ಸ್ಟೂಡೆಂಟ್ ಯೂನಿಯನ್ ‌ಎಲೆಕ್ಷನ್ ಮತ್ತೆ ಜಾರಿ ಮಾಡುವುದಾಗಿ ಹೇಳಿ ಸೈಲೆಂಟ್ ಆದ ಸರ್ಕಾರ: ಕಾರಣವೇನು?

ರಾಜ್ಯದ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಸ್ಟೂಡೆಂಟ್ ಯೂನಿಯನ್ ‌ಎಲೆಕ್ಷನ್​​ ಮತ್ತೆ ಪ್ರಾರಂಭಿಸಲು ಸರ್ಕಾರ ಮುಂದಾಗಿತ್ತು. 2026-27ರಿಂದ ಆರಂಭಿಸಲು ಪ್ಲ್ಯಾನ್​ ಕೂಡ ಮಾಡಲಾಗಿತ್ತು, ಆದರೆ ಶೈಕ್ಷಣಿಕ ವರ್ಷ ಶುರುವಾದರೂ ಯಾವುದೇ ಕ್ರಮಕೈಗೊಂಡಿಲ್ಲ. ಹೀಗಾಗಿ ಕೂಡಲೇ ಚುನಾವಣೆ ನಡೆಸುವಂತೆ ವಿದ್ಯಾರ್ಥಿ ಸಂಘಟನೆಗಳು ಸರ್ಕಾರಕ್ಕೆ ಒತ್ತಾಯಿಸಿವೆ.

ಸ್ಟೂಡೆಂಟ್ ಯೂನಿಯನ್ ‌ಎಲೆಕ್ಷನ್ ಮತ್ತೆ ಜಾರಿ ಮಾಡುವುದಾಗಿ ಹೇಳಿ ಸೈಲೆಂಟ್ ಆದ ಸರ್ಕಾರ: ಕಾರಣವೇನು?
ಪ್ರಾತಿನಿಧಿಕ ಚಿತ್ರ
Image Credit source: Getty images
Edited By:

Updated on: Jul 13, 2026 | 6:53 PM

ಬೆಂಗಳೂರು, ಜುಲೈ 13: ರಾಜ್ಯದಲ್ಲಿ ಬ್ಯಾನ್ ಆಗಿದ್ದ ಕಾಲೇಜು ಎಲೆಕ್ಷನ್ (College Elections) ಮತ್ತೆ ಶುರು ಮಾಡಲು ಸರ್ಕಾರ ಮುಂದಾಗಿದೆ. ಆ ಮೂಲಕ ಕಾಲೇಜು ಹಂತದಲ್ಲಿಯೇ ಸ್ಟೂಡೆಂಟ್ ಲೀಡರ್ ಹುಟ್ಟುಹಾಕುಲು ಸರ್ಕಾರ ಸಜ್ಜಾಗಿದೆ. ಈ ವರ್ಷದ ಆರಂಭದಿಂದಲೇ ಕಾಲೇಜುಗಳಲ್ಲಿ ಹಾಗೂ ವಿವಿಗಳಲ್ಲಿ ಎಲೆಕ್ಷನ್ ನಡೆಸಲು ಮುಂದಾಗಿತ್ತು. ಇತ್ತ ವಿದ್ಯಾರ್ಥಿಗಳು ಕೂಡ ಸ್ಟೂಡೆಂಟ್ ಯೂನಿಯನ್ ‌ಎಲೆಕ್ಷನ್ ಮರುಕಳಿಸಲಿದೆ ಅಂತ ರೆಡಿಯಾಗಿದ್ದರು. ಆದರೆ ಯಾಕೋ ಸರ್ಕಾರ ಈ ಬಗ್ಗೆ ಸೈಲೆಂಟ್ ಆಗಿದೆ.

ಶೈಕ್ಷಣಿಕ ವರ್ಷ ಶುರುವಾಗಿದ್ದರೂ ಉನ್ನತ ಶಿಕ್ಷಣ ಸಚಿವರೂ ಇಲ್ಲ, ಚುನಾವಣೆಯೂ ಇಲ್ಲ

ಕಾಲೇಜು ಹಾಗೂ ವಿವಿಗಳಲ್ಲಿ ವಿದ್ಯಾರ್ಥಿ ಚುನಾವಣೆ ನಡೆಸುವ ಸಂಬಂಧ ಈಗಾಗಲೇ ಸರ್ಕಾರ ಸಮಿತಿ ರಚನೆ ಮಾಡಿ ವರದಿ ಪಡೆದಿದೆ. ಕಾಲೇಜುಗಳಲ್ಲಿ ಹಾಗೂ ವಿವಿಗಳಲ್ಲಿ ಚುನಾವಣೆ ಬೇಕಾ, ಬೇಡ್ವಾ ಎಂಬುವುದರ ಕುರಿತು ಶಿಕ್ಷಣ ತಜ್ಞರು, ಸಾರ್ವಜನಿಕರು ಹಾಗೂ ಪೋಷಕರಿಂದ ಅಭಿಪ್ರಾಯ ಸಂಗ್ರಹಿಸಲಾಗಿತ್ತು. ಅದರಂತೆ 2026-27ನೇ ಸಾಲಿನಿಂದ ಕಾಲೇಜುಗಳಲ್ಲಿ ಚುನಾವಣೆ ಶುರು ಮಾಡಲು ಮುಂದಾಗಿತ್ತು. ಆದರೆ ಶೈಕ್ಷಣಿಕ ವರ್ಷ ಶುರುವಾಗಿದ್ದರೂ ಉನ್ನತ ಶಿಕ್ಷಣ ಸಚಿವರೂ ಇಲ್ಲ, ಕಾಲೇಜು ಚುನಾವಣೆಯೂ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ವಿದ್ಯಾರ್ಥಿ ವಲಯದಿಂದ ಸರ್ಕಾರಕ್ಕೆ ಚುನಾವಣೆ ನಡೆಸುವಂತೆ ತೀವ್ರ ಒತ್ತಾಯ ಕೇಳಿಬರುತ್ತಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಪಬ್ಲಿಕ್ ಮಾದರಿಯ ಮೌಲ್ಯಮಾಪನ ಪರೀಕ್ಷೆ ಜಾರಿಗೆ ಮುಂದಾದ ಶಿಕ್ಷಣ ಇಲಾಖೆ

ಸಿಎಂ ಡಿಕೆ ಶಿವಕುಮಾರ್ ಕನಸಿನ ಮಹತ್ವದ ಯೋಜನೆ ಸ್ಟೂಡೆಂಟ್ ಯೂನಿಯನ್ ‌ಎಲೆಕ್ಷನ್. ಆದರೆ ರಾಜ್ಯದಲ್ಲಿ ಈಗ ಕಾಲೇಜುಗಳ ಆರಂಭವಾದರೂ ಎಲೆಕ್ಷನ್ ಮಾತ್ರ ಆಟಕ್ಕುಂಟು ಲೆಕ್ಕಕ್ಕೆ ಇಲ್ಲದ್ದಂತಾಗಿದೆ. ರಾಜ್ಯದಲ್ಲಿ ಕಾಲೇಜುಗಳು ವಿವಿಗಳು ಆರಂಭವಾದರೂ ಯಾವುದೇ ಯೂನಿಯನ್ ಎಲೆಕ್ಷನ್ ಇಲ್ಲದೆ ಯೋಜನೆ ಹಳ್ಳ ಹಿಡಿಯುವ ಲಕ್ಷಣಗಳು ಕಾಣಿಸುತ್ತಿವೆ. ಈಗ ಉನ್ನತ್ತ ಶಿಕ್ಷಣ ಸಚಿವರಿಲ್ಲದೆ ಮಂತ್ರಿಮಂಡಲ ವಿಸ್ತರಣೆಯಾಗದೆ. ಕಾಲೇಜುಗಳಲ್ಲಿ ಎಲೆಕ್ಷನ್ ಮಾಡೆಲ್​​ ಮತ್ತೆ ಹಳ್ಳ ಹಿಡಿದಿದ್ದು, ವಿದ್ಯಾರ್ಥಿ ನಾಯಕರಿಂದ ಎಲೆಕ್ಷನ್​ಗೆ ಬೇಡಿಕೆ ಕೇಳಿಬರುತ್ತಿದೆ. ಹೀಗಾಗಿ ಸರ್ಕಾರ ಆದಷ್ಟು ಬೇಗ ಚುನಾವಣೆ ನಡೆಸುವಂತೆ ಒತ್ತಾಯಿಸಲಾಗಿದೆ.

ವಿದ್ಯಾರ್ಥಿಗಳು ಹೇಳುವುದೇನು?

ಕಾಲೇಜ್ ಎಲೆಕ್ಷನ್​ಗಳಿಂದ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ, ಭವಿಷ್ಯದ ವ್ಯಕ್ತಿತ್ವ, ಕಾಲೇಜುಗಳಲ್ಲಿನ ಸಮಸ್ಯೆಗಳನ್ನ ಪ್ರಶ್ನಿಸಲು ಅನಕೂಲವಾಗುತ್ತೆ, ಹೀಗಾಗಿ ಚುನಾವಣೆ ಬೇಕು ಎಂದು ಪದವಿ ವಿದ್ಯಾರ್ಥಿ ನಿತೀನ್ ಹೇಳಿದ್ದಾರೆ.

ಇದನ್ನೂ ಓದಿ: ಸರ್ಕಾರಿ ಶಾಲಾ ಮಕ್ಕಳಿಗೆ ‘ಚಡ್ಡಿ’ ಮುಜುಗರ! 7ನೇ ತರಗತಿ ಬಾಲಕರಿಗೂ ಹಾಫ್ ಪ್ಯಾಂಟ್ ಬಟ್ಟೆ ವಿತರಣೆ, ಪೋಷಕರಿಗೆ ಇಕ್ಕಟ್ಟು

ಒಟ್ಟಿನಲ್ಲಿ ದಶಕಗಳ ಬಳಿಕ ಬ್ಯಾನ್ ಆಗಿದ್ದ ಎಲೆಕ್ಷನ್ ಈಗ ಮತ್ತೆ ಕಾಲೇಜು ಹಾಗೂ ವಿವಿಗಳಲ್ಲಿ ಬೇಕು ಅಂತ ಸರ್ಕಾರಕ್ಕೆ ವಿದ್ಯಾರ್ಥಿ ಸಂಘಟನೆಗಳಿಂದ ಒತ್ತಾಯ ಶುರುವಾಗಿದ್ದು, ಈ ಬಗ್ಗೆ ಸರ್ಕಾರ ಯಾವ ನಿರ್ಧಾರಕ್ಕೆ ಬರುತ್ತೆ ಅಂತ ಕಾದು ನೋಡಬೇಕಿದೆ.

ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ವಿನಯ್​ ಕಾಶಪ್ಪನವರ್​

ವಿನಯಕುಮಾರ್ ಕಾಶಪ್ಪನವರ್ ಅವರು ಸಮೂಹ ಸಂವಹನ ಹಾಗೂ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪತ್ರಿಕೋದ್ಯಮದಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಕಳೆದ 8 ವರ್ಷಗಳಿಂದ ಟಿವಿ9 ಕನ್ನಡದಲ್ಲಿ ಹಿರಿಯ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ 10 ವರ್ಷಗಳ ವರದಿಗಾರಿಕೆ ಅನುಭವ ಹೊಂದಿದ್ದು, ಸಮಾಜಮುಖಿ ಹಾಗೂ ತನಿಖಾ ವರದಿಗಳ ಮೂಲಕ ಜನಪರ ವಿಷಯಗಳನ್ನು ಬೆಳಕಿಗೆ ತರುತ್ತಿದ್ದಾರೆ.

Read More
Loading...
Unable to load recommendations.
Follow Us