Karnataka DCET result 2024: ಡಿಪ್ಲೊಮಾ ಪಾಲಿಟೆಕ್ನಿಕ್ ಪ್ರವೇಶ ಪರೀಕ್ಷೆ ಫಲಿತಾಂಶ ಪ್ರಕಟ

|

Updated on: Jun 29, 2024 | 5:04 PM

ಡಿಪ್ಲೊಮಾ ಸಾಮಾನ್ಯ ಪ್ರವೇಶ ಪರೀಕ್ಷೆ (ಡಿಸಿಇಟಿ 2024) ಫಲಿತಾಂಶಗಳನ್ನು ಪ್ರಕಟಗೊಂಡಿದ್ದು, ಅಭ್ಯರ್ಥಿಗಳು DCET ಫಲಿತಾಂಶವನ್ನು ಕೆಇಎ ಅಧಿಕೃತ ವೆಬ್‌ಸೈಟ್​​​ಗೆ ಭೇಟಿ ಪರಿಶೀಲನೆ ನಡೆಸಬಹುದು. ಅಭ್ಯರ್ಥಿಗಳು ಡಿಪ್ಲೊಮಾ ಅಂಕಪಟ್ಟಿಯನ್ನು ಪಿಡಿಎಫ್ ರೂಪದಲ್ಲಿ ಪ್ರಾಧಿಕಾರದ ಇಮೇಲ್ keaugcet24@gmail.com ಗೆ ಸಲ್ಲಿಸಬೇಕು ಎಂದು ಹೇಳಲಾಗಿದೆ.

Karnataka DCET result 2024: ಡಿಪ್ಲೊಮಾ ಪಾಲಿಟೆಕ್ನಿಕ್ ಪ್ರವೇಶ ಪರೀಕ್ಷೆ ಫಲಿತಾಂಶ ಪ್ರಕಟ
ಸಾಂದರ್ಭಿಕ ಚಿತ್ರ
Follow us on

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) 2024-25ನೇ ಶೈಕ್ಷಣಿಕ ವರ್ಷದ ಡಿಪ್ಲೊಮಾ ಸಾಮಾನ್ಯ ಪ್ರವೇಶ ಪರೀಕ್ಷೆ (ಡಿಸಿಇಟಿ 2024) ಫಲಿತಾಂಶಗಳನ್ನು ಪ್ರಕಟಿಸಿದೆ. ಅಭ್ಯರ್ಥಿಗಳ ದಾಖಲೆ ಪರಿಶೀಲನೆಯನ್ನು ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಡಿಪ್ಲೊಮಾ ಪಾಲಿಟೆಕ್ನಿಕ್‌ಗಳಲ್ಲಿ ನಡೆಸಲಾಗುವುದು. DCET ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್ cetonline.karnataka.gov.in ನಲ್ಲಿ ನೋಡಬಹುದು. ಡಿಪ್ಲೊಮಾ ಪರೀಕ್ಷೆಯನ್ನು ಬರೆದ ಅಭ್ಯರ್ಥಿಗಳು ಮತ್ತು ಡಿಸಿಇಟಿ ಪರೀಕ್ಷೆಯಲ್ಲಿ ಶ್ರೇಣಿ ಕ್ರಮಾಂಕವಾಗಿ ಅಂಕ ಪಡೆದ ಅಭ್ಯರ್ಥಿಗಳು ಪಟ್ಟಿಯನ್ನು ಇಲ್ಲಿ ತಿಳಿಸಲಾಗಿದೆ.

ಅಭ್ಯರ್ಥಿಗಳು ಡಿಪ್ಲೊಮಾ ಅಂಕಪಟ್ಟಿಯನ್ನು ಪಿಡಿಎಫ್ ರೂಪದಲ್ಲಿ ಪ್ರಾಧಿಕಾರದ ಇಮೇಲ್ keaugcet24@gmail.com ಗೆ ಸಲ್ಲಿಸಬೇಕು. ಹಾಗೂ ವಿದ್ಯಾರ್ಹತೆ ಪರಿಶೀಲನೆ ಮತ್ತು ನಿಯಮಗಳ ಪ್ರಕಾರ ಶ್ರೇಣಿಯನ್ನು ನೀಡಲಾಗುವುದು. ಇದರ ಜತೆಗೆ ದಾಖಲೆ ಪರಿಶೀಲನೆ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, 1 ರಿಂದ 1,200 ರವರೆಗೆ ರ್ಯಾಂಕ್ ಹೊಂದಿರುವ ಅಭ್ಯರ್ಥಿಗಳಿಗೆ 9:45 ರಿಂದ 11:30 ರವರೆಗೆ ಹಾಗೂ 1,201 ರಿಂದ 2,400 ರವರೆಗೆ ರ್ಯಾಂಕ್ ಹೊಂದಿರುವ ಅಭ್ಯರ್ಥಿಗಳಿಗೆ ಬೆಳಿಗ್ಗೆ 11:30 ರಿಂದ ಮಧ್ಯಾಹ್ನ 1:15 ರವರೆಗೆ ಪರಿಶೀಲನೆ ಸಮಯ ನಿಗದಿಪಡಿಸಲಾಗಿದೆ. KEA ವೆಬ್‌ಸೈಟ್‌ನಲ್ಲಿ ಪ್ರಕಟಿಸಿದಂತೆ ಅಭ್ಯರ್ಥಿಗಳು ಹತ್ತಿರದ ಸರ್ಕಾರಿ ಅಥವಾ ಅನುದಾನಿತ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಖುದ್ದಾಗಿ ಹಾಜರಾಗಬೇಕು ಎಂದು ಹೇಳಲಾಗಿದೆ.

ಎನ್‌ಸಿಸಿ, ಕ್ರೀಡೆ, ಸೈನಿಕರು, ಮಾಜಿ ಸೈನಿಕರು, ಸಿಎಪಿಎಫ್ ಮತ್ತು ಮಾಜಿ ಸಿಎಪಿಎಫ್ ಸೇರಿದಂತೆ ವಿಶೇಷ ವರ್ಗದ ಅಭ್ಯರ್ಥಿಗಳು ತಮ್ಮ ವಿಶೇಷ ವರ್ಗದ ಪ್ರಮಾಣಪತ್ರಗಳು ಮತ್ತು ಇತರ ಶೈಕ್ಷಣಿಕ ಪ್ರಮಾಣಪತ್ರಗಳೊಂದಿಗೆ ಶ್ರೇಯಾಂಕ ಪಟ್ಟಿಯ ಪ್ರಕಾರ ಕೆಇಎ, ಮಲ್ಲೇಶ್ವರಂ, ಬೆಂಗಳೂರಿನ ಪರಿಶೀಲನೆಗೆ ಹಾಜರಾಗಬೇಕು ಎಂದು ಹೇಳಲಾಗಿದೆ.

ಇದನ್ನೂ ಓದಿ: ಯುಜಿಸಿಇಟಿ-2024: ಅಭ್ಯರ್ಥಿಗಳ ದಾಖಲೆಗಳ ಆಫ್ ಲೈನ್ ಪರಿಶೀಲನೆ ಆರಂಭ

ಕರ್ನಾಟಕ ಡಿಸಿಇಟಿ ಫಲಿತಾಂಶ 2024 ಪರಿಶೀಲಿಸುವ ಹಂತ

ಹಂತ 1: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಅಧಿಕೃತ ವೆಬ್‌ಸೈಟ್ ತೆರೆಯಿರಿ ( www.kea.kar.nic.in ಮತ್ತು www.cetonline.karnataka.gov.in)

ಹಂತ 2: ಮುಖಪುಟದಲ್ಲಿ ಕರ್ನಾಟಕ DCET ಫಲಿತಾಂಶ 2024 ಲಿಂಕ್ ಅನ್ನು ಕ್ಲಿಕ್ ಮಾಡಿ.

ಹಂತ 3: ಪುಟವನ್ನು ಲಾಗಿನ್ ವಿಂಡೋವನ್ನು ತಿಳಿಸುತ್ತದೆ.

ಹಂತ 4: ಇಲ್ಲಿ ತಿಳಿಸಿರುವ ಆಯ್ಕೆಯಲ್ಲಿ DCET ನೋಂದಣಿ ಸಂಖ್ಯೆ ಮತ್ತು ಹಾಲ್ ಟಿಕೆಟ್ ಸಂಖ್ಯೆಯನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ.

ಹಂತ 5: ಈಗ “ಸಲ್ಲಿಸು” ಬಟನ್ ಮೇಲೆ ಕ್ಲಿಕ್ ಮಾಡಿ.

ಹಂತ 6: ಡಿಸಿಇಟಿ ಶ್ರೇಣಿಯೊಂದಿಗೆ ಹೊಸ ಪುಟವನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ.

ಹಂತ 7: ಕರ್ನಾಟಕ ಡಿಸಿಇಟಿ ಫಲಿತಾಂಶವನ್ನು ಡೌನ್‌ಲೋಡ್ ಮಾಡಿ ಮತ್ತು ಹೆಚ್ಚಿನ ಬಳಕೆಗಾಗಿ ಅದರ ಪ್ರಿಂಟ್‌ಔಟ್ ತೆಗೆಯಬಹುದು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 4:54 pm, Sat, 29 June 24