ರಾಷ್ಟ್ರ ಮಟ್ಟದ ಮೂಟ್ ಕೋರ್ಟ್ ಸ್ಪರ್ಧೆ 2023 ವಿಜೇತರಾದ ಜೆಎಸ್‌ಎಸ್ ಕಾನೂನು ಕಾಲೇಜಿನ ಮೂವರು ವಿದ್ಯಾರ್ಥಿಗಳು

|

Updated on: Mar 13, 2023 | 9:24 PM

ಮೈಸೂರಿನ ಸರಸ್ವತಿಪುರಂನಲ್ಲಿರುವ ಜೆಎಸ್‌ಎಸ್ ಕಾನೂನು ಕಾಲೇಜಿನ ವಿದ್ಯಾರ್ಥಿಗಳಾದ ರೋಹನ್ ವಿ ಗಂಗಾಡ್ಕರ್, ಅಮೂಲ್ಯ ಮತ್ತು ನಿಕಿತಾ ಅವರು ರಾಷ್ಟ್ರೀಯ ಮಟ್ಟದ ಮೂಟ್ ಕೋರ್ಟ್ ಸ್ಪರ್ಧೆಯಲ್ಲಿ (2023) ವಿಜೇತರಾಗಿದ್ದಾರೆ.

ರಾಷ್ಟ್ರ ಮಟ್ಟದ ಮೂಟ್ ಕೋರ್ಟ್ ಸ್ಪರ್ಧೆ 2023 ವಿಜೇತರಾದ ಜೆಎಸ್‌ಎಸ್ ಕಾನೂನು ಕಾಲೇಜಿನ ಮೂವರು ವಿದ್ಯಾರ್ಥಿಗಳು
ರಾಷ್ಟ್ರೀಯ ಮಟ್ಟದ ಮೂಟ್ ಕೋರ್ಟ್ ಸ್ಪರ್ಧೆಯ ಬಹುಮಾನ ಪಡೆಯುತ್ತಿರುವ ರೋಹನ್ ವಿ ಗಂಗಾಡ್ಕರ್, ಅಮೂಲ್ಯ ಮತ್ತು ನಿಕಿತಾ
Follow us on

ಮೈಸೂರು: ರಾಷ್ಟ್ರಮಟ್ಟದ ಮೂಟ್ ಕೋರ್ಟ್ ಸ್ಪರ್ಧೆ (National Level Moot Court Competition 2023)ಯಲ್ಲಿ ಮೈಸೂರಿನ ಸರಸ್ವತಿಪುರಂನಲ್ಲಿರುವ ಜೆಎಸ್‌ಎಸ್ ಕಾನೂನು ಕಾಲೇಜಿನ (JSS Law College Mysuru) ಮೂವರು ವಿದ್ಯಾರ್ಥಿಗಳಾದ ರೋಹನ್ ವಿ ಗಂಗಾಡ್ಕರ್, ಅಮೂಲ್ಯ ಮತ್ತು ನಿಕಿತಾ ವಿಜೇತರಾಗಿದ್ದಾರೆ. ಮಾರ್ಚ್ 11ರಂದು ಬೆಂಗಳೂರಿನಲ್ಲಿ ರೇವಾ ವಿಶ್ವವಿದ್ಯಾಲಯದ (REVA University Bengaluru) ಸ್ಕೂಲ್ ಆಫ್ ಲೀಗಲ್ ಸ್ಟಡೀಸ್ ಆಯೋಜಿಸಿದ್ದ ಮೂರು ದಿನಗಳ ಸ್ಪರ್ಧೆಯಲ್ಲಿ ದೇಶದ ವಿವಿಧ ರಾಜ್ಯಗಳ 27 ತಂಡಗಳು ಭಾಗವಹಿಸಿದ್ದವು. ರೋಹನ್ ವಿ ಗಂಗಡ್ಕರ್ ಮೈಸೂರಿನ ಹಿರಿಯ ವಕೀಲರು ಲಾಗೈಡ್ ಕನ್ನಡ ಕಾನೂನು ಮಾಸ ಪತ್ರಿಕೆಯ ಗೌರವ ಸಂಪಾದಕ ಹೆಚ್. ಎನ್. ವೆಂಕಟೇಶ್ ಅವರ ಪುತ್ರನಾಗಿದ್ದಾನೆ.

ಇದನ್ನೂ ಓದಿ: ಮಗಳ ಸ್ಕೂಲ್ ಫೀಸ್ ಪಾವತಿಸಲು ಬಡ್ಡಿಗೆ ಸಾಲ ತಂದ ತಾಯಿ; ಶುಲ್ಕ ವಸೂಲಿ ಮಾಡುತ್ತಿರುವ ಹೆಚ್​ಎಂಆರ್ ಶಾಲೆ ವಿರುದ್ಧ ದೂರು ದಾಖಲು

ವಿಜೇತರಾದ ರೋಹನ್ ವಿ ಗಂಗಾಡ್ಕರ್, ಅಮೂಲ್ಯ ಮತ್ತು ನಿಕಿತಾ ಅವರು ಟ್ರೋಫಿ ಮತ್ತು 20,000 ರೂಪಾಯಿ ನಗದು ಬಹುಮಾನವನ್ನು ಪಡೆದಿದ್ದಾರೆ. ಹೈಕೋರ್ಟ್ ನ್ಯಾಯಾಧೀಶರಾದ ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್ ಮತ್ತು ನ್ಯಾಯಮೂರ್ತಿ ಇ ಸೀತಾರಾಮಯ್ಯ ಇಂದಿರೇಶ್ ಅವರು ಬಹುಮಾನ ವಿತರಣೆ ಮಾಡಿದರು. ಈ ಸ್ಪರ್ಧೆಯಲ್ಲಿ ಸ್ಕೂಲ್ ಆಫ್ ಎಕ್ಸಲೆನ್ಸ್ ಇನ್ ಲಾ ಚೆನ್ನೈ ವಿದ್ಯಾರ್ಥಿಗಳು ಎರಡನೇ ಸ್ಥಾನ ಪಡೆದಿದ್ದಾರೆ.

ಶೈಕ್ಷಣಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:19 pm, Mon, 13 March 23