ಇಂದಿರಾಗಾಂಧಿ ಹಾಗೂ ರಾಜೀವ್ ಗಾಂಧಿ ಹುತಾತ್ಮರಾಗಿಲ್ಲ ಅದೊಂದು ಅಪಘಾತವಷ್ಟೇ ಎಂದ ಬಿಜೆಪಿ ಸಚಿವ
ಇಂದಿರಾ ಗಾಂಧಿ(Indira Gandhi) ಹಾಗೂ ರಾಜೀವ್ ಗಾಂಧಿ(Rajiv Gandhi)ಹುತಾತ್ಮರಾಗಿಲ್ಲ ಒಂದು ಅಪಘಾತವಷ್ಟೇ ಎಂದು ಉತ್ತರಾಖಂಡ ಸಚಿವ ಗಣೇಶ್ ಜೋಶಿ ಹೇಳಿದ್ದಾರೆ.
ಇಂದಿರಾ ಗಾಂಧಿ(Indira Gandhi) ಹಾಗೂ ರಾಜೀವ್ ಗಾಂಧಿ(Rajiv Gandhi)ಹುತಾತ್ಮರಾಗಿಲ್ಲ ಒಂದು ಅಪಘಾತವಷ್ಟೇ ಎಂದು ಉತ್ತರಾಖಂಡ ಸಚಿವ ಗಣೇಶ್ ಜೋಶಿ ಹೇಳಿದ್ದಾರೆ. ಇಂದಿರಾ ಗಾಂಧಿ ಹಾಗೂ ರಾಜೀವ್ಗಾಂಧಿ ಮೃತಪಟ್ಟಿರುವುದನ್ನು ಹುತಾತ್ಮರಾಗಿದ್ದಾರೆ ಎನ್ನಲು ಸಾಧ್ಯವಿಲ್ಲ ಇದೊಂದು ಅಪಘಾತವಷ್ಟೇ ಎಂದಿದ್ದಾರೆ. ತ್ಯಾಗ ಕೇವಲ ಇಂದಿರಾಗಾಂಧಿ ಕುಟುಂಬಕ್ಕೆ ಸೇರಿದ್ದಲ್ಲ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಗತ್ ಸಿಂಗ್, ಸಾವರ್ಕರ್, ಚಂದ್ರಶೇಖರ್ ಆಜಾದ್ ಮುಂತಾದವರು ಬಲಿದಾನ ಮಾಡಿದ್ದಾರೆ. ಇಂದಿರಾಗಾಂಧಿ ಮತ್ತು ರಾಜೀವ್ ಗಾಂಧಿಯವರ ಹತ್ಯೆ ತ್ಯಾಗವಲ್ಲ, ಅಪಘಾತ. ತ್ಯಾಗಕ್ಕೂ ಅಪಘಾತಕ್ಕೂ ವ್ಯತ್ಯಾಸವಿದೆ.
ಕಾಶ್ಮೀರಕ್ಕೆ ಸಂಬಂಧಿಸಿದ 370 ನೇ ವಿಧಿಯನ್ನು ರದ್ದುಗೊಳಿಸದಿದ್ದರೆ, ಅಲ್ಲಿ ಸಹಜ ಸ್ಥಿತಿ ಮರಳುತ್ತಿರಲಿಲ್ಲ ಎಂದು ಅವರು ಹೇಳಿದರು. ಶಾಂತಿಯುತ ವಾತಾವರಣದಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಗಾಂಧಿ ಭೇಟಿ ನೀಡಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ. ಇದರ ಶ್ರೇಯಸ್ಸು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ ಎಂದರು. 370 ನೇ ವಿಧಿಯನ್ನು ತೆಗೆದುಹಾಕದಿದ್ದರೆ, ವಾತಾವರಣ ಸರಿಯಾಗುತ್ತಿರಲಿಲ್ಲ ಮತ್ತು ರಾಹುಲ್ ಗಾಂಧಿಯವರು ಲಾಲ್ ಚೌಕ್‌ನಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲು ಸಾಧ್ಯವಿಲ್ಲ.
ಮತ್ತಷ್ಟು ಓದಿ: Bharat Jodo Yatra: ಜಮ್ಮು ಕಾಶ್ಮೀರದಲ್ಲಿ ಭಾರತ್ ಜೋಡೋ ಯಾತ್ರೆ ಹೇಗಿತ್ತು ಗೊತ್ತಾ? ಇಲ್ಲಿದೆ ಫೋಟೋ
ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸಾಚಾರ ಉತ್ತುಂಗದಲ್ಲಿದ್ದಾಗ ಬಿಜೆಪಿ ಮುಖಂಡ ಮುರಳಿ ಮನೋಹರ್ ಜೋಶಿ ಶ್ರೀನಗರದ ಲಾಲ್ ಚೌಕ್‌ನಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿದರು. ಜೋಶಿಯವರೊಂದಿಗೆ ತಾವೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಎಂದು ಹೇಳಿದರು.
ರಾಹುಲ್ ಗಾಂಧಿ ಏನು ಹೇಳಿದ್ದರು? ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯು ತಮ್ಮ ಅಜ್ಜಿ ಇಂದಿರಾ ಗಾಂಧಿ ಮತ್ತು ತಂದೆ ರಾಜೀವ್ ಗಾಂಧಿಯವರ ಹತ್ಯೆಯ ಸುದ್ದಿ ಕೇಳಿದಾಗ ನಾನು ತುಂಬಾ ದುಃಖಿತನಾಗಿದ್ದೆ. ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ಮೋದಿ, ಅಮಿತ್ ಶಾ, ಬಿಜೆಪಿ, ಆರ್‌ಎಸ್‌ಎಸ್‌ಗೆ ಆ ನೋವು ಗೊತ್ತಿಲ್ಲ. ಆ ನೋವು ಸೇನೆ ಮತ್ತು ಕಾಶ್ಮೀರಿಗಳಿಗೆ ಮಾತ್ರ ಗೊತ್ತು ಎಂದು ಹೇಳಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:37 am, Wed, 1 February 23