದು. ಫಲಿತಾಂಶದ ಜೊತೆಗೆ ಕಾಲೇಜುಗಳಲ್ಲಿಯೂ ಸಹ ಅಂಕಪಟ್ಟಿಗಳನ್ನು ಪ್ರಕಟಿಸಲು ಸೂಚಿಸಲಾಗಿದೆ.

ಕರ್ನಾಟಕ ಪ್ರಥಮ ಪಿಯುಸಿ ಫಲಿತಾಂಶ 2026: ಆನ್‌ಲೈನ್‌ನಲ್ಲಿ ವೀಕ್ಷಿಸುವುದು ಹೇಗೆ?

ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಲು ಈ ಸರಳ ಹಂತಗಳನ್ನು ಅನುಸರಿಸಿ;

  • ಹಂತ 1: ಮೊದಲಿಗೆ ಕರ್ನಾಟಕ ಪರೀಕ್ಷಾ ಫಲಿತಾಂಶದ ಅಧಿಕೃತ ವೆಬ್‌ಸೈಟ್ karresults.nic.in ಗೆ ಭೇಟಿ ನೀಡಿ.
  • ಹಂತ 2: ಮುಖಪುಟದಲ್ಲಿ ಕಾಣಿಸುವ ‘1st PUC Annual Exam Result 2026’ ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ಹಂತ 3: ಈಗ ಹೊಸ ಪುಟ ತೆರೆಯುತ್ತದೆ, ಅಲ್ಲಿ ನಿಮ್ಮ ನೋಂದಣಿ ಸಂಖ್ಯೆಯನ್ನು (Registration Number) ನಮೂದಿಸಿ.
  • ಹಂತ 4: ನಿಮ್ಮ ವಿಷಯದ ಸ್ಟ್ರೀಮ್ (Science/Arts/Commerce) ಅನ್ನು ಆಯ್ಕೆ ಮಾಡಿ.
  • ಹಂತ 5: ಎಲ್ಲಾ ವಿವರಗಳನ್ನು ಭರ್ತಿ ಮಾಡಿದ ನಂತರ ‘Submit’ ಬಟನ್ ಮೇಲೆ ಕ್ಲಿಕ್ ಮಾಡಿ.
  • ಹಂತ 6: ನಿಮ್ಮ ಫಲಿತಾಂಶವು ಪರದೆಯ ಮೇಲೆ ಕಾಣಿಸುತ್ತದೆ. ಭವಿಷ್ಯದ ಉಲ್ಲೇಖಕ್ಕಾಗಿ ಇದನ್ನು ಡೌನ್‌ಲೋಡ್ ಮಾಡಿಕೊಳ್ಳಿ ಅಥವಾ ಪ್ರಿಂಟ್ ಔಟ್ ತೆಗೆದುಕೊಳ್ಳಿ.

ಒಂದು ವೇಳೆ ಅಧಿಕೃತ ವೆಬ್‌ಸೈಟ್‌ನಲ್ಲಿ ಹೆಚ್ಚಿನ ಟ್ರಾಫಿಕ್ ಕಾರಣದಿಂದ ಪೇಜ್ ಲೋಡ್ ಆಗದಿದ್ದರೆ, ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ ಅಥವಾ ನಿಮ್ಮ ಕಾಲೇಜಿನ ನೋಟಿಸ್ ಬೋರ್ಡ್‌ನಲ್ಲಿ ಫಲಿತಾಂಶವನ್ನು ಪರಿಶೀಲಿಸಬಹುದಾಗಿದೆ.

ಇದನ್ನೂ ಓದಿ: SSLC ಒಟ್ಟು ಮಾರ್ಕ್ಸ್​​ 625ದಿಂದ 525ಕ್ಕೆ ಇಳಿಕೆ: ಹಿಂದಿ ಅಂಕಕ್ಕೆ ಕೋಕ್

ಅಂಕಗಳ ಬಗ್ಗೆ ತೃಪ್ತರಾಗದ ವಿದ್ಯಾರ್ಥಿಗಳಿಗೆ, ಮರುಮೌಲ್ಯಮಾಪನ ಅಥವಾ ಉತ್ತರ ಪತ್ರಿಕೆಯ ಪರಿಶೀಲನೆಗೆ ಕೆಎಸ್‌ಇಎಬಿ ಅವಕಾಶ ನೀಡುತ್ತದೆ. ಅಭ್ಯರ್ಥಿಗಳು ಮಂಡಳಿಯು ಘೋಷಿಸಿದ ನಿಗದಿತ ಸಮಯದೊಳಗೆ ಅರ್ಜಿ ಸಲ್ಲಿಸಬೇಕು.

ಪ್ರಥಮ ಪಿಯುಸಿ ಪೂರಕ ಪರೀಕ್ಷೆಗೆ ಅವಕಾಶ

ಒಂದು ಅಥವಾ ಹೆಚ್ಚಿನ ವಿಷಯಗಳಲ್ಲಿ ಉತ್ತೀರ್ಣರಾಗಲು ವಿಫಲರಾದ ವಿದ್ಯಾರ್ಥಿಗಳಿಗೆ ಕರ್ನಾಟಕ ಪ್ರಥಮ ಪಿಯುಸಿ ಪೂರಕ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ. ಈ ಪರೀಕ್ಷೆಯ ಅಧಿಕೃತ ವೇಳಾಪಟ್ಟಿಯನ್ನು ಮಂಡಳಿಯು ಇನ್ನೂ ಪ್ರಕಟಿಸಿಲ್ಲ. ಕಳೆದ ಸಾಲಿನ ಶೈಕ್ಷಣಿಕ ವರ್ಷದ ಚಟುವಟಿಕೆಗಳನ್ನು ಗಮನಿಸಿದರೆ (ಉದಾಹರಣೆಗೆ; 2024-25ರಲ್ಲಿ ಮೇ 20 ರಿಂದ ಮೇ 31 ರವರೆಗೆ ಪರೀಕ್ಷೆ ನಡೆಸಲಾಗಿತ್ತು), ಈ ವರ್ಷವೂ ಮುಂದಿನ ಎರಡು ತಿಂಗಳ ಅವಧಿಯಲ್ಲಿ ಪೂರಕ ಪರೀಕ್ಷೆಗಳನ್ನು ನಡೆಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:54 am, Tue, 31 March 26

Follow Us