KCET Result 2024: ಕೆಸಿಇಟಿ ಫಲಿತಾಂಶ ಪ್ರಕಟ; ಸೀಟು ಹಂಚಿಕೆ, ಕೌನ್ಸಲಿಂಗ್ ಯಾವಾಗ? ಇಲ್ಲಿದೆ ವಿವರ

|

Updated on: Jun 03, 2024 | 3:55 PM

ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಆದರೂ ಕೂಡ ಇನ್ನೂ 3 ಸಾವಿರ ವಿದ್ಯಾರ್ಥಿಗಳ ಫಲಿತಾಂಶ ಬಿಡುಗಡೆಯಾಗಬೇಕಿದೆ. ಈ ಫಲಿತಾಂಶ ಬಿಡುಗಡೆ, ಕೌನ್ಸಲಿಂಗ್​, ಸೀಟು ಹಂಚಿಕೆ ಯಾವಾಗ ನಡೆಯುತ್ತದೆ? ಇಲ್ಲಿದೆ ವಿವರ

KCET Result 2024: ಕೆಸಿಇಟಿ ಫಲಿತಾಂಶ ಪ್ರಕಟ; ಸೀಟು ಹಂಚಿಕೆ, ಕೌನ್ಸಲಿಂಗ್ ಯಾವಾಗ? ಇಲ್ಲಿದೆ ವಿವರ
ಕೆಇಎ
Follow us on

ಬೆಂಗಳೂರು, ಜೂನ್​ 03: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA), ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET-2024) ಫಲಿತಾಂಶ ಪ್ರಕಟಿಸಿದೆ. ಆದರೆ ಇನ್ನೂ 3 ಸಾವಿರ ವಿದ್ಯಾರ್ಥಿಗಳ ಫಲಿತಾಂಶ ಹೊರಬರಬೇಕಿದೆ. ಈ 3 ಸಾವಿರ ಅಭ್ಯರ್ಥಿಗಳ ಫಲಿತಾಂಶ ಪ್ರಕಟವಾಗದೆ ಇರುವುದಕ್ಕೆ ಕೆಇಎ ಸ್ಪಷ್ಟನೆ ನೀಡಿದೆ. ಅದು “ಪಿಯುಸಿಯಲ್ಲಿ ನೀಡಿದ್ದ ಅಂಕಗಳನ್ನು ಸಿಇಟಿಗೆ ಅರ್ಜಿ ಸಲ್ಲಿಸುವಾಗ ಕೆಲ ಅಭ್ಯರ್ಥಿಗಳು ತಪ್ಪಾಗಿ ನಮೂದಿಸಿದ್ದಾರೆ. ಅಂಥವರ ರ‍್ಯಾಂಕ್​ ಪ್ರಕಟಿಸಿಲ್ಲ. ಇಂತಹ ಅಭ್ಯರ್ಥಿಗಳು ಕೆಇಎ ವೆಬ್​ಸೈಟ್​ಗೆ ಭೇಟಿ ನೀಡಿ ಅಂಕಗಳನ್ನು ಮತ್ತೊಮ್ಮೆ ನಮೂದಿಸಿದರೆ, ಅವರ ರ‍್ಯಾಂಕ್ ಅನ್ನು ಒಂದೆರಡು ದಿನಗಳಲ್ಲಿ ತಿಳಿಸಲಾಗುವುದು” ಎಂದು ಕೆಇಎ ಅಧಿಕಾರಿಗಳು ತಿಳಿಸಿದ್ದಾರೆ. ಸಿಇಟಿ ಫಲಿತಾಂಶ ನಂತರ ಮುಂದೇನು? ಕೌನ್ಸಲಿಂಗ್​ ಯಾವಾಗ? ಸೀಟು ಹಂಚಿಕೆ ವಿವರ ಇಲ್ಲಿದೆ

ಕೌನ್ಸಲಿಂಗ್ ಯಾವಾಗ?

ನೀಟ್​ ಫಲಿತಾಂಶದ ನಂತರ ಮತ್ತು ಅದರ ಕೌನ್ಸಲಿಂಗ್​​ ವೇಳಾಪಟ್ಟಿ ನೋಡಿಕೊಂಡು ವೈದ್ಯಕೀಯ, ಇಂಜಿನಿಯರಿಂಗ್​ ಸೇರಿದಂತೆ ಎಲ್ಲ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಒಟ್ಟಿಗೆ ಕೌನ್ಸೆಲಿಂಗ್​ ನಡೆಸಲಾಗುವುದು ಎಂದು ಕೆಇಎ ತಿಳಿಸಿದೆ.

ಇದನ್ನೂ ಓದಿ: ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಇನ್ಮುಂದೆ ವಿದ್ಯಾರ್ಥಿಗಳಿಗೆ ಸ್ಪೋಕನ್ ಇಂಗ್ಲಿಷ್ ತರಗತಿ

ಸೀಟು ಹಂಚಿಕೆ ಯಾವಾಗ?

ಕೆಸಿಇಟಿ 2024 ಸೀಟು ಹಂಚಿಕೆಯ ಫಲಿತಾಂಶವನ್ನು cetonline.karnataka.gov.in ನಲ್ಲಿ ಪ್ರಕಟಿಸುತ್ತದೆ. ಇನ್ನು ಸೀಟಿ ಹಂಚಿಕೆ ಪ್ರಕ್ರಿಯೆಯನ್ನು ಸರ್ಕಾರ ಡ್ರಾಫ್ಟ್​​ ಸೀಟ್​ ಮ್ಯಾಟ್ರಿಕ್​ ಪಟ್ಟಿಯನ್ನು ಬಿಡುಗಡೆ ಮಾಡಿದ ನಂತರ ಆರಂಭಿಸಲಾಗುವುದು ಎಂದು ಕೆಇಎ ಟಿವಿ9ಗೆ ತಿಳಿಸಿದೆ.

ಸೀಟು ಹಂಚಿಕೆ ಪರಿಶೀಲಿಸುವುದು ಹೇಗೆ?

ಸೀಟು ಹಂಚಿಕೆಯನ್ನು ಅಭ್ಯರ್ಥಿಗಳು ಪರಿಶೀಲಿಸಲು ಕೆಇಎಯ ಅಧಿಕೃತ ವೆಬ್​ಸೈಟ್ kea.kar,nic.in/cetonline.karnataka.gov.in ಗೆ ಭೇಟಿ ನೀಡಿ

ಸಿಇಟಿ ಸೀಟು ಹಂಚಿಕೆ ಲಿಂಕ್​ ಅನ್ನು ಕ್ಲಿಕ್​ ಮಾಡಿ

ಈಗ, ಅಭ್ಯರ್ಥಿಗಳು ನಿಮ್ಮ ಸಿಇಟಿ ನೋಂದಣಿ ಸಂಖ್ಯೆ ನಮೂದಿಸಿ

submit ಬಟನ್​ ಮೇಲೆ ಕ್ಲಿಕ್​ ಮಾಡಿ

ಆಗ ನಿಮಗೆ ಸಿಟು ಹಂಚಿಕೆ 2024 ಕಾಣುತ್ತದೆ.

ಅಧಿಕೃತ ವೆಬ್‌ಸೈಟ್ cetonline.karnataka.gov.in ನಲ್ಲಿ ಕೆಸಿಇಟಿ 2024 ಕೌನ್ಸೆಲಿಂಗ್‌ನ ಪ್ರತಿ ಸುತ್ತಿನ ನಂತರ ಕೆಇಸಿಟಿ 2024 ಸೀಟು ಹಂಚಿಕೆಯನ್ನು ಕೆಇಎ ಬಿಡುಗಡೆ ಮಾಡುತ್ತದೆ. ಸೀಟು ಹಂಚಿಕೆ ಆಗಸ್ಟ್​​​ನಲ್ಲಿ ತಾತ್ಕಾಲಿಕವಾಗಿ ಬಿಡುಗಡೆಯಾಗುವ ನಿರೀಕ್ಷೆ ಇದೆ.

ದಾಖಲಾತಿ ಪರಿಶೀಲನೆ ಹೇಗೆ?

ವಿಶೇಷ ಮಕ್ಕಳ ವೈದ್ಯಕೀಯ ತಪಾಸಣೆ ಬಿಟ್ಟರೆ ಬಹುತೇಕ ಎಲ್ಲ ದಾಖಲೆಗಳ ಪರಿಶೀಲನೆ ಆನ್​ ಲೈನ್​ನಲ್ಲಿ ನಡೆಯಲಿದೆ. ಕೆಇಎ ಕಚೇರಿಗೆ ಬರುವ ಅಗತ್ಯವಿಲ್ಲ, ಅಭ್ಯರ್ಥಿಗಳು ಅಪ್ಲೋಡ್​ ಮಾಡಿರುವ ಶೈಕ್ಷಣಿಕ ದಾಖಲೆಗಳನ್ನು ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆನ್​ ಲೈನ್​ನಲ್ಲಿ ಪರಿಶೀಲನೆ ನಡೆಸುತ್ತಾರೆ ಎಂದು ಕೆಇಎ ತಿಳಿಸಿದೆ.

ವ್ಯಾಸಂಗ ಪ್ರಮಾಣ ಪತ್ರ, ಕನ್ನಡ ಮಾಧ್ಯಮ ವ್ಯಾಸಂಗ ಪ್ರಮಾಣಪತ್ರ, ಗ್ರಾಮೀಣ ವ್ಯಾಸಂಗ ಪ್ರಮಾಣ ಪತ್ರ, ಧಾರ್ಮಿಕ ಅಲ್ಪಸಂಖ್ಯಾತ ಮೀಸಲಾತಿ, ಭಾಷಾ ಅಲ್ಪಸಂಖ್ಯಾತ ಮೀಸಲಾತಿ, ಪ್ರವೇಶ ಸಂಖ್ಯೆ, ರ‍್ಯಾಂಕಿಂಗ್​​ ಪಡೆದ ಸ್ಥಾನ ಪ್ರಮಾಣ ಪತ್ರಗಳನ್ನು ತರಬೇಕು.

ಹೆಚ್ಚಿನ ಮಾಹಿತಿಗಾಗಿ ಕೆಇಎ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 3:26 pm, Mon, 3 June 24