ಕೆಇಎ ಯುಜಿಸಿಇಟಿ 2026: 3ನೇ ಸುತ್ತಿನ ಅಂತಿಮ ಸೀಟು ಹಂಚಿಕೆ ಫಲಿತಾಂಶ ಪ್ರಕಟ; ಕಾಲೇಜು ಪ್ರವೇಶ ಕಡ್ಡಾಯ, ತಪ್ಪಿದರೆ ಕಾನೂನು ಕ್ರಮ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) UGCET 2026ರ 3ನೇ ಸುತ್ತಿನ ಅಂತಿಮ ಸೀಟು ಹಂಚಿಕೆ ಫಲಿತಾಂಶ ಪ್ರಕಟಿಸಿದೆ. ಎಂಜಿನಿಯರಿಂಗ್, ನರ್ಸಿಂಗ್ ಸೇರಿದಂತೆ ವೃತ್ತಿಪರ ಕೋರ್ಸ್‌ಗಳ ಅಭ್ಯರ್ಥಿಗಳು ತಮ್ಮ ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು. ಸೆಪ್ಟೆಂಬರ್ 8-10ರೊಳಗೆ ಶುಲ್ಕ ಪಾವತಿಸಿ, ಸೆಪ್ಟೆಂಬರ್ 11ರ ಸಂಜೆ 6 ಗಂಟೆಯೊಳಗೆ ಕಾಲೇಜಿಗೆ ವರದಿ ಮಾಡುವುದು ಕಡ್ಡಾಯ. ತಪ್ಪಿದಲ್ಲಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ.

ಕೆಇಎ ಯುಜಿಸಿಇಟಿ 2026: 3ನೇ ಸುತ್ತಿನ ಅಂತಿಮ ಸೀಟು ಹಂಚಿಕೆ ಫಲಿತಾಂಶ ಪ್ರಕಟ; ಕಾಲೇಜು ಪ್ರವೇಶ ಕಡ್ಡಾಯ, ತಪ್ಪಿದರೆ ಕಾನೂನು ಕ್ರಮ
ಸಾಂದರ್ಭಿಕ ಚಿತ್ರ
Edited By:

Updated on: Sep 07, 2026 | 7:18 PM

ಬೆಂಗಳೂರು, ಸೆ.7: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಇಂಜಿನಿಯರಿಂಗ್, ಪಶುವೈದ್ಯಕೀಯ , ಕೃಷಿ ವಿಜ್ಞಾನ, ನರ್ಸಿಂಗ್ ಹಾಗೂ ಫಾರ್ಮಸಿ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗಾಗಿ ನಡೆದ UGCET-2026ರ 3ನೇ (ಅಂತಿಮ) ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಪ್ರಕಟಿಸಿದೆ. ಅಭ್ಯರ್ಥಿಗಳು ತಮ್ಮ ಲಾಗಿನ್ ವಿವರಗಳನ್ನು ಬಳಸಿ ಅಧಿಕೃತ ವೆಬ್‌ಸೈಟ್‌ನಲ್ಲಿ ಫಲಿತಾಂಶವನ್ನು ಪರಿಶೀಲಿಸಬಹುದಾಗಿದೆ.

ಸೀಟು ಹಂಚಿಕೆಯಾದ ಅಭ್ಯರ್ಥಿಗಳು ನಿಗದಿಪಡಿಸಿದ ಶುಲ್ಕವನ್ನು (ಈಗಾಗಲೇ ಪಾವತಿಸದಿದ್ದರೆ) ಸೆಪ್ಟೆಂಬರ್ 8 ರಿಂದ ಸೆಪ್ಟೆಂಬರ್ 10, 2026ರ ಒಳಗಾಗಿ ಪಾವತಿಸಿ, ‘ಸೀಟ್ ಕನ್ಫರ್ಮೇಷನ್ ಸ್ಲಿಪ್’ ಡೌನ್‌ಲೋಡ್ ಮಾಡಿಕೊಳ್ಳಬೇಕು. ಪ್ರವೇಶ ಪತ್ರವನ್ನು ಪಡೆದ ಅಭ್ಯರ್ಥಿಗಳು ಸೆಪ್ಟೆಂಬರ್ 11, 2026ರ ಸಂಜೆ 6:00 ಗಂಟೆಯ ಒಳಗಾಗಿ ತಮಗೆ ಹಂಚಿಕೆಯಾದ ಕಾಲೇಜುಗಳಿಗೆ ಖುದ್ದಾಗಿ ತೆರಳಿ ಪ್ರವೇಶಾತಿ ಪಡೆಯುವುದು ಕಡ್ಡಾಯವಾಗಿದೆ.

ಇಲ್ಲಿದೆ ನೋಡಿ ಪೋಸ್ಟ್​:

ಇದು ಪ್ರವೇಶ ಪ್ರಕ್ರಿಯೆಯ ಅಂತಿಮ ಸುತ್ತಾಗಿದ್ದು, ಈ ಸುತ್ತಿನಲ್ಲಿ ಸೀಟು ಪಡೆದ ಅಭ್ಯರ್ಥಿಗಳು ಕಾಲೇಜಿಗೆ ಸೇರ್ಪಡೆಯಾಗುವುದು ಕಡ್ಡಾಯವಾಗಿದೆ. ಯಾವುದೇ ಕಾರಣಕ್ಕೂ ಸೀಟು ರದ್ದುಗೊಳಿಸುವ ಮನವಿಗಳನ್ನು ಪುರಸ್ಕರಿಸಲಾಗುವುದಿಲ್ಲ.

ಇದನ್ನೂ ಓದಿ: ನೀಟ್ ಪಿಜಿ ಮರು ಪರೀಕ್ಷೆ: ಶೀಘ್ರದಲ್ಲೇ ಫಲಿತಾಂಶ ಹಾಗೂ ಅಂತಿಮ ಕೀ ಉತ್ತರ ಪ್ರಕಟ!

ಸೀಟು ಹಂಚಿಕೆಯಾಗಿಯೂ ನಿಗದಿತ ದಿನಾಂಕದೊಳಗೆ ಕಾಲೇಜಿಗೆ ವರದಿ ಮಾಡದೆ ಸೀಟು ವ್ಯರ್ಥ ಮಾಡುವ ಅಭ್ಯರ್ಥಿಗಳ ವಿರುದ್ಧ ನಿಯಮಾನುಸಾರ ಕಾನೂನು ಕ್ರಮ ಜರುಗಿಸಲಾಗುವುದು ಎಂದು KEA ಎಚ್ಚರಿಸಿದೆ. 3ನೇ ಸುತ್ತಿನ ಅಂತಿಮ ಫಲಿತಾಂಶದಲ್ಲಿ ಸೀಟು ಪಡೆದ ಅಭ್ಯರ್ಥಿಗಳು ಸೆಪ್ಟೆಂಬರ್ 11ರ ಸಂಜೆ 6 ಗಂಟೆಯೊಳಗೆ ಕಡ್ಡಾಯವಾಗಿ ಕಾಲೇಜಿಗೆ ವರದಿ ಮಾಡಬೇಕು. ಪ್ರವೇಶಾತಿ ಪಡೆಯದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.” ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ, ಐಎಎಸ್ ಹೇಳಿದ್ದಾರೆ.

ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

TV9 Web

TV9 Kannada

Read More
Loading...
Unable to load recommendations.
Follow Us