ಕರ್ನಾಟಕ ಶಿಕ್ಷಣದಲ್ಲಿ ಆಂಧ್ರ ಮಾಡೆಲ್: SSLC, PUC ವಿದ್ಯಾರ್ಥಿಗಳಿಗೆ ಹೊಸ ರೂಲ್ಸ್

| Updated By: ರಮೇಶ್ ಬಿ. ಜವಳಗೇರಾ

Updated on: Aug 21, 2024 | 10:02 PM

ಸಾಕ್ಷರತಾ ಪ್ರಮಾಣ ಹೆಚ್ಚಿಸಲು ಆಂಧ್ರ ಪ್ರದೇಶ ಸರ್ಕಾರದ ಮಾದರಿ ಅನುಸರಿಸಲು ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆ ಮುಂದಾಗಿದೆ. ಎಸ್​ಎಸ್​ಎಲ್​​ಸಿ , ದ್ವಿತೀಯ ಪಿಯುಸಿ ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಆಂಧ್ರದ ಮಾಡೆಲ್ ನಿಂದ ಹೊಸ ಹುರುಪು ತಂದು ಕೊಟ್ಟಿದೆ. ಅಷ್ಟಕ್ಕೂ ಏನಿದು ಆಂಧ್ರದ ಮಾಡೆಲ್? ಇಲ್ಲಿದೆ ನೋಡಿ.

ಕರ್ನಾಟಕ ಶಿಕ್ಷಣದಲ್ಲಿ ಆಂಧ್ರ ಮಾಡೆಲ್: SSLC, PUC ವಿದ್ಯಾರ್ಥಿಗಳಿಗೆ ಹೊಸ ರೂಲ್ಸ್
ಕರ್ನಾಟಕ ಶಿಕ್ಷಣ ಇಲಾಖೆ
Follow us on

ಬೆಂಗಳೂರು, (ಆಗಸ್ಟ್​ 19): ಕರ್ನಾಟಕದ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಫೇಲಾದ ವಿದ್ಯಾರ್ಥಿಗಳಿಗೆ ಮುಂದೇನು ಮಾಡೋದಪ್ಪ ಎನ್ನುವ ಗೊಂದಲ ಇತ್ತು. ಕಳೆದ ವರ್ಷದಿಂದ ಮೂರು ಮೂರು ಸಲ ಪರೀಕ್ಷೆ ಬರೆಯುವ ಅವಕಾಶ ಶಿಕ್ಷಣ ಇಲಾಖೆ ಕಲ್ಪಿಸಿ ಕೊಟ್ಟಿತ್ತು. ಇಷ್ಟಾದರೂ ಫಲಿತಾಂಶದಲ್ಲಿ ಅಂತಹ ವ್ಯತ್ಯಯ ಏನು ಕಂಡು ಬಂದಿಲ್ಲ. ಇದೇ ಕಾರಣಕ್ಕೆ ಮಕ್ಕಳು ಶಿಕ್ಷಣದಿಂದ ದೂರ ಇರಬಾರದು ಎಂದು ರಾಜ್ಯ ಶಿಕ್ಷಣ ಇಲಾಖೆ ಹೊಸ ಪ್ಲಾನ್ ಮಾಡಿದ್ದು, ಅನುತ್ತೀರ್ಣರಾದವರು ಕೂಡ ಶಾಲೆಗೆ ಹೋಗಬಹುದಾಗಿದೆ. ಈ ವರ್ಷದಿಂದ ಎಸ್ಎಸ್ಎಲ್ ಸಿ ಸೇರಿದಂತೆ ಪ್ರೌಢ ಶಿಕ್ಷಣದವರೆಗೆ ವಿದ್ಯಾರ್ಥಿಗಳು ಫೇಲ್ ಆದರೂ ಸಹ ಮುಂದಿನ ತರಗತಿಗೆ ಹೋಗಲು ಮತ್ತೆ ಅವಕಾಶ ನೀಡಲು ಇಲಾಖೆ ಮುಂದಾಗಿದೆ. ಈ ಮೂಲಕ ಆಂಧ್ರ ಪ್ರದೇಶದ ಮಾದರಿ ಅನುಸರಿಸಲು ರಾಜ್ಯ ಶಿಕ್ಷಣ ಇಲಾಖೆ ಪ್ಲಾನ್ ಮಾಡಿದೆ.

ಹೌದು.. SSLC, ದ್ವಿತೀಯಪಿಯುಸಿ ಫೇಲಾದ್ರು ದಾಖಲಾತಿ ನೀಡಲು ಮುಂದಾಗಿದೆ. ಅನುತ್ತಿರ್ಣರಾದ ವಿದ್ಯಾರ್ಥಿಗಳಿಗೆ ಅವಕಾಶ ನೀಡುತ್ತಿರುವುದು ಇದೇ ಮೊದಲ ಬಾರಿಗೆ ಶಾಲಾ ಶಿಕ್ಷಣ ಇಲಾಖೆಯಿಂದ ವಿನೂತನ ಪ್ರಯತ್ನವಾಗಿದೆ. ಪ್ರತೀ ವರ್ಷ ಕನಿಷ್ಠ ಒಂದು ಲಕ್ಷ ವಿದ್ಯಾರ್ಥಿಗಳು ಶಿಕ್ಷಣ ಮೊಟಕುಗೊಳಿಸ್ತಾರೆ. ವಿದ್ಯಾರ್ಥಿಗಳು ಡ್ರಾಪ್ ಔಟ್ ಆಗಬಾರದು ಎಂದು ಈ ವಿಶೇಷ ಮಾದರಿಯನ್ನು ಜಾರಿಗೆ ತರಲು ಚಿಂತನೆ ಮಾಡಲಾಗಿದೆ.

ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಬಿಗ್ ಶಾಕ್: ಸರ್ಕಾರಿ ಶಾಲಾ ಮಕ್ಕಳ ಹಾಜರಾತಿಗೆ ಇನ್ಮುಂದೆ ಫೇಸಿಯಲ್ ಅಟೆಂಡೆನ್ಸ್..!

ಇದರೊಂದಿಗೆ ಸಾಕ್ಷರತಾ ಪ್ರಮಾಣ ಹೆಚ್ಚು ಮಾಡಲು ಶಿಕ್ಷಣ ಇಲಾಖೆ ಮಾಸ್ಟರ್ ಪ್ಲಾನ್ ಮಾಡಿದೆ. ಫೇಲ್ ಆದರೂ ಸಹ ಮತ್ತೊಮ್ಮೆ ಪಾಠ ಕೇಳುವ ಅವಕಾಶ ನೀಡಲು ಮುಂದಾಗಿದೆ. ಅನುತ್ತೀರ್ಣರಾದ ವಿಷಯಕ್ಕೆ ಮಾತ್ರ ಶಾಲೆ ಹಾಜರಿ ಆಗಬಹುದು ಅಥವಾ ಸಂಪೂರ್ಣವಾಗಿ ಮತ್ತೊಮ್ಮೆ ಪರೀಕ್ಷೆ ಬರೆಯಬಹುದು. ಇದು ವಿದ್ಯಾರ್ಥಿಯ ಆಯ್ಕೆ ಇರುತ್ತೆ. ರೆಗ್ಯುಲರ್ ವಿದ್ಯಾರ್ಥಿಗೆ ಸಿಗುವ ಎಲ್ಲಾ ಅನೂಕೂಲ ಈ ವಿದ್ಯಾರ್ಥಿಗಳಿಗೆ ಸಿಗುತ್ತೆ. ವಿದ್ಯಾರ್ಥಿ ಎಲ್ಲ ವಿಷಯ ಓದುವುದು ಅಥವಾ ಅನುತೀರ್ಣ ವಿಷಯಕ್ಕೆ ಮಾತ್ರ ಪರೀಕ್ಷೆ ಹಾಗೂ ಹಾಜರಾತಿ ಬಗ್ಗೆ ವಿದ್ಯಾರ್ಥಿಯೇ ನಿರ್ಣಯ ತಗೆದುಕೊಳ್ಳುವ ಅವಕಾಶ ನೀಡಿದೆ

ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಶಾಲೆ, ಕಾಲೇಜಿಗೆ ದಾಖಲಾಗಿ ಪಾಠ ಕೇಳುವ ಅವಕಾಶವನ್ನು ಶಿಕ್ಷಣ ಇಲಾಖೆ ಕಲ್ಪಿಸಿದಂತಾಗಿದೆ. ಈಗಾಗಲೇ ಆಂಧ್ರ ಪ್ರದೇಶದಲ್ಲಿ ಇಂತಹದೊಂದು ರೂಲ್ಸ್ ಇದ್ದು, ಈಗ ಕರ್ನಾಟದಲ್ಲಿಯೂ ಇದೇ ಮೊದಲ ಬಾರಿಗೆ ಇಲಾಖೆ ಜಾರಿಗೊಳಿಸಿದೆ. ಈ ರೀತಿಯ ನಿಯಮಗಳಿಂದ ಡ್ರಾಪ್ ಔಟ್ ಆಗುವ ವಿದ್ಯಾರ್ಥಿಗಳು ಮತ್ತೆ ಶಿಕ್ಷಣದಲ್ಲಿ ತೊಡಗಿ ಕೊಳ್ಳಲು ಅನುಕೂಲವಾಗಲಿದೆ

:ಒಟ್ಟಿನಲ್ಲಿ ಮಕ್ಕಳು ಶಾಲೆಯಿಂದ ಹೊರ ಉಳಿಯಬಾರದು ಎನ್ನುವ ಕಾರಣಕ್ಕೆ ಶಿಕ್ಷಣ ಇಲಾಖೆ ಈ ಹೊಸ ಪ್ರಯೋಗ ಮಾಡುತ್ತಿದೆ. ಕೋಚಿಂಗ್ ಸೆಂಟರ್ ಹೋಗೋಕೆ ಆಗದ ಗ್ರಾಮೀಣ ಭಾಗದ ಮಕ್ಕಳಿಗೆ ಅನುಕೂಲಕರವಾದ ನಿಯಮವಾದರೂ ಸಹ ಅದೆಷ್ಟು ವರ್ಕ್ ಔಟ್ ಆಗುತ್ತೆ ಎನ್ನುವುದನ್ನ ಕಾದು ನೋಡಬೇಕು.

ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:49 pm, Mon, 19 August 24