SSLC Key Answers: ಎಸ್​ಎಸ್​ಎಲ್​ಸಿ ಪರೀಕ್ಷೆ ಕೀ ಉತ್ತರಗಳು ಪ್ರಕಟ, ಚೆಕ್​ ಮಾಡುವುದು ಹೇಗೆ ಇಲ್ಲಿದೆ ಮಾಹಿತಿ

|

Updated on: Apr 17, 2023 | 3:18 PM

ಮಾರ್ಚ 31 ರಿಂದ ಏಪ್ರಿಲ್​ 15ರವೆಗೆ ನಡೆದ ಎಸ್​ಎಸ್​ಎಲ್​​ಸಿ ಪರೀಕ್ಷೆಯ ಮಾದರಿ ಉತ್ತರಗಳನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಇಂದು (ಏ.17) ಪ್ರಕಟಿಸಿದೆ.

SSLC Key Answers: ಎಸ್​ಎಸ್​ಎಲ್​ಸಿ ಪರೀಕ್ಷೆ ಕೀ ಉತ್ತರಗಳು ಪ್ರಕಟ, ಚೆಕ್​ ಮಾಡುವುದು ಹೇಗೆ ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಮಾರ್ಚ 31 ರಿಂದ ಏಪ್ರಿಲ್​ 15ರವೆಗೆ ನಡೆದ ಎಸ್​ಎಸ್​ಎಲ್​​ಸಿ ಪರೀಕ್ಷೆಯ (SSLC Exam) ಮಾದರಿ ಉತ್ತರಗಳನ್ನು (Key Answers) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ಇಂದು (ಏ.17) ಪ್ರಕಟಿಸಿದೆ. ವಿದ್ಯಾರ್ಥಿಗಳು ಮಾದರಿ ಉತ್ತರಗಳನ್ನು ಇಲಾಖೆಯ ಅಧಿಕೃತ ವೆಬ್​ಸೈಟ್​ kseab.karnataka.gov.in ನಲ್ಲಿ ಪರಿಶೀಲಿಸಿ ಹಾಗೇ ವಿದ್ಯಾರ್ಥಿಗಳು ಆನ್​​ಲೈನ್​ನಲ್ಲಿ ಮಾತ್ರ ಆಕ್ಷೇಪ ಸಲ್ಲಿಸಬಹುದಾಗಿದೆ.

ಮಾದರಿ ಉತ್ತರಗಳನ್ನು ಡೌನ್​ಲೋಡ್​ ಮಾಡಿಕೊಳ್ಳುವ ವಿಧಾನ

ಹಂತ 1: ಇಲಾಖೆಯ ಅಧಿಕೃತ ವೆಬ್​ಸೈಟ್​ kseab.karnataka.gov.in ಭೇಟಿ ನೀಡಿ

ಹಂತ 2: ಮುಖಪುಟದಲ್ಲಿ ನಿಮಗೆ ಮಾದರಿ ಉತ್ತರಗಳಿಗಾಗಿ ಮತ್ತು ಆಕ್ಷೇಪಣೆಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ ಎಂದು ಕಾಣ ಸಿಗಲಿದ್ದು, ಅದರ ಮೇಲೆ ಕ್ಲಿಕ್ ಮಾಡಿ

ಹಂತ 3: ಎಸ್​ಎಸ್​ಎಲ್​ಸಿ 2023 ಮಾದರಿ ಉತ್ತರಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ ಅಂತ ಕಾಣಸಿಗುತ್ತೆ. ಅದರ ಮೇಲೆ ಕ್ಲಿಕ್​​ ಮಾಡಿ.

ಹಂತ 4: ಆಗ ಕರ್ನಾಟಕ ಎಸ್​ಎಸ್​ಎಲ್​ಸಿ ಮಾದರಿ ಉತ್ತರ 2023 ಪುಟ ತೆರೆಯುತ್ತದೆ.

ಹಂತ 5: ನಂತರ ನೀವು ವಿಚಯವಾರು ಮಾದರಿ ಉತ್ತರಗಳನ್ನು ತಿಳಿದುಕೊಳ್ಳಬಹುದು

ಹಂತ 6: ಬಳಿಕ ಮಾದರಿ ಉತ್ತರಗಳ ಪಿಡಿಎಫ್ ಅನ್ನು ಕೂಡ​ ಡೌನ್​ಲೋಡ್​ ಮಾಡಿಕೊಳ್ಳಬಹುದು.

ಮಾದರಿ ಉತ್ತರಗಳನ್ನು ನೋಡಲು ಈ ಕೆಳಗಿನ ಲಿಂಕ್​ ಮೇಲೆ ಕ್ಲಿಕ್ ಮಾಡಿ

https://kseeb.karnataka.gov.in/objectionentry/SSLC_KeyAnswers

ಎಸ್​ಎಸ್​ಎಲ್​ಸಿ ಪರೀಕ್ಷೆಯ ಮೌಲ್ಯಮಾಪನ ಈಗಾಗಲೆ ಆರಂಭವಾಗಿದ್ದು, ಮೇ ತಿಂಗಳಲ್ಲಿ ಫಲಿತಾಂಶ ಹೊರ ಬೀಳಲಿದೆ.

Published On - 12:51 pm, Mon, 17 April 23