ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಅಭ್ಯರ್ಥಿಗಳು (Candidates) ಆನ್‌ಲೈನ್‌ನಲ್ಲಿ ಸಲ್ಲಿಸಿದ ಸಿಇಟಿ-2023 ಅರ್ಜಿಯನ್ನು ಎಡಿಟ್ ಮಾಡಲು ಕೊನೆಯ ಅವಕಾಶವನ್ನು ಮೇ 21 ರ ಸಂಜೆ 6 ರಿಂದ ಮೇ 24 ರ ರಾತ್ರಿ 11.59 ರವರೆಗೆ. ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ಅವರು ಸಿಇಟಿ-2023 ಫಲಿತಾಂಶಗಳನ್ನು ಪ್ರಕಟಿಸುವ ಮೊದಲು ಬದಲಾವಣೆಗಳನ್ನು ಮಾಡಲು ಇದು ಅಂತಿಮ ಅವಕಾಶವಾಗಿದೆ ಎಂದು ಮಂಗಳವಾರ (ಮೇ 16) ಹೇಳಿದ್ದಾರೆ. ಮೀಸಲಾತಿಯ ವಿವರಗಳು ಅಥವಾ ಕ್ಲೈಮ್ ಅನ್ನು ಅನುಮತಿಸಲಾಗುವುದಿಲ್ಲ. CET-2023 ಅರ್ಜಿಯಲ್ಲಿ ಮಾಡಲಾದ ನಮೂದುಗಳು/ಹಕ್ಕುಗಳನ್ನು ತಪ್ಪದೆ ಪರಿಶೀಲಿಸುವಂತೆ ಅವರು ವಿದ್ಯಾರ್ಥಿಗಳು/ಪೋಷಕರಿಗೆ ಸಲಹೆ ನೀಡಿದ್ದಾರೆ. ಹೆಚ್ಚಿನ ವಿವರಗಳಿಗಾಗಿ, ಅಭ್ಯರ್ಥಿಗಳು KEA ವೆಬ್‌ಸೈಟ್ kea.kar.nic.in ಗೆ ಭೇಟಿ ನೀಡುವಂತೆ ಈ ಮೂಲಕ ತಿಳಿಸಲಾಗಿದೆ.
ಕರ್ನಾಟಕದಾದ್ಯಂತ ಕಾಲೇಜುಗಳಲ್ಲಿ ಎಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಇತರ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ KCET ಪ್ರಮುಖ ಪರೀಕ್ಷೆಯಾಗಿದೆ. ಮೇ 20 ಮತ್ತು 21 ರಂದು ಪರೀಕ್ಷೆಯನ್ನು ಆಯೋಜಿಸಲಾಗಿದೆ.
ಸಿಇಟಿ (CET Exam) ಅಥವಾ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಳ್ಳಲು ಮತ್ತೊಂದು ಅವಕಾಶ ನೀಡಲಾಗಿತ್ತು. ಮೇ 11ರ ಬೆಳಿಗ್ಗೆ 8 ಗಂಟೆಯಿಂದ ಮೇ 13ರ ಬೆಳಿಗ್ಗೆ 11 ಗಂಟೆಯವರೆಗೆ ಮತ್ತು ಶುಲ್ಕ ಪಾವತಿಸಲು ಸಂಜೆ 6 sಗಂಟೆವರೆಗೂ ಅವಕಾಶವಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ಮಾಹಿತಿ ನೀಡಿದ್ದರು. ಎಂಜಿನಿಯರಿಂಗ್, ಕೃಷಿ ವಿಜ್ಞಾನ, ವೆಟರ್ನರಿ, ಬಿ.ಎಸ್ಸಿ (ನರ್ಸಿಂಗ್) ಮುಂತಾದ ಕೋರ್ಸುಗಳಿಗೆ 2023ರಲ್ಲಿ ಪ್ರವೇಶ ಬಯಸುವ ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಿದೆ.
ಮೇ 20 ಹಾಗೂ 21ರಂದು ಸಿಇಟಿ ಪರೀಕ್ಷೆ ನಡೆಯಲಿದ್ದು, ಪಿಯುಸಿ ಪೂರಕ ಪರೀಕ್ಷೆ ಬರೆಯಲು ಉದ್ದೇಶಿಸಿರುವವರೂ ಕೂಡ ಸಿಇಟಿ ಪರೀಕ್ಷೆ ಬರೆಯಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಇತ್ತೀಚೆಗೆ ತಿಳಿಸಿತ್ತು. ನಿರೀಕ್ಷೆಗಿಂತ ಕಡಿಮೆ ಅಂಕ ಬಂದಿದೆ ಎಂದು ಕೆಲವರು ಪೂರಕ ಪರೀಕ್ಷೆ ಬರೆಯಲು ನಿರ್ಧರಿಸಿದ್ದಾರೆ. ಅಂಥವರೂ ಸಿಇಟಿ ಪರೀಕ್ಷೆ ಬರೆಯಬೇಕು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್ ರಮ್ಯಾ ‘ಟಿವಿ9’ಗೆ ಮಾಹಿತಿ ನೀಡಿದ್ದರು.
ಇದನ್ನೂ ಓದಿ: ಕ್ಯಾಲಿಫೋರ್ನಿಯಾದಲ್ಲಿ ಲೀಡರ್‌ಶಿಪ್ ಪ್ರೋಗ್ರಾಂಗೆ ಆಯ್ಕೆಯಾದ ದಿನ ಕೂಲಿಗಾರನ ಮಗ; ಭಾರತದಿಂದ ಒಬ್ಬ ಮಾತ್ರ ಆಯ್ಕೆ
ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗೆ ಹಾಜರಾಗುವವರು ಸಿಇಟಿ ಪರೀಕ್ಷೆಗೆ ಹಾಜರಾದರೆ ಸೀಟು ಹಂಚಿಕೆ ವೇಳೆ ಪೂರಕ ಪರೀಕ್ಷೆ ಅಂಕಗಳನ್ನು ಪರಿಗಣಿಸುತ್ತೇವೆ. ಈ ವಿಚಾರದಲ್ಲಿ ಯಾವುದೇ ಗೊಂದಲ ಬೇಡ. ವಿದ್ಯಾರ್ಥಿಗಳಾಗಲೀ, ಪೋಷಕರಾಗಲೀ ಗೊಂದಲಕ್ಕೆ ಒಳಗಾಗಬಾರದು ಎಂದು ಅವರು ಮನವಿ ಮಾಡಿದ್ದರು.