Bengaluru: ರಸ್ತೆ ದಾಟುವಾಗ ವಿದ್ಯಾರ್ಥಿನಿಗೆ ಕಾರು ಡಿಕ್ಕಿ: ಅಪಘಾತಕ್ಕೆ BBMP, ಟ್ರಾಫಿಕ್ ಪೊಲೀಸರ ನಿರ್ಲಕ್ಷ್ಯ ಆರೋಪ

ನಗರದ ಆರ್ ವಿ ಕಾಲೇಜು ಕಡೆಯಿಂದ BIMS ಕಾಲೇಜು ಕಡೆಗೆ ರಸ್ತೆ ದಾಟುತ್ತಿದ್ದ 21 ವರ್ಷದ ಸ್ವಾತಿ ಎಂಬಾಕೆಗೆ ವೇಗದಲ್ಲಿ ಬಂದ ಕಾರೊಂದು ಡಿಕ್ಕಿ ಹೊಡೆದು ಸುಮಾರು 50 ಮೀಟರ್ ಹಾರಿ ದೂರಕ್ಕೆ ಬಿದ್ದಿದ್ದಳು. ಇದೀಗ ವಿದ್ಯಾರ್ಥಿನಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದು, ಬಿಬಿಎಂಪಿ, ಟ್ರಾಫಿಕ್​ ಪೊಲೀಸರೇ ಇದಕ್ಕೆ ಕಾರಣ ಎಂದು ಸ್ಥಳೀಯರು ಹಾಗೂ ವಿದ್ಯಾರ್ಥಿಗಳು ಆರೋಪಿಸುತ್ತಿದ್ದಾರೆ.

Bengaluru: ರಸ್ತೆ ದಾಟುವಾಗ ವಿದ್ಯಾರ್ಥಿನಿಗೆ ಕಾರು ಡಿಕ್ಕಿ:  ಅಪಘಾತಕ್ಕೆ BBMP, ಟ್ರಾಫಿಕ್ ಪೊಲೀಸರ ನಿರ್ಲಕ್ಷ್ಯ ಆರೋಪ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on:Feb 04, 2023 | 12:27 PM

ಬೆಂಗಳೂರು: ಫೆಬ್ರವರಿ 2 ರಂದು ಮಧ್ಯಾಹ್ನ 1.30 ರ ಸುಮಾರಿಗೆ ಆರ್ ವಿ ಕಾಲೇಜು ಕಡೆಯಿಂದ BIMS ಕಾಲೇಜು ಕಡೆಗೆ ರಸ್ತೆ ದಾಟುತ್ತಿದ್ದ 21 ವರ್ಷದ ಸ್ವಾತಿ ಎಂಬಾಕೆಗೆ ಕೆಂಗೇರಿ ಕಡೆಯಿಂದ ವೇಗವಾಗಿ ಬರುತ್ತಿದ್ದ KA 51 MH 7575 ನಂಬರ್​ನ ಕಾರು ಡಿಕ್ಕಿ ಹೊಡೆದಿತ್ತು. ಗುದ್ದಿದ ರಭಸಕ್ಕೆ ವಿದ್ಯಾರ್ಥಿನಿ 50 ಮೀಟರ್ ಮೇಲಕ್ಕೆ ಹಾರಿ ಬಿದ್ದಿದ್ದಳು. ಅಪಘಾತದಲ್ಲಿ ತೀವ್ರ ಗಾಯವಾಗಿದ್ದ ಸ್ವಾತಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾಳೆ. ಇದೀಗ ಅಪಘಾತಕ್ಕೆ ಬಿಬಿಎಂಪಿ, ಪೊಲೀಸರೆ ನೇರ ಕಾರಣ ಎಂದು ಸ್ಥಳೀಯರು, ವಿದ್ಯಾರ್ಥಿಗಳು ಹೇಳುತ್ತಿದ್ದಾರೆ.

ಈ ಕಾಲೇಜಿನ ಮುಂಭಾಗ ರಸ್ತೆಯ ಎರಡು ಕಡೆ ಹಂಪ್​ಗಳನ್ನ ಹಾಕಲಾಗಿತ್ತು. ಹಂಪ್​ಗಳು ಇದ್ದಾಗ ವಾಹನಗಳು ಸ್ಲೋ ಆಗಿ ಬರುತ್ತಿದ್ದು, ವಿದ್ಯಾರ್ಥಿಗಳು ರಸ್ತೆದಾಟಲು ಅನುಕೂಲವಾಗುತಿತ್ತು. ಆದರೆ 8 ತಿಂಗಳ ಹಿಂದೆ ಮೋದಿ ಕಾರ್ಯಕ್ರಮ ನಿಮಿತ್ತ ಇದೆ ರಸ್ತೆಯಲ್ಲಿ ಸಾಗಿದ್ದರು. ಆಗ ಬಿಬಿಎಂಪಿ ಅಧಿಕಾರಿಗಳು ಹಂಪ್​ಗಳನ್ನ ತೆರವು ಮಾಡಿದ್ರು, ಮತ್ತೆ ಹಂಪ್​ಗಳನ್ನ ಬಿಬಿಎಂಪಿ ಟ್ರಾಫಿಕ್ ವಿಭಾಗದ ಅಧಿಕಾರಿಗಳು ಹಾಕಿಲ್ಲ. ಇದೆ ಜಾಗದಲ್ಲಿ RV ಕಾಲೇಜು, Orchids ಶಾಲೆ, BIMs ಕಾಲೇಜಿದ್ದು ಸಾವಿರಾರು ವಿದ್ಯಾರ್ಥಿಗಳು ರಸ್ತೆ ದಾಟಬೇಕು. ಇಲ್ಲಿಗೆ ಒಂದು ಸ್ಕೈವಾಕ್ ವ್ಯವಸ್ಥೆ ಅನಿವಾರ್ಯ ಇದೆ. ಕೂಡಲೇ ಇಲ್ಲಿ ಹಂಪ್ಸ್​ಗಳನ್ನ ನಿರ್ಮಾಣ ಮಾಡಬೇಕು ಎಂದು ವಿದ್ಯಾರ್ಥಿ ಹಾಗೂ ಸಾರ್ವಜನಿಕರು ಹೇಳುತ್ತಿದ್ದಾರೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:24 pm, Sat, 4 February 23