2022-23ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ(Karnataka SSLC Result 2023) ಹೊರಬಿದ್ದಿದೆ. ಇಂದು(ಮೇ 08) ಮಧ್ಯಾಹ್ನದ ನಂತರ ಆಯಾ ಶಾಲೆಗಳಲ್ಲಿಯೇ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ. ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿರುವ ಮೊಬೈಲ್ ನಂಬರ್‌ಗಳಿಗೆ ಎಸ್‌ಎಂಎಸ್ ಮೂಲಕ ಫಲಿತಾಂಶ ಕಳುಹಿಸಲಾಗುತ್ತದೆ. ಇನ್ನು ಫೇಲ್ ಆದ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಭಯಪಡುವುದು ಬೇಡ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎನ್ನುವುದು ವಿದ್ಯಾರ್ಥಿಗಳ ಪಾಲಿಗೆ ಮಹತ್ತರ ಘಟ್ಟ ಹೌದು, ಹಾಗಂತ ಇದು ಜೀವನದ ಅಂತಿಮವಲ್ಲ. ಪರೀಕ್ಷೆ ಎನ್ನುವುದು ವಿದ್ಯಾರ್ಥಿಗಳ ಜೀವನದ ಭಾಗವಷ್ಟೇ, ಪರೀಕ್ಷೆಯಲ್ಲಿ ಫೇಲ್ ಆದ ತಕ್ಷಣ ಜೀವನ ಮುಗಿಯಿತು ಎಂದಲ್ಲ. ಪೂರಕ ಪರೀಕ್ಷೆ ಬರೆಯಹುದು.
2022-23ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲ್ ಆದ ವಿದ್ಯಾರ್ಥಿಗಳು ಪೂರಕ ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳಲು ಇಂದಿನಿಂದ ಮೇ 15ರವರೆಗೆ ಅವಕಾಶ ನೀಡಲಾಗಿದೆ. ಇನ್ನು ಪೂರಕ ಪರೀಕ್ಷೆ ಯಾವಾಗ ನಡೆಯಲಿದೆ ಎನ್ನುವುದನ್ನು ಶಿಕ್ಷಣ ಇಲಾಖೆ ಮುಂದಿನ ವಾರ ವೇಳಾಪಟ್ಟಿ ಬಿಡುಗಡೆ ಮಾಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳು ಹಳೆಯದ್ದನ್ನು ಮರೆತು ಪೂಕರ ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳಿ. ಹಾಗೇ ಒಳ್ಳೆ ಅಂಕ ತೆಗೆಯಲು ಈಗಿನಿಂದಲೇ ತಯಾರಿ ಮಾಡಿಕೊಳ್ಳಿ. ಪರೀಕ್ಷೆ ಹೇಗಿರುತ್ತೆ? ಎನ್ನುವುದು ಈಗಾಗಲೇ ನಿಮಗೆ ತಿಳಿದಿದೆ.
ಪರೀಕ್ಷೆಯಲ್ಲಿ ಮಕ್ಕಳು ಅನುತ್ತೀರ್ಣರಾಗಲು ಹಲವಾರು ಕಾರಣಗಳಿರುತ್ತವೆ. ಪೋಷಕರು, ಮನೆಯ ವಾತಾವರಣ, ಶಿಕ್ಷಕರು, ಶಾಲಾ ವಾತಾವರಣ, ಸ್ನೇಹಿತರ ಬಳಗ, ಮಕ್ಕಳ ಗ್ರಹಣಶಕ್ತಿ, ಮಕ್ಕಳಲ್ಲಿನ ಆತ್ಮವಿಶ್ವಾಸ, ಶೈಕ್ಷಣಿಕ ವಿಷಯದಲ್ಲಿ ಆಸಕ್ತಿಯ ಕೊರತೆ, ಪರೀಕ್ಷೆಯ ಕುರಿತ ಭಯ, ಆತಂಕ ಈ ಎಲ್ಲಾ ಅಂಶಗಳು ಮಕ್ಕಳಲ್ಲಿ ಆತ್ಮವಿಶ್ವಾಸ ಕುಗ್ಗುವಂತೆ ಮಾಡಿ ಪರೀಕ್ಷೆಯಲ್ಲಿ ಕಡಿಮೆ ಅಂಕ ತೆಗೆಯಲು ಅಥವಾ ಫೇಲ್ ಆಗಲು ಕಾರಣವಾಗಬಹುದು. ಈಗ ಅನುತ್ತೀರ್ಣರಾದವರು ಇವೆಲ್ಲಾ ಚಿಂತನೆಗಳನ್ನು ಬಿಟ್ಟು ಫ್ರೆಶ್ ಆಗಿ ಮತ್ತೊಮ್ಮೆ ಪರೀಕ್ಷೆ ಬರೆದು ಒಳ್ಳೆ ಅಂಕಗಳಿಸಲು ಅವಕಾಶ ಇದೆ.
ಶಿಕ್ಷಣ ಇಲಾಖೆಯು ಪೂರಕ ಪರೀಕ್ಷೆ ವೇಳಾಪಟ್ಟಿ ಪ್ರಕಟಗೊಂಡ ತಕ್ಷಣ ನಿಮ್ಮ ಟಿವಿ9 ಕನ್ನಡ ಸುದ್ದಿ ನೀಡಲಿದ್ದು, ಅಲ್ಲಿಯವರೆಗೂ ಟಿವಿ9 ಡಿಜಿಟಲ್ಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಾ ಇರಿ.
Published On - 12:03 pm, Mon, 8 May 23