ಬೆಂಗಳೂರು, ಸೆಪ್ಟೆಂಬರ್ 11: ನವೆಂಬರ್ 26ರಂದು ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ-2023 (KSET-2023) ನಡೆಸುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಅಧಿಸೂಚನೆ ಪ್ರಕಟನೆ ಮಾಡಲಾಗಿದೆ. ಆ ಮೂಲಕ ಕೆಸೆಟ್ ಪರೀಕ್ಷೆ ಕಾದು ಕುಳಿತಿದ್ದ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್ ನೀಡಲಾಗಿದೆ. ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿಗೆ ಆಹ್ವಾನಿಸಲಾಗಿದೆ.
ಈ ಪತ್ರಿಕೆಯು ಅಭ್ಯರ್ಥಿಗಳ ಸಾಮಾನ್ಯ ಪತ್ರಿಕೆಯಾಗಿದ್ದು, ಸಾಮಾನ್ಯ ಜ್ಞಾನ ಬೋಧನೆ ಹಾಗೂ ಸಂಶೋಧನೆಯ ಅಭಿರುಚಿಗೆ ಸಂಬಂಧಿಸಿರುತ್ತದೆ. ಅಭ್ಯರ್ಥಿಗಳ ಸಾಮಾನ್ಯ ತಿಳಿವಳಿಕೆಗಳನ್ನು ಗ್ರಹಿಸುವ ಹಾಗೂ ಯೋಚನಾ ಸಾಮರ್ಥ್ಯವನ್ನು ಆಳೆಯುವಂತಹದ್ದಾಗಿರುತ್ತದೆ.
ಇದನ್ನೂ ಓದಿ: KCET 2023ರ ಎರಡನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಇಂದು ಬಿಡುಗಡೆ; ಸಮಯ, ಪರಿಶೀಲಿಸುವ ಹಂತಗಳನ್ನು ತಿಳಿಯಿರಿ
ಈ ಪತ್ರಿಕೆಯು 50 ಬಹುಸಂಖ್ಯಾ ಆಯ್ಕೆಯ ಪ್ರಶ್ನೆಗಳನ್ನು ಒಳಗೊಂಡಿದ್ದು, ಪ್ರತಿ ಪ್ರಶ್ನೆಗೆ ಎರಡು ಅಂಕಗಳಿರುತ್ತದೆ. ಹಾಗೂ ಎಲ್ಲಾ ಪ್ರಶ್ನೆಗಳಿಗೂ ಕಡ್ಡಾಯವಾಗಿ ಉತ್ತರಿಸಬೇಕು.
ಅಭ್ಯರ್ಥಿಯು ಆಯ್ಕೆ ಮಾಡಿದ ವಿಷಯದ ಸಾಮಾನ್ಯ ಜ್ಞಾನದಲ್ಲಿ ಈ ಪತ್ರಿಕೆ ಇರುತ್ತದೆ. ಈ ಪತ್ರಿಕೆಯು 100 ಕಡ್ಡಾಯ ಬಹುಸಂಖ್ಯಾ ಆಯ್ಕೆ ಪಶ್ನೆಗಳನ್ನು ಒಳಗೊಂಡಿದ್ದು, ಪ್ರತಿ ಪಶ್ನೆಗೂ 2 ಅಂಕಗಳಿರುತ್ತವೆ, ಗರಿಷ್ಠ 200 .ಅಂಕಗಳಿರುತ್ತವೆ.
ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:48 pm, Mon, 11 September 23