Karnataka SSLC Exam Result-2: SSLC ಪರೀಕ್ಷೆ-2 ಫಲಿತಾಂಶ ಇಂದು ಪ್ರಕಟ, ರಿಸಲ್ಟ್​ ನೋಡವುದು ಹೇಗೆ? ಇಲ್ಲಿದೆ ವಿವರ

|

Updated on: Jul 10, 2024 | 8:32 AM

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಇಂದು (ಜು.10) ಎಸ್​​ಎಸ್​ಎಲ್​​ಸಿ ಪರೀಕ್ಷೆ-2 ಫಲಿತಾಂಶ ಬಿಡುಗಡೆ ಮಾಡಲಿದೆ. ಫಲಿತಾಂಶವನ್ನು ಪರಿಶೀಲಿಸುವುದು ಮತ್ತು ಫಲಿತಾಂಶ ಪಟ್ಟಿ ಡೌನ್​ಲೋಡ್​ ಮಾಡುವುದು ಹೇಗೆಂಬುವುದನ್ನು ತಿಳಿದುಕೊಳ್ಳಲು ಈ ಸುದ್ದಿ ಓದಿ.

Karnataka SSLC Exam Result-2: SSLC ಪರೀಕ್ಷೆ-2 ಫಲಿತಾಂಶ ಇಂದು ಪ್ರಕಟ, ರಿಸಲ್ಟ್​ ನೋಡವುದು ಹೇಗೆ? ಇಲ್ಲಿದೆ ವಿವರ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಜುಲೈ 10: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSREB) 2024ರ ಎಸ್​​ಎಸ್​ಎಲ್​​ಸಿ (SSLC) ಪರೀಕ್ಷೆ-02 ಫಲಿತಾಂಶವನ್ನು ಇಂದು (ಜು.01) ಬೆಳಗ್ಗೆ 11:30ಕ್ಕೆ ಬಿಡುಗಡೆ ಮಾಡಲಿದೆ ಎಂದು ಮೂಲಗಳಿಂದ ಮಾಹಿತಿ ದೊರೆತಿದೆ. ಕೆಎಸ್​ಆರ್​ಇಬಿಯ ಅಧಿಕೃತ ವೆಬ್​ ಸೈಟ್​​ https://karresults.nic.in ನಲ್ಲಿ ಫಲಿತಾಂಶ ಪ್ರಕಟವಾಗಲಿದೆ.

ವಿದ್ಯಾರ್ಥಿಗಳು ಫಲಿತಾಂಶವನ್ನು ಪರಿಶೀಲಿಸಲು ಮತ್ತು ಫಲಿತಾಂಶ ಪಟ್ಟಿ ಡೌನ್​ಲೋಡ್​ ಮಾಡಲು ತಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ಬಳಸಿಕೊಂಡು ಕೆಎಸ್​ಇಎಬಿ ಅಧಿಕೃತ ವೆಬ್​​ಸೈಟ್​ kseab.karnataka.gov.in ಅಥವಾ karresults.nic.inಗೆ ಭೇಟಿ ನೀಡಿ.

ರಾಜ್ಯದ 724 ಪರೀಕ್ಷಾ ಕೇಂದ್ರಗಳಲ್ಲಿ ಜೂನ್​ 14 ರಿಂದ 21ರವರಗೆ ಎಸ್​ಎಸ್​ಎಲ್​ಸಿ ಪರೀಕ್ಷೆ-02 ನಡೆದವು. ಏಳು ಮಾಧ್ಯಮಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು. 1.44 ಬಾಲಕರು, 79,148 ಬಾಲಕಿಯರು ಸೇರಿದಂತೆ 2.23 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಇದರಲ್ಲಿ 13,085 ವಿದ್ಯಾರ್ಥಿಗಳು ಫಲಿತಾಂಶ ವೃದ್ದಿಗಾಗಿ ಎರಡನೇ ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದರು. ವಾರ್ಷಿಕ ಪರೀಕ್ಷೆಯಲ್ಲಿ ಉತ್ತೀರ್ಣವಾಗದ ಅಥವಾ ಇನ್ನೂ ಹೆಚ್ಚಿನ ಅಂಕಗಳನ್ನು ಬಯಸಿದ ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗಿದ್ದರು.

ಎಸ್​ಎಸ್​ಎಲ್​ಸಿ ಪರೀಕ್ಷೆ-2ರ ವಿಜ್ಞಾನ, ಇಂಗ್ಲಿಷ್​ ಮತ್ತು ಕನ್ನಡ ವಿಷಯದ ಕೀ ಉತ್ತರಗಳನ್ನು ಜೂನ್​ 21 ರಂದು ಮಂಡಲಿ ಪ್ರಕಟಿಸಿತ್ತು.

ಫಲಿತಾಂಶ ಪರಿಶೀಲಿಸುವುದು ಹೇಗೆ

ಹಂತ 1: kseab.karnataka.gov.in ಅಥವಾ karresults.nic.inನಲ್ಲಿ ಕೆಎಸ್​ಇಎಬಿ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ.

ಹಂತ 2: ಮುಖಪುಟದಲ್ಲಿ ಕರ್ನಾಟಕ ಎಸ್​ಎಸ್​ಎಲ್​ಸಿ ಪೂರಕ ಪರೀಕ್ಷೆ ಲಿಂಕ್​ ಅನ್ನು ಕ್ಲಿಕ್​ ಮಾಡಿ.

ಹಂತ 3: ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ.

ಹಂತ 4: Submit ಬಟನ್​ ಮೇಲೆ ಕ್ಲಿಕ್​ ಮಾಡಿ

ಹಂತ 5: ನಿಮ್ಮ ಫಲಿತಾಂಶ ಪರದೆಯ ಮೇಲೆ ಕಾಣುತ್ತದೆ.

ಹಂತ 6: ಕರ್ನಾಟಕ ಎಸ್​ಎಸ್​ಎಲ್​ಸಿ ಪೂರಕ ಪರೀಕ್ಷೆ ಫಲಿತಾಂಶವನ್ನು ಡೌನ್​ಲೋಡ್​ ಮಾಡಿ ಮತ್ತು ಪ್ರಿಂಟ್​ಔಟ್​ ಅನ್ನು ತೆಗೆದುಕೊಳ್ಳಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:31 am, Wed, 10 July 24