2025ನೇ ಸಾಲಿನ SSLC ಮತ್ತು 2nd ಪಿಯುಸಿ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು 2025ನೇ ಸಾಲಿನ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆ-1 ರ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಪಿಯುಸಿ ಪರೀಕ್ಷೆ ಮಾರ್ಚ್ 1 ರಿಂದ 19 ರವರೆಗೆ ಮತ್ತು ಎಸ್ಎಸ್ಎಲ್ಸಿ ಪರೀಕ್ಷೆ ಮಾರ್ಚ್ 20 ರಿಂದ ಏಪ್ರಿಲ್ 2 ರವರೆಗೆ ನಡೆಯಲಿದೆ. ವೇಳಾಪಟ್ಟಿಯ ಬಗ್ಗೆ ಆಕ್ಷೇಪಣೆಗಳನ್ನು ಡಿಸೆಂಬರ್ 16 ರೊಳಗೆ ಸಲ್ಲಿಸಬಹುದು.

2025ನೇ ಸಾಲಿನ SSLC ಮತ್ತು 2nd ಪಿಯುಸಿ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ
ಸಾಂದರ್ಭಿಕ ಚಿತ್ರ
Edited By: ವಿವೇಕ ಬಿರಾದಾರ

Updated on: Dec 02, 2024 | 2:32 PM

ಬೆಂಗಳೂರು, ಡಿಸೆಂಬರ್​ 02: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು (Karnataka School Examination and Assessment Board) 2025ನೇ ಸಾಲಿನ ಎಸ್​ಎಸ್​ಎಲ್​ಸಿ (SSLC) ಮತ್ತು ದ್ವಿತೀಯ ಪಿಯುಸಿ (PUC) ಪರೀಕ್ಷೆ-1ರ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಿದೆ. ಮಾರ್ಚ್ 1ರಿಂದ ಮಾರ್ಚ್ 19ರವರೆಗೆ ದ್ವಿತೀಯ ಪಿಯು ಪರೀಕ್ಷೆ-1 ನಡೆಯಲಿದೆ. ಮಾರ್ಚ್​ 20 ರಿಂದ ಏಪ್ರಿಲ್ 2ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ನಡೆಸಲು ನಿರ್ಧರಿಸಿದೆ. ಈ ವೇಳಾಪಟ್ಟಿ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಡಿಸೆಂಬರ್ 16ರವರೆಗೆ ಅವಕಾಶವಿದೆ ಎಂದರು.

ದ್ವಿತೀಯ ಪಿಯುಸಿ ಪರೀಕ್ಷೆ-1 ರ ತಾತ್ಕಾಲಿಕ ವೇಳಾಪಟ್ಟಿ

  • ಮಾರ್ಚ್​ 01 ಶನಿವಾರ:  ಕನ್ನಡ, ಅರೇಬಿಕ್
  • ಮಾರ್ಚ್ 03 ಸೋಮವಾರ: ಗಣಿತ, ಶಿಕ್ಷಣ ಶಾಸ್ತ್ರ, ತರ್ಕಶಾಸ, ವ್ಯವಹಾರ, ಅಧ್ಯಯನ
  • ಮಾರ್ಚ್ 04 ಮಂಗಳವಾರ: ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
  • ಮಾರ್ಚ್ 05 ಬುಧವಾರ: ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ
  • ಮಾರ್ಚ್ 07 ಶುಕ್ರವಾರ: ಇತಿಹಾಸ, ಭೌತಶಾಸ್ತ್ರ
  • ಮಾರ್ಚ್ 08 ಶನಿವಾರ: ಹಿಂದಿ
  • ಮಾರ್ಚ್ 10 ಸೋಮವಾರ: ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಗೃಹ ವಿಜ್ಞಾನ
  • ಮಾರ್ಚ್ 12 ಬುಧವಾರ: ಮನಃಶಾಸ್ತ್ರ ರಸಾಯನಶಾಸ್ತ್ರ, ಮೂಲ ಗಣಿತ
  • ಮಾರ್ಚ್ 13 ಗುರುವಾರ: ಅರ್ಥಶಾಸ್ತ್ರ
  • ಮಾರ್ಚ್ 15 ಶನಿವಾರ: ಇಂಗ್ಲೀಷ್
  • ಮಾರ್ಚ್ 17 ಸೋಮವಾರ: ಭೂಗೋಳಶಾಸ್ತ್ರ ಜೀವಶಾಸ್ತ್ರ
  • ಮಾರ್ಚ್ 18 ಮಂಗಳವಾರ: ಸಮಾಜಶಾಸ್ತ್ರ ವಿದ್ಯುನ್ಮಾನಶಾಸ್ತ್ರ ಗಣಕ ವಿಜ್ಞಾನ
  • ಮಾರ್ಚ್ 19 ಬುಧವಾರ: ಹಿಂದೂಸ್ತಾನಿ ಸಂಗೀತ, ಮಾಹಿತಿ ತಂತ್ರಜ್ಞಾನ, ಆಟೋಮೊಬೈಲ್,ರೀಟೈಲ್, ಬ್ಯೂಟಿ ಅಂಡ್ ವೆಲ್‌ನೆಸ್ ಪರೀಕ್ಷೆಗಳು ನಡೆಯಲಿವೆ.  ಈ ಎಲ್ಲ ಪರೀಕ್ಷೆಗಳು ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿದೆ.

ಇದನ್ನೂ ಓದಿ: 25 ಸಾವಿರ ಪಿಯು ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಣ ಇಲಾಖೆಯಿಂದ ಉಚಿತ ನೀಟ್ ಕೋಚಿಂಗ್

ಎಸ್​ಎಸ್​ಎಲ್​ಸಿ ತಾತ್ಕಾಲಿಕ ವೇಳಾಪಟ್ಟಿ

  • ಮಾರ್ಚ್​​ 20 ಗುರುವಾರ: ಕನ್ನಡ, ತೆಲಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್​, ಸಂಸ್ಕೃತ
  • ಮಾರ್ಚ್​ 22 ಶನಿವಾರ: ಸಮಾಜ ವಿಜ್ಞಾನ
  • ಮಾರ್ಚ್​​ 24 ಸೋಮವಾರ: ಇಂಗ್ಲಿಷ್​, ಕನ್ನಡ
  • ಮಾರ್ಚ್​ 27 ಗುರುವಾರ: ಗಣಿತ, ಸಮಾಜ ಶಾಸ್ತ್ರ
  • ಏಪ್ರಿಲ್​ 01 ಮಂಗಳವಾರ: ಅರ್ಥಶಾಸ್ತ್ರ
  • ಏಪ್ರಿಲ್​​ 02 ಬುಧವಾರ: ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ಥಾನಿ ಸಂಗೀತ, ಕರ್ನಾಟಕ ಸಂಗೀತ ಪರೀಕ್ಷೆಗಳು ನಡೆಯಲಿವೆ. ಈ ಎಲ್ಲ ಪರೀಕ್ಷೆಗಳು ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿವೆ.

ಪರೀಕ್ಷೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಅಧಿಕೃತ ವೆಬ್​ಸೈಟ್​ https://kseab.karnataka.gov.in/ ಗೆ ಭೇಟಿ ನೀಡಿ.

ಪಿಯುಸಿ ವೇಳಾಪಟ್ಟಿ ಪಿಡಿಎಫ್​​

ದ್ವಿತೀಯ ಪಿಯುಸಿ ತಾತ್ಕಾಲಿಕ ವೇಳಾಪಟ್ಟಿ ಡೌನ್​ಲೋಡ್​ ಮಾಡಲು ಇಲ್ಲಿ ಕ್ಲಿಕ್​ ಮಾಡಿ

ಎಸ್​ಎಸ್​ಎಲ್​ಸಿ ತಾತ್ಕಾಲಿಕ ವೇಳಾಪಟ್ಟಿ ಡೌನ್​ಲೋಡ್​ ಮಾಡಲು ಇಲ್ಲಿ ಕ್ಲಿಕ್​ ಮಾಡಿ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:08 pm, Mon, 2 December 24

ವಿನಯ್​ ಕಾಶಪ್ಪನವರ್​

ವಿನಯಕುಮಾರ್ ಕಾಶಪ್ಪನವರ್ ಅವರು ಸಮೂಹ ಸಂವಹನ ಹಾಗೂ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪತ್ರಿಕೋದ್ಯಮದಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಕಳೆದ 8 ವರ್ಷಗಳಿಂದ ಟಿವಿ9 ಕನ್ನಡದಲ್ಲಿ ಹಿರಿಯ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ 10 ವರ್ಷಗಳ ವರದಿಗಾರಿಕೆ ಅನುಭವ ಹೊಂದಿದ್ದು, ಸಮಾಜಮುಖಿ ಹಾಗೂ ತನಿಖಾ ವರದಿಗಳ ಮೂಲಕ ಜನಪರ ವಿಷಯಗಳನ್ನು ಬೆಳಕಿಗೆ ತರುತ್ತಿದ್ದಾರೆ.

Read More
Loading...
Unable to load recommendations.
Follow Us