ಬೆಂಗಳೂರು: ಕರ್ನಾಟಕದ ಎಲ್ಲಾ ಸ ರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ(Midday Meal Scheme) ಮಕ್ಕಳಿಗೆ ‘ವಿಶೇಷ ಭೋಜನ (special meal) ಮತ್ತು ಶಾಲೆಗಾಗಿ ನಾವು ನೀವು’ ಕಾರ್ಯಕ್ರಮ ಆಯೋಜಿಸಲು ಶಿಕ್ಷಣ ಇಲಾಖೆ (Karnataka Education Department)ಸುತ್ತೋಲೆ ಹೊರಡಿಸಿದೆ. ಹಬ್ಬ ಹರಿದಿನಗಳು ಹಾಗೂ ವಿಶೇಷ ಸಂದರ್ಭಗಳಲ್ಲಿ ಈ ಸವಲತ್ತು ಮಕ್ಕಳಿಗೆ ಲಭಿಸಲಿದೆ.
ಇದನ್ನೂ ಓದಿ: ಕರ್ನಾಟಕ ರಾಜ್ಯದಲ್ಲಿ 5, 8ನೇ ತರಗತಿಗೂ ವಾರ್ಷಿಕ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಆದೇಶ
ಈ ಕಾರ್ಯಕ್ರಮದಡಿ ಟ್ರಸ್ಟ್, ಸಂಘ ಸಂಸ್ಥೆಗಳು , ಎಸ್‌ಡಿಎಂಸಿಗಳು, ಸಾರ್ವಜನಿಕರೂ ಸೇರಿದಂತೆ ಸಮುದಾಯದವರು ಆರ್ಥಿಕ ನೇರವು, ವಿಶೇಷ ಪೌಷ್ಠಿಕ ಆಹಾರ ಪದಾರ್ಥಗಳನ್ನು ಮಕ್ಕಳಿಗೆ ನೀಡಬಹುದು. ಈ ರೀತಿ ನೀಡುವ ಆಹಾರ ಸಂಪೂರ್ಣ ಸಸ್ಯಾಹಾರವಾಗಿರಬೇಕು. ಇಲಾಖೆ ಗುರುತಿಸಿರುವ ಆಹಾರ ಪದಾರ್ಥಗಳ ಪಟ್ಟಿಯಲ್ಲಿರಬೇಕು ಎಂದು ಶಿಕ್ಷಣ ಇಲಾಖೆ ಆದೇಶಿಸಿದೆ.
ಇದರಿಂದ ಯಾವುದೇ ವರ್ಗ, ಜಾತಿ , ಮತ, ಲಿಂಗ, ಭೇದವಿಲ್ಲದೆ ನಾವೆಲ್ಲರೂ ಒಂದು ಎಂಬ ಏಕತಾ ಭಾವನೆಯನ್ನು ಮಕ್ಕಳಲ್ಲಿ ಬೆಳೆಸುವುದು ಇದರ ಉದ್ದೇಶ. ಸಮುದಾಯದಲ್ಲೂ ಒಗ್ಗಟ್ಟು, ಸಹಬಾಳ್ವೆ, ಬಾಂಧವ್ಯ, ಐಕ್ಯತೆ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆವಾಗಿದೆ ಎಂದು ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.
ಈಗಾಗಲೇ ಅಸ್ಸಾಂ, ಆಂಧ್ರಪ್ರದೇಶ, ತೆಲಂಗಾಣ, ಪಂಜಾಬ್, ಚಂಡೀಗಢ ಸೇರಿದಂತೆ ಹಲವು ರಾಜ್ಯಗಳಲ್ಲಿ ಬೇರೆ ಬೇರೆ ಹೆಸರಲ್ಲಿ ಜಾರಿಗೊಳಿಸಿರುವ ಈ ಕಾರ್ಯಕ್ರಮವನ್ನು ರಾಜ್ಯದಲ್ಲೂ ಪ್ರಸಕ್ತ ಸಾಲಿನಿಂದ ಜಾರಿಗೆ ತರುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ಆರ್.ವಿಶಾಲ್ ಸುತ್ತೋಲೆ ಹೊರಡಿಸಿದ್ದಾರೆ.
ಇದನ್ನೂ ಓದಿ: ‘ಆರೈಕೆ’ ಎಂಬ ಯೋಜನೆ ಮೂಲಕ ಸರಕಾರಿ ಶಾಲೆ ಮಕ್ಕಳಿಗೆ ಉಚಿತ ಚಿಕಿತ್ಸೆ ನೀಡುತ್ತಿರುವ ಹಾವೇರಿ ಜಿಲ್ಲಾ ಪಂಚಾಯತಿ
ವಿಶೇಷ ಭೋಜನ ಯಾವಾಗ ?
ವಿಶೇಷವಾಗಿ ಊರಿನ ಹಬ್ಬ, ಜಾತ್ರೆ, ತೇರು, ರಾಷ್ಟ್ರೀಯ ಹಬ್ಬಗಳು, ಜನ್ಮದಿನ, ಜಯಂತಿ, ವಿವಾಹ, ವಾರ್ಷಿಕೋತ್ಸವ ಸೇರಿದಂತೆ ಸ್ಥಳೀಯವಾಗಿ ಸಮುದಾಯದಿಂದ ಸಾಮೂಹಿಕವಾಗಿ ಆಚರಿಸುವ ವಿಶೇಷ ಕಾರ್ಯಕ್ರಮಗಳ ಅಂಗವಾಗಿ ವಿಶೇಷ ಭೋಜನ, ವಿಶೇಷ ಪೌಷ್ಟಿಕ ಆಹಾರ ಪದಾರ್ಥಗಳನ್ನು ಮಕ್ಕಳಿಗೆ ನೀಡಬಹುದಾಗಿದೆ. ಯಾವುದೇ ವರ್ಗ, ಜಾತಿ, ಮತ, ಲಿಂಗ ಭೇದವಿಲ್ಲದೆ ನಾವೆಲ್ಲರೂ ಒಂದು ಎಂಬ ಏಕತಾ ಭಾವನೆಯನ್ನು ಮಕ್ಕಳಲ್ಲಿ ಬೆಳೆಸುವುದು. ಜತೆಗೆ ಸಮುದಾಯದಲ್ಲೂ ಒಗ್ಗಟ್ಟು, ಸಹಬಾಳ್ವೆ, ಬಾಂಧವ್ಯ, ಐಕ್ಯತೆ ಮೂಡಿಸುವುದು ಈ ಕಾರ್ಯಕ್ರಮ ಉದ್ದೇಶವಾಗಿದೆ ಎಂದು ಶಿಕ್ಷಣ ಇಲಾಖೆ ಸುತ್ತೋಲೆಯಲ್ಲಿ ತಿಳಿಸಿದೆ.
ಯಾವೆಲ್ಲ ಆಹಾರ ನೀಡಬಹುದು?
ವಿಶೇಷ ಭೋಜನ ನೀಡುವವರು ಪ್ರಸ್ತುತ ಬಿಸಿಯೂಟದೊಂದಿಗೆ ಪೂರಕ ಪೌಷ್ಠಿಕ ಆಹಾರವಾಗಿ ವಿತರಿಸುವ ಆಹಾರ ಪದಾರ್ಥಗಳನ್ನು ಈ ಯೋಜನೆಯಡಿ ನೀಡಬಹುದು. ಮೊಟ್ಟೆ, ಶೇಂಗಾ ಚಿಕ್ಕಿ, ಹಲ್ವಾ, ಬಿಸ್ಕಟ್, ಹಪ್ಪಳ, ಉಪ್ಪಿನಕಾಯಿ, ವಿವಿಧ ಬಗೆಯ ಸಿಹಿ ತಿಂಡಿ, ಸಂಜೆ ವೇಳೆ ಸ್ನ್ಯಾಕ್ಸ್, ಬಾಳೆ ಹಣ್ಣು, ಇತರೆ ಹಣ್ಣು-ಹಂಪಲ, ಮೊಳಕೆ ಕಾಳು, ಬೆಳಗಿನ ಉಪಹಾರ ಇತ್ಯಾದಿ ಮಕ್ಕಳು ಇಷ್ಟಪಡುವ ಪೂರಕ ಆಹಾರ ಪದಾರ್ಥಗಳನ್ನು ನೀಡಬಹುದು.
ಆಹಾರ ಸ್ಥಳೀಯ ಪ್ರದೇಶದ ಆಹಾರ ಪದ್ಧತಿಗೆ ಒಪ್ಪಿತವಾಗಿರಬೇಕು
ಇನ್ನು ಆಹಾರ ಸ್ಥಳೀಯ ಪ್ರದೇಶದ ಆಹಾರ ಪದ್ಧತಿಗೆ ಒಪ್ಪಿತವಾಗಿರಬೇಕು ಮತ್ತು ಇಲಾಖೆ ಸೂಚಿತ ಆಹಾರ ಪಟ್ಟಿಯಲ್ಲಿರಬೇಕು. ಋುತುಮಾನಕ್ಕೆ ತಕ್ಕ ಹಣ್ಣು, ತರಕಾರಿ ಮತ್ತಿತರ ಪದಾರ್ಥಗಳನ್ನು ಬಿಸಿಯೂಟ ತಯಾರಿಸಲು ದಾನಿಗಳಿಂದ ಸ್ವೀಕರಿಸಬಹುದು. ಕೇವಲ ಆಹಾರ ಪದಾರ್ಥಗಳ ರೂಪದಲ್ಲಿ ಮಾತ್ರವಲ್ಲದೆ ತಟ್ಟೆ, ಲೋಟ, ಗ್ರೈಂಡರ್, ಮಿಕ್ಸಿ ಸೇರಿದಂತೆ ಬಿಸಿಯೂಟ ತಯಾರಿಕೆಗೆ ಬೇಕಾದ ಯಾವುದೇ ಭೌತಿಕ ವಸ್ತುಗಳ ರೂಪದಲ್ಲೂ ದಾನಿಗಳ ಕೊಡುಗೆಗಳನ್ನು ಸ್ವೀಕರಿಸಬಹುದು. ಈ ರೀತಿ ಸ್ವೀಕರಿಸುವ ಪ್ರತಿಯೊಂದಕ್ಕೂ ದಾಖಲೆ ನಿರ್ವಹಿಸಬೇಕು ಎಂದು ಶಿಕ್ಷಣ ಇಲಾಖೆ ಸೂಚಿಸಿದೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ