ನಕಲಿ ದಾಖಲೆ ನೀಡಿದ ವಿದ್ಯಾರ್ಥಿಗಳ ಪ್ರವೇಶ ರದ್ದು ಮಾಡಿದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ

ನಕಲಿ ದಾಖಲೆ ನೀಡಿದ ಹಿನ್ನೆಲೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು 51 ವಿದ್ಯಾರ್ಥಿಗಳ ಪ್ರವೇಶವನ್ನು ರದ್ದುಮಾಡಿದೆ.

ನಕಲಿ ದಾಖಲೆ ನೀಡಿದ ವಿದ್ಯಾರ್ಥಿಗಳ ಪ್ರವೇಶ ರದ್ದು ಮಾಡಿದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ
Follow us
ವಿವೇಕ ಬಿರಾದಾರ
|

Updated on: May 17, 2023 | 8:16 AM

ಬೆಂಗಳೂರು: ನಕಲಿ ದಾಖಲೆ ನೀಡಿದ ಹಿನ್ನೆಲೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು (Visvesvaraya Technological University) 51 ವಿದ್ಯಾರ್ಥಿಗಳ (Students) ಪ್ರವೇಶವನ್ನು ರದ್ದುಮಾಡಿದೆ. ವಿದ್ಯಾರ್ಥಿಗಳು ಎಂಜಿನಿಯರಿಂಗ್ (Engineering) ಕೋರ್ಸ್‌ಗೆ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ (NIOS) ಪ್ರಮಾಣಪತ್ರಗಳನ್ನು ನೀಡಿದ್ದಾರೆ. ಆದರೆ ಈ ದಾಖಲೆಗಳು ನಕಲಿ ಎಂದು ಕಂಡುಬಂದ ಹಿನ್ನೆಲೆ ವಿಶ್ವವಿದ್ಯಾಲಯ ಅವರ ಪ್ರವೇಶವನ್ನು ರದ್ದುಮಾಡಿದೆ.

ಆಘಾತಕಾರಿ ಸಂಗತಿಯೆಂದರೆ, ಪ್ರವೇಶ ಅನುಮೋದನೆ ಪ್ರಕ್ರಿಯೆಯಲ್ಲಿ ರಾಜ್ಯ ಸರ್ಕಾರ (ತಾಂತ್ರಿಕ ಶಿಕ್ಷಣ ಇಲಾಖೆ) ಈ ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಮೋದನೆ ನೀಡಿತ್ತು. ಆದರೆ ವಿಟಿಯು ವಿದ್ಯಾರ್ಥಿಗಳಿಗೆ ಕಾಲೇಜುವಾರು ಅನುಮೋದನೆ ನೀಡುವಾಗ ನಕಲಿ ಪ್ರಮಾಣ ಪತ್ರಗಳನ್ನು ಪತ್ತೆ ಮಾಡಿದೆ.  ಇದರ ಹಿಂದೆ ದೊಡ್ಡ ಹಗರಣ ನಡೆದಿದೆ ಎಂದು ಶಂಕಿಸಲಾಗಿದ್ದು, ಹಿಂದಿನ ದಾಖಲಾತಿಗಳ ಬಗ್ಗೆಯೂ ತನಿಖೆ ನಡೆಸುತ್ತೇವೆ ಎಂದು ವಿಟಿಯು ಉಪಕುಲಪತಿ ಎಸ್ ವಿದ್ಯಾಶಂಕರ್ ತಿಳಿಸಿದ್ದಾರೆ.

ಕಳೆದ ಐದು ವರ್ಷಗಳಲ್ಲಿ NIOS ಪ್ರಮಾಣಪತ್ರಗಳ ಆಧಾರದ ಮೇಲೆ ವಿಟಿಯು ಅನೇಕ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುತ್ತಿದ್ದು, ಈ ಅವರ ದಾಖಲೆಗಳನ್ನು ಮರುಪರಿಶೀಲಿಸಲಿದೆ. ಈ ಕುರಿತು ವಿಟಿಯು ರಾಜ್ಯ ಸರ್ಕಾರ ಮತ್ತು ಎನ್‌ಐಒಎಸ್‌ಗೂ ಪತ್ರ ಬರೆಯಲಿದೆ.

ಇದನ್ನೂ ಓದಿ:  94.8% ಪಡೆದ ಸೆರೆಬ್ರಲ್ ಪಾಲ್ಸಿ ಹೊಂದಿರುವ ವಸಂತ ವ್ಯಾಲಿ ಶಾಲೆಯ ವಿದ್ಯಾರ್ಥಿನಿ; ಇದೊಂದು ಸ್ಪೂರ್ತಿ ಕಥೆ!

ವಿಟಿಯು ಅಧಿಕಾರಿಗಳ ಪ್ರಕಾರ, ದಾಖಲೆಗಳ ಪರಿಶೀಲನೆ ಪ್ರಕ್ರಿಯೆ ವೇಳೆ ಎನ್​ಐಒಎಸ್​​ ನೀಡಿದ 12 ನೇ ತರಗತಿಯ ಮಾರ್ಕ್ಸ್​​ಕಾರ್ಡ್‌ಗಳನ್ನು QR ಕೋಡ್ ಮೂಲಕ ಸ್ಕ್ಯಾನ್ ಮಾಡಿದಾಗ, ವಿದ್ಯಾರ್ಥಿಗಳು ಎನ್​ಐಒಎಸ್​​​ನ ನಕಲಿ ವೆಬ್‌ಸೈಟ್‌ ಮೂಲಕ ಅಂಕಪಟ್ಟಿ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ವಿದ್ಯಾರ್ಥಿಗಳು ಮ್ಯಾನೇಜ್‌ಮೆಂಟ್ ಕೋಟಾದಡಿಯಲ್ಲಿ ಸೀಟುಗಳನ್ನು ಪಡೆದಿದ್ದು, ಅವರಲ್ಲಿ ಹೆಚ್ಚಿನವರು ತುಮಕೂರು ಮತ್ತು ಚಿಕ್ಕಬಳ್ಳಾಪುರದಲ್ಲಿ ಬೆಂಗಳೂರಿನ ಉನ್ನತ ಕಾಲೇಜುಗಳಿಗೆ ಪ್ರವೇಶ ಪಡೆದಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ