ಬಿಹಾರ್ ಬೋರ್ಡ್​ನ 10ನೇ ತರಗತಿ ಫಲಿತಾಂಶ ಪ್ರಕಟ; ಹಾಲು ಮಾರುವವನ ಮಗಳಿಗೆ ಒಂಬತ್ತನೇ ರ‍್ಯಾಂಕ್

|

Updated on: Apr 02, 2023 | 11:08 AM

ವಿದ್ಯಾರ್ಥಿನಿ ಸುಪ್ರಭಾ, ಪುರ್ನಿಯಾದ ಧಮ್ದಾಹ ಉಪವಿಭಾಗದ ಅಮರಿ ಕುಕ್ರೋನ್ ಗ್ರಾಮದ ನಿವಾಸಿ. ಸುಪ್ರಭಾ ಅವರ ತಂದೆ ಜೀವನೋಪಾಯಕ್ಕಾಗಿ ಹಾಲು ಮಾರಾಟ ಮಾಡುತ್ತಾರೆ. ಬಹಳ ಶ್ರಮದಿಂದ ತಮ್ಮ ಮಗಳ ಶಿಕ್ಷಣವನ್ನು ನಿಭಾಯಿಸಿದ್ದಾರೆ.

ಬಿಹಾರ್ ಬೋರ್ಡ್​ನ 10ನೇ ತರಗತಿ ಫಲಿತಾಂಶ ಪ್ರಕಟ; ಹಾಲು ಮಾರುವವನ ಮಗಳಿಗೆ ಒಂಬತ್ತನೇ ರ‍್ಯಾಂಕ್
Bihar Board 10th result 2023
Follow us on

ಬಿಹಾರ ಬೋರ್ಡ್ (Bihar Board) 10ನೇ ತರಗತಿ (10th standard) ಫಲಿತಾಂಶ 2023 ನಿನ್ನೆ (ಏಪ್ರಿಲ್ 01) ಬಿಡುಗಡೆಯಾಗಿದೆ ಮತ್ತು ಶೇಕಡಾ 81.04 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಂಬತ್ತನೇ ರ‍್ಯಾಂಕ್‌ನೊಂದಿಗೆ, ಅಮರಿಯ ಎಂಎಂಆರ್‌ಡಿ ಪ್ರೌಢಶಾಲೆಯ ಸುಪ್ರಭಾ ಭಾರತಿ, ಪೂರ್ಣಿಯ 477/500 ಅಂಕಗಳನ್ನು ಗಳಿಸಿದ್ದಾರೆ. 2023 ರಲ್ಲಿ BSEB 10ನೇ ತರಗತಿ ಫಲಿತಾಂಶದಲ್ಲಿ ಮೊದಲ ರ‍್ಯಾಂಕ್ ಅನ್ನು ಒಬ್ಬ ಹುಡುಗ ಪಡೆದಿದ್ದಾನೆ, ಎರಡನೇ ರ‍್ಯಾಂಕ್ ಅನ್ನು ಇಬ್ಬರು ಹುಡುಗಿಯರು ಹಂಚಿಕೊಂಡಿದ್ದಾರೆ ಮತ್ತು ಮೂರನೇ ರ್ಯಾಂಕ್ ಅನ್ನು ಇಬ್ಬರು ಹುಡುಗರು ಮತ್ತು ಒಬ್ಬ ಹುಡುಗಿ ಹಂಚಿಕೊಂಡಿದ್ದಾರೆ.

ಬಿಹಾರ ಬೋರ್ಡ್ 10 ನೇ ತರಗತಿ ಫಲಿತಾಂಶ 2023 ನಿನ್ನೆ (ಏಪ್ರಿಲ್ 01) ಬಿಡುಗಡೆಯಾಗಿದೆ ಮತ್ತು ಶೇಕಡಾ 81.04 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಂಬತ್ತನೇ ರ‍್ಯಾಂಕ್‌ನೊಂದಿಗೆ, ಅಮರಿಯ ಎಂಎಂಆರ್‌ಡಿ ಪ್ರೌಢಶಾಲೆಯ ಸುಪ್ರಭಾ ಭಾರತಿ, 477/500 ಅಂಕಗಳನ್ನು ಗಳಿಸಿದ್ದಾರೆ. 2023 ರಲ್ಲಿ BSEB 10ನೇ ತರಗತಿ ಫಲಿತಾಂಶದಲ್ಲಿ ಮೊದಲ ರ‍್ಯಾಂಕ್ ಅನ್ನು ಒಬ್ಬ ಹುಡುಗ ಪಡೆದಿದ್ದಾನೆ, ಎರಡನೇ ರ‍್ಯಾಂಕ್ ಅನ್ನು ಇಬ್ಬರು ಹುಡುಗಿಯರು ಹಂಚಿಕೊಂಡಿದ್ದಾರೆ ಮತ್ತು ಮೂರನೇ ರ್ಯಾಂಕ್ ಅನ್ನು ಇಬ್ಬರು ಹುಡುಗರು ಮತ್ತು ಒಬ್ಬ ಹುಡುಗಿ ಹಂಚಿಕೊಂಡಿದ್ದಾರೆ.

ವಿದ್ಯಾರ್ಥಿನಿ ಸುಪ್ರಭಾ, ಪುರ್ನಿಯಾದ ಧಮ್ದಾಹ ಉಪವಿಭಾಗದ ಅಮರಿ ಕುಕ್ರೋನ್ ಗ್ರಾಮದ ನಿವಾಸಿ. ಸುಪ್ರಭಾ ಅವರ ತಂದೆ ಜೀವನೋಪಾಯಕ್ಕಾಗಿ ಹಾಲು ಮಾರಾಟ ಮಾಡುತ್ತಾರೆ. ಬಹಳ ಶ್ರಮದಿಂದ ತಮ್ಮ ಮಗಳ ಶಿಕ್ಷಣವನ್ನು ನಿಭಾಯಿಸಿದ್ದಾರೆ.

ಆಕೆಯ ಸಾಧನೆಯೊಂದಿಗೆ, ಬಿಹಾರದ ಬೋರ್ಡ್​ನ 9ನೇ ಟಾಪರ್ ಆದ ಸುಪ್ರಭಾ ಈಗ ಅವರ ಪಟ್ಟಣದ ಟಾಪರ್ ಆಗಿದ್ದಾರೆ. ಇದೆ ವಿಚಾರಕ್ಕೆ ಸುಪ್ರಭಾ ಮತ್ತು ಅವರ ಕುಟುಂಬಕ್ಕೆ ಪ್ರಶಂಸೆಗಳು ಹರಿದುಬರುತ್ತಿವೆ.

ಸುಪ್ರಭಾ ಈಗ ಸಾಕಷ್ಟು ವಿದ್ಯಾರ್ಥಿಗಳಿಗೆ ಅದರಲ್ಲೂ ಹುಡುಗಿಯರಿಗೆ ಸ್ಫೂರ್ತಿಯಾಗಿದ್ದಾರೆ. ಪೋಷಕರು ಸಹ ಇಂತಹ ಉದಾಹರಣೆಗಳಿಂದ ಪ್ರೇರಿತರಾಗಿ ತಮ್ಮ ಮಕ್ಕಳಿಗೆ ಶಿಕ್ಷಣ ನೀಡಬೇಕಾಗಿದೆ. ಕರ್ನಾಟಕದಲ್ಲಿ ಈಗಾಗಲೇ ದ್ವಿತೀಯ ಪಿಯುಸಿ ಪರೀಕ್ಷೆಗಳು ಮುಗಿದು, SSLC ಪರೀಕ್ಷೆ ಪ್ರಾರಂಭವಾಗಿದೆ. ಏಪ್ರಿಲ್ 15 ರಂದು SSLC ಪರೀಕ್ಷೆಗಳು ಕೊನೆಗೊಳ್ಳುತ್ತದೆ.

ಇದನ್ನೂ ಓದಿ: ಬೇರೊಬ್ಬ ವಿದ್ಯಾರ್ಥಿ ಹೆಸರಲ್ಲಿ SSLC ಪರೀಕ್ಷೆ ಬರೆಯುತ್ತಿದ್ದ ಮತ್ತೋರ್ವ ಅಪ್ರಾಪ್ತ ಬಾಲಕ: ಪೋಲಿಸ್​ ವಶಕ್ಕೆ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಇದೀಗ ಎಸ್​​ಎಸ್​ಎಲ್​ಸಿ ಪರೀಕ್ಷೆ ಬರೆಯಲು ತೆರಳುವ ವಿದ್ಯಾರ್ಥಿಗಳಿಗೂ ಉಚಿತ ಪ್ರಯಾಣ ಘೋಷಿಸಿದೆ. ಏಪ್ರಿಲ್ 15ರ ವರೆಗೆ ಪರೀಕ್ಷಾ ದಿನಗಳಲ್ಲಿ ವಿದ್ಯಾರ್ಥಿಗಳು ಕೆಎಸ್​ಆರ್​ಟಿಸಿ ಬಸ್​ಗಳಲ್ಲಿ ಉಚಿತವಾಗಿ ಸಂಚರಿಸಬಹುದು. ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್​ಗಳಲ್ಲಿಯೂ ಹಾಲ್ ಟಿಕೆಟ್ ತೋರಿಸಿ ಪರೀಕ್ಷಾ ಕೇಂದ್ರಗಳಿಗೆ ಹೋಗಬಹುದಾಗಿದೆ.