AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀಟ್ ಪಿಜಿ ಮರು ಪರೀಕ್ಷೆ: ಶೀಘ್ರದಲ್ಲೇ ಫಲಿತಾಂಶ ಹಾಗೂ ಅಂತಿಮ ಕೀ ಉತ್ತರ ಪ್ರಕಟ!

ನೀಟ್ ಪಿಜಿ 2026 ಪರೀಕ್ಷೆಗಳು ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಲಕ್ಷಾಂತರ ಅಭ್ಯರ್ಥಿಗಳು ಫಲಿತಾಂಶ ಮತ್ತು ಅಂತಿಮ ಉತ್ತರ ಕೀಲಿಗಾಗಿ ಕಾಯುತ್ತಿದ್ದಾರೆ. ಎನ್‌ಬಿಇಎಂಎಸ್ ಶೀಘ್ರದಲ್ಲೇ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಇವುಗಳನ್ನು ಪ್ರಕಟಿಸಲಿದೆ. ಆಗಸ್ಟ್ 30 ರಂದು ಮುಖ್ಯ ಪರೀಕ್ಷೆ ಹಾಗೂ ಸೆಪ್ಟೆಂಬರ್ 5 ರಂದು ಮರು ಪರೀಕ್ಷೆ ನಡೆದಿದ್ದು, ಸುಪ್ರೀಂ ಕೋರ್ಟ್ ಮಾರ್ಗದರ್ಶನದಂತೆ ಫಲಿತಾಂಶ, ನಂತರ ಉತ್ತರ ಕೀಲಿ ಲಭ್ಯವಾಗಲಿದೆ.

ನೀಟ್ ಪಿಜಿ ಮರು ಪರೀಕ್ಷೆ: ಶೀಘ್ರದಲ್ಲೇ ಫಲಿತಾಂಶ ಹಾಗೂ ಅಂತಿಮ ಕೀ ಉತ್ತರ ಪ್ರಕಟ!
ನೀಟ್ ಪಿಜಿ
ಅಕ್ಷತಾ ವರ್ಕಾಡಿ
|

Updated on: Sep 06, 2026 | 3:48 PM

Share

ರಾಷ್ಟ್ರೀಯ ಪರೀಕ್ಷಾ ಮಂಡಳಿಯು ನಡೆಸಿದ ನೀಟ್ ಪಿಜಿ 2026 ಪರೀಕ್ಷೆಗಳು ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಪ್ರವೇಶ ಪರೀಕ್ಷೆ ಬರೆದ ಲಕ್ಷಾಂತರ ವೈದ್ಯಕೀಯ ಅಭ್ಯರ್ಥಿಗಳು ಫಲಿತಾಂಶ ಹಾಗೂ ಅಂತಿಮ ಉತ್ತರ ಕೀಲಿಗಾಗಿ (Final Answer Key) ಕಾಯುತ್ತಿದ್ದಾರೆ. ಎನ್‌ಬಿಇಎಂಎಸ್ ಇಷ್ಟರಲ್ಲೇ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಉತ್ತರ ಕೀಲಿ ಮತ್ತು ಫಲಿತಾಂಶದ ದಿನಾಂಕವನ್ನು ಪ್ರಕಟಿಸುವ ನಿರೀಕ್ಷೆಯಿದೆ.

ಮರು ಪರೀಕ್ಷೆ ಪೂರ್ಣ: 2.63 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಭಾಗಿ:

ಈ ವರ್ಷ ನೀಟ್ ಪಿಜಿ ಮುಖ್ಯ ಪರೀಕ್ಷೆಯು ಆಗಸ್ಟ್ 30 ರಂದು ದೇಶಾದ್ಯಂತ 338 ನಗರಗಳ 1,111 ಕೇಂದ್ರಗಳಲ್ಲಿ ಯಶಸ್ವಿಯಾಗಿ ನಡೆದಿತ್ತು. ಒಟ್ಟು 2,65,980 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದು, ಅದರಲ್ಲಿ 2,63,535 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಆದರೆ ಜೈಪುರದ ಸೀತಾಪುರ ಪ್ರದೇಶದ ಎರಡು ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯುತ್ ಕಡಿತ ಹಾಗೂ ತಾಂತ್ರಿಕ ಸಮಸ್ಯೆಯಿಂದ ಪರೀಕ್ಷೆಗೆ ತೊಂದರೆಯಾಗಿತ್ತು. ಹೀಗಾಗಿ ಬಾಧಿತರಾದ 2,445 ಅಭ್ಯರ್ಥಿಗಳಿಗಾಗಿ ಸೆಪ್ಟೆಂಬರ್ 5 ರಂದು ಮರು ಪರೀಕ್ಷೆ ನಡೆಸಲಾಯಿತು. ಪ್ರಸ್ತುತ ಮರು ಪರೀಕ್ಷೆಯೂ ಪೂರ್ಣಗೊಂಡಿರುವುದರಿಂದ ಅಂತಿಮ ಪ್ರಕ್ರಿಯೆ ಆರಂಭವಾಗಿದೆ.

ಸುಪ್ರೀಂ ಕೋರ್ಟ್ ನಿರ್ದೇಶನ ಹಾಗೂ ಫಲಿತಾಂಶ ಪ್ರಕ್ರಿಯೆ:

ಸುಪ್ರೀಂ ಕೋರ್ಟ್‌ನ ಮಾರ್ಗದರ್ಶನದಂತೆ ಎನ್‌ಬಿಇಎಂಎಸ್ ಕಳೆದ ವರ್ಷದಿಂದ ಫಲಿತಾಂಶದೊಂದಿಗೆ ಅಂತಿಮ ಉತ್ತರ ಕೀಲಿ ಹಾಗೂ ಸ್ಕೋರ್‌ಕಾರ್ಡ್ ನೀಡುವ ಪ್ರಕ್ರಿಯೆಯನ್ನು ಜಾರಿಗೆ ತಂದಿದೆ. ನಿಯಮಾವಳಿಗಳ ಪ್ರಕಾರ ಮೊದಲು ಫಲಿತಾಂಶ ಪ್ರಕಟವಾಗಲಿದ್ದು, ತದನಂತರ ಅಂತಿಮ ಉತ್ತರ ಕೀ ಹಾಗೂ ಅಂಕಪಟ್ಟಿ ಲಭ್ಯವಾಗಲಿದೆ. ಫಲಿತಾಂಶದಲ್ಲಿ ಅಭ್ಯರ್ಥಿಯ ಹೆಸರು, ಗಳಿಸಿದ ಅಂಕಗಳು, ಪರ್ಸೆಂಟೈಲ್, ಆಲ್ ಇಂಡಿಯಾ ರಾಂಕ್ (AIR) ಮತ್ತು ಅರ್ಹತಾ ಸ್ಥಿತಿಯ ಮಾಹಿತಿ ಇರಲಿದ್ದು, ಕೌನ್ಸೆಲಿಂಗ್ ಹಾಗೂ ಪ್ರವೇಶ ಪ್ರಕ್ರಿಯೆಗೆ ಇದು ಅತ್ಯಗತ್ಯವಾಗಿದೆ.

ಅಂತಿಮ ಉತ್ತರ ಕೀ ಡೌನ್‌ಲೋಡ್ ಮಾಡುವುದು ಹೇಗೆ?

  • ಮೊದಲು ಅಧಿಕೃತ ವೆಬ್‌ಸೈಟ್ natboard.edu.in ಗೆ ಭೇಟಿ ನೀಡಿ.
  • ಮುಖಪುಟದಲ್ಲಿ NEET PG 2026 ವಿಭಾಗವನ್ನು ಆಯ್ಕೆ ಮಾಡಿ.
  • ಅಲ್ಲಿ ನೀಡಿರುವ Final Answer Key ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ಸ್ಕ್ರೀನ್​​ ಮೇಲೆ ಕೀ ಉತ್ತರಗಳ PDF ತೆರೆದುಕೊಳ್ಳುತ್ತದೆ.
  • PDF ಡೌನ್‌ಲೋಡ್ ಮಾಡಿಕೊಂಡು ನಿಮ್ಮ ಉತ್ತರಗಳನ್ನು ನೋಡಿಕೊಳ್ಳಿ ಹಾಗೂ ಮುಂದಿನ ಉಲ್ಲೇಖಕ್ಕಾಗಿ ಪ್ರತಿಯನ್ನು ತೆಗೆದಿಟ್ಟುಕೊಳ್ಳಿ.

ಶಿಕ್ಷಣಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us