ಆರ್‌ಡಿ ದಾಖಲಾತಿ ಪರಿಶೀಲನೆಗೆ ಮತ್ತೊಮ್ಮೆ ಅವಕಾಶ ನೀಡಿದ KEA: ಜುಲೈ 16 ಕೊನೆಯ ದಿನ

|

Updated on: Jul 06, 2023 | 10:56 PM

ಪ್ರಮಾಣಪತ್ರಗಳ ಆರ್‌ಡಿ ಸಂಖ್ಯೆ ತಾಳೆ ಹೊಂದದೆ ತಿರಸ್ಕೃತಗೊಂಡ ಹಿನ್ನೆಲೆ ಆರ್‌ಡಿ ದಾಖಲಾತಿ ಸರಿಪಡಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಜುಲೈ 16ರವರೆಗೆ ಅವಕಾಶ ನೀಡಿದೆ. ಈ ಕುರಿತಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಣೆ ಹೊರಡಿಸಿದೆ.

ಆರ್‌ಡಿ ದಾಖಲಾತಿ ಪರಿಶೀಲನೆಗೆ ಮತ್ತೊಮ್ಮೆ ಅವಕಾಶ ನೀಡಿದ KEA: ಜುಲೈ 16 ಕೊನೆಯ ದಿನ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಪ್ರಮಾಣಪತ್ರಗಳ ಆರ್‌ಡಿ ಸಂಖ್ಯೆ ತಾಳೆ ಹೊಂದದೆ ತಿರಸ್ಕೃತಗೊಂಡ ಹಿನ್ನೆಲೆ ಆರ್‌ಡಿ ದಾಖಲಾತಿ ಸರಿಪಡಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಜುಲೈ 16ರವರೆಗೆ ಅವಕಾಶ ನೀಡಿದೆ. ಈ ಕುರಿತಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಣೆ ಹೊರಡಿಸಿದೆ. 2023ನೇ ಸಾಲಿನ ವಿವಿಧ ವೃತ್ತಿಪರ ಕೋಸ್​​ಗಳಿಗೆ ಪ್ರವೇಶ ಬಯಸಿ ಸಿಇಟಿ ಬರೆದಿರುವವರ ಪೈಕಿ ಕೆಲ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಸಲ್ಲಿಸಿರುವ ಅರ್ಜಿಗಳಲ್ಲಿ ಸರಿಯಾದ ಆರ್‌ಡಿ ಸಂಖ್ಯೆಯನ್ನು ನಮೂದಿಸಿಲ್ಲ ಎಂದು ತಿಳಿಸಲಾಗಿದೆ.

ಅಭ್ಯರ್ಥಿಗಳ ಹೆಸರು, ಪ್ರಮಾಣ ಪತ್ರ ಚಾಲ್ತಿಯಲ್ಲಿ ಇಲ್ಲದೇ ಇರುವುದು, ಆರ್‌ಡಿ ಸಂಖ್ಯೆ ದಾಖಲಿಸದೇ ಇರುವುದು, ಅಭ್ಯರ್ಥಿಗಳ ಹೆಸರಿನಲ್ಲಿ ಪ್ರಮಾಣ ಪತ್ರ ಇಲ್ಲದೇ ಇರುವುದು ಹೀಗೆ ವಿವಿಧ ಕಾರಣಗಳಿಂದ ಅರ್‌ಡಿ ಸಂಖ್ಯೆಗಳು ತಾಳೆ ಹೊಂದದೇ ತಿರಸ್ಕೃತಗೊಂಡಿರುವ ಅಭ್ಯರ್ಥಿಗಳ ಪಟ್ಟಿಮಾಡಿ ಪ್ರಾಧಿಕಾರದ ವೆಬ್‌ ಸೈಟಿನಲ್ಲಿ ಪ್ರಕಟಿಸಿ ಸರಿಯಾದ ಆರ್‌ಡಿ ಸಂಖ್ಯೆಯನ್ನು ದಿನಾಂಕ ಜೂನ್​ 6ರಿಂದ ಜುಲೈ 12ರಂದು ದಾಖಲಿಸಲು ಈ ಹಿಂದೆ ಸೂಚಿಸಲಾಗಿತ್ತು.

ಇದನ್ನೂ ಓದಿ: UGC NET June 2023: ಉತ್ತರ ಕೀ ಬಿಡುಗಡೆ; ಡೌನ್‌ಲೋಡ್ ಮಾಡಲು ಈ ಹಂತಗಳನ್ನು ಅನುಸರಿಸಿ

ಆದರೆ ಸಾಕಷ್ಟು ಅಭ್ಯರ್ಥಿಗಳು ತಮ್ಮ ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ ಮತ್ತು ಕಲ್ಯಾಣ ಕರ್ನಾಟಕ 371(ಜೆ) ಪ್ರಮಾಣ ಪತ್ರದ ಆ‌ರ್​ಡಿ ಸಂಖ್ಯೆಯನ್ನು ನಮೂದಿಸಲು ಅವಕಾಶ ನೀಡುವಂತೆ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಮನವಿ ಮಾಡಿದ್ದರು.

ಇದನ್ನೂ ಓದಿ: ಸಹಾಯಕ ಪ್ರಾಧ್ಯಾಪಕ ಹುದ್ದೆಯ ನೇರ ನೇಮಕಾತಿಗೆ ಎನ್​ಇಟಿ​, ಎಸ್​ಇಟಿ ಅಥವಾ ಎಸ್​ಎಲ್​ಇಟಿ ಕಡ್ಡಾಯ: ಯುಜಿಸಿ

ಆದ್ದರಿಂದ ಅರ್ಜಿಯಲ್ಲಿ ಪ್ರವರ್ಗಗಳನ್ನು ನಮೂದಿಸಿರುವ, ಆದರೆ ಆರ್‌ಡಿ ಸಂಖ್ಯೆಯು ಇನ್‌ವ್ಯಾಲಿಡ್ ಎಂದು ತೋರಿಸಿದ್ದಲ್ಲಿ, ಅಂತಹ ಅಭ್ಯರ್ಥಿಗಳು ಸರಿಯಾದ ಆರ್‌ಡಿ ಸಂಖ್ಯೆಯನ್ನು ದಿನಾಂಕ ಜುಲೈ 6ರ ಸಂಜೆ 4.00 ರಿಂದ ಜುಲೈ 16ರ ಸಂಜೆ 6.00 ರವರೆಗೆ ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:54 pm, Thu, 6 July 23