ಆನೇಕಲ್​: ವಾಹನ‌ ಸವಾರರಿಗೆ ಯಮ ಸ್ವರೂಪಿಯಾದ ಬೆಂಗಳೂರು ಹೊಸೂರು ಹೈವೇ

ರಸ್ತೆ ಅಪಘಾತಗಳನ್ನು ತಪ್ಪಿಸಲು ಏನೇ ಮುತವರ್ಜಿ ವಹಿಸಿದ್ರೂ, ಸಾವಿನ ಸಂಖ್ಯೆ ಕಡಿಕೆ ಆಗುತ್ತಿಲ್ಲ. ಅದರಲ್ಲೂ ಬೆಂಗಳೂರು- ಹೊಸೂರು ಹೈವೇ ಆಕ್ಸಿಡೆಂಟ್ ಜೋನ್ ಆಗಿ ಕನ್ವರ್ಟ್ ಆಗಿದೆ. ಕಾರಣ ಹಲವು ಕಡೆ ಸರ್ವೀಸ್ ರಸ್ತೆ ಇಲ್ಲದೇ‌ ಇರೋದು ಇನ್ನೊಂದೆಡೆ ಇದ್ರೂ ಅವೈಜ್ಞಾನಿಕವಾಗಿರೋದು.

ಆನೇಕಲ್​: ವಾಹನ‌ ಸವಾರರಿಗೆ ಯಮ ಸ್ವರೂಪಿಯಾದ ಬೆಂಗಳೂರು ಹೊಸೂರು ಹೈವೇ
ಬೆಂಗಳೂರು ಹೊಸೂರು ಹೈವೇ
Follow us
ಕಿರಣ್ ಹನುಮಂತ್​ ಮಾದಾರ್
|

Updated on: May 17, 2023 | 8:43 AM

ಆನೇಕಲ್​: ಬೆಂಗಳೂರು ಹೊಸೂರು ಹೆದ್ದಾರಿ (Bengaluru Hosur Highway)ವಾಹನ ಸವಾರರಿಗೆ ಯಮಸ್ವರೂಪಿಯಂತಾಗಿದೆ. ಎಷ್ಟೇ ಪ್ರಯತ್ನ ಪಟ್ಟು ಹಲವು ರೂಲ್ಸ್ ಮಾಡಿದ್ರೂ ಬೈಕ್ ಸವಾರರ ಪ್ರಾಣ ಉಳಿಸೋಕೆ ಆಗುತ್ತಿಲ್ಲ. ಇದನ್ನು ನಾವ್ ಹೇಳುತ್ತಿಲ್ಲ, ಬೆಂಗಳೂರು ಎಲಿವೇಟೆಡ್ ಟೋಲ್ ವೇ ಪ್ರೈವೇಟ್ ಲಿಮಿಟೆಡ್​ನ ಡೇಟಾ ಹೇಳುತ್ತಿರುವ ಸತ್ಯ. ಹೌದು ಅದಕ್ಕೆ ಕಾರಣ ಹೈವೇಯ ಹಲವೆಡೆ ಸರ್ವೀಸ್ ರಸ್ತೆ ಇಲ್ಲದೇ ಇರೋದು. ಇನ್ನೊಂದೆಡೆ ಸರ್ವಿಸ್​ ರೋಡ್​ ಇದ್ರೂ, ಗುಂಡಿಗಳು ಬಿದ್ದು ಹಾಳಾಗಿ ಅಪಘಾತಕ್ಕೆ ಕಾರಣ ಆಗ್ತಾ ಇರೋದು,‌ ಇದರಿಂದಾಗಿ ಕಳೆದ ಮೂರು ವರ್ಷದಲ್ಲಿ ಬಹಳಷ್ಟು ಅನಾಹುತಗಳು ನಡೆದುಹೋಗಿವೆ.

ಎಲೆಕ್ಟ್ರಾನಿಕ್ ಸಿಟಿ ಪ್ಲೈಓವರ್ ಇಳಿದ ತಕ್ಷಣ ಸರ್ವೀಸ್ ರಸ್ತೆ ತೆಗೆದಕೊಳ್ಳಬಹುದು. ಆದರೆ, ಅವೈಜ್ಞಾನಿಕ ಸರ್ವೀಸ್ ರಸ್ತೆ ಇಲ್ಲಿರುವ ಕಾರಣ ಇದೊಂದು ಡೇಂಜರ್ ರಸ್ತೆಯಾಗಿ ಮಾರ್ಪಟ್ಟಿದೆ,. ಇನ್ನೊಂದು‌ ಮುಖ್ಯವಾದ ಡೇಂಜರ್ ಪಾಯಿಂಟ್ ಅಂದ್ರೆ, ಚಂದಾಪುರ ದಾಟಿದ‌ ಬಳಿಕ ಸಿಗುವ ರೈಲ್ವೇ ಟ್ರ್ಯಾಕ್ ಬಳಿಯ ದಾರಿ. ಇಲ್ಲಿ ಸುಮಾರು ಅರ್ಧ ಕಿ. ಮೀ ಸರ್ವೀಸ್ ರಸ್ತಯೇ ಇಲ್ಲ. ಹೀಗಾಗಿ ಹಲವು ಬಾರಿ ಅಪಘಾತಗಾಳಾಗಿ ಪ್ರಾಣ ಹೋಗಿವೆ. ಈ ಬಗ್ಗೆ ‌ಹೈವೇ ಅಥಾರೆಟಿಗೆ ಕೇಳಿದರೆ, ಅವರು ಹೇಳೋದೇ ಬೇರೆ, ‘ಬೆಂಗಳೂರು ಚೆನೈ ಹೈವೇ ಉಳಿದ ಹೈವೇಗಳಿಗಿಂತ ಭಿನ್ನವಾಗಿದ್ದು, ಇಲ್ಲಿ ಅಪಘಾತ ಪ್ರಮಾಣ ಕಡಿಮೆ ಇದೆ,. ಕೆಲವು ಗುಂಡಿಗಳನ್ನು ಬಿಟ್ಟರೇ ಯಾವುದೇ ಸಮಸ್ಯೆ ಇಲ್ಲ ಅಂತಾರೆ.

ಇದನ್ನೂ ಓದಿ:Bengaluru: ರಸ್ತೆ ದಾಟುವಾಗ ವಿದ್ಯಾರ್ಥಿನಿಗೆ ಕಾರು ಡಿಕ್ಕಿ: ಅಪಘಾತಕ್ಕೆ BBMP, ಟ್ರಾಫಿಕ್ ಪೊಲೀಸರ ನಿರ್ಲಕ್ಷ್ಯ ಆರೋಪ

ಇನ್ನು ಬೆಂಗಳೂರು ಚೆನೈ ರಸ್ತೆಯಲ್ಲಿ‌ ನಡೆದ‌ ಅಪಘಾತದ ಅಂದಾಜು ಲೆಕ್ಕ ಹಾಕಿದರೆ,

ವರ್ಷ      ಅಪಘಾತ   ಸಾವು    ಗಂಭೀರ ಗಾಯ 2018-19      256            47              63 2021-21      260           48               7 2022           105            36              69

ಇನ್ನು 2023‌ ರನೇ ವರ್ಷದ ಡೇಟಾ‌‌ ಹೊರತು ಪಡಿಸಿ ಸಾವು ನೋವುಗಳ ಸಂಖ್ಯೆ‌ ಇಷ್ಟಿದ್ದರೇ, ಇನ್ನು ಅಂಕಿ ಅಂಶಗಳು ಎಷ್ಟು ಹೆಚ್ಚಾಗಿರಬಹುದು ಅನ್ನೋದು ಇನ್ನಷ್ಟು ಅಘಾತಕಾರಿ ವಿಚಾರವಾಗಿದೆ. ಆಗಿರುವ ಅಪಘಾತಗಳ ಬಗ್ಗೆ ಒಂದು ವಿಷಯ ಸ್ಪಷ್ಟವಾಗಿದೆ. ಸತ್ತವರಲ್ಲಿ ಬೈಕ್ ಸವಾರರ ಪಾಲು ಶೆಕಡಾ‌ 90 ರಷ್ಟಿದ್ದು, ಇದ್ರಲ್ಲಿ ಡ್ರಿಂಕ್ ಅಂಡ್​ ಡ್ರೈವ್ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಟೆಕ್ಕಿಗಳ ಸಾವು ಹೆಚ್ಚಿನ‌ ಪ್ರಮಾಣದಲ್ಲಿದೆ. ಅವೈಜ್ಞಾನಿಕ ಡಿವೈಡರ್, ಸರ್ವೀಸ್ ರಸ್ತೆಯಲ್ಲಿ ಗುಂಡಿ, ಹಾಗೂ ಯು ಟರ್ನ್ ತೆಗೆದುಕೊಳ್ಳುವ ಜಾಗದಲ್ಲಿ ಯಾವುದೇ ಸೂಚನಾ ಫಲಕ ಇರದೇ ಇರುವ ಕಾರಣ ಹಲವು ಅಪಘಾತಗಳಾಗಿವೆ. ಇನ್ನು ಈ ಮಧ್ಯೆ ಗ್ಯಾಸ್ ಏಜೆನ್ಸಿ ತೋಡಿದ ತಗ್ಗುಗಳ ಪರಿಣಾಮ‌ ಸರ್ವೀಸ್ ರೋಡ್ ಹಾಳಾಗಿ ಹೋಗಿದ್ದು, ಮತ್ತಷ್ಟು ಅವಘಡ‌ ಸಂಭವಿಸುತ್ತಿವೆ.

ಇನ್ನಷ್ಟು ಅಪಘಾತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ