ಸೆಪ್ಟೆಂಬರ್ನಲ್ಲಿ ನಡೆಯಲಿರುವ ನೀಟ್-2021 (NEET-2021) ಪರೀಕ್ಷೆಗೆ ನೋಂದಣಿ ಪ್ರಕ್ರಿಯೆಯನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA-National Testing Agency) ಇಂದಿನಿಂದ (ಜು.13) ಪ್ರಾರಂಭ ಮಾಡಲಿದೆ. NTA ಯ ನೀಟ್ ವೆಬ್ಸೈಟ್ ಮೂಲಕ ಆನ್ಲೈನ್ನಲ್ಲಿಯೇ ನೋಂದಣಿ ಮಾಡಬಹುದಾಗಿದ್ದು, ಇಂದು ಸಂಜೆ 5ಗಂಟೆಯಿಂದ ರಿಜಿಸ್ಟ್ರೇಶನಲ್ ಲಿಂಕ್ ಲಭ್ಯವಾಗಲಿದೆ..
ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET) ಸೆಪ್ಟೆಂಬರ್ 12ರಂದು ನಡೆಯಲಿದೆ ಎಂದು ನೂತನ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಸೋಮವಾರ ಘೋಷಿಸಿದ್ದಾರೆ. ಒಟ್ಟು 198 ನಗರಗಳಲ್ಲಿ ಈ ನೀಟ್ ಪರೀಕ್ಷೆ ನಡೆಯಲಿದೆ. ಹಾಗೇ 2020ರಲ್ಲಿ ಒಟ್ಟು 3862 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಆದರೆ ಈ ಬಾರಿ ಅದರ ಸಂಖ್ಯೆಯನ್ನೂ ಹೆಚ್ಚಿಸಲಾಗಿದೆ.
ಇನ್ನು ಪರೀಕ್ಷಾರ್ಥಿಗಳು ಎಲ್ಲ ರೀತಿಯ ಕೊವಿಡ್ 19 ಶಿಷ್ಟಾಚಾರಗಳನ್ನೂ ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಪರೀಕ್ಷಾರ್ಥಿಗಳಿಗೆ ಆಯಾ ಕೇಂದ್ರಗಳಲ್ಲಿ ಮಾಸ್ಕ್ಗಳನ್ನು ನೀಡಲಾಗುತ್ತದೆ ಎಂದು ಶಿಕ್ಷಣ ಸಚಿವರು ಹೇಳಿದ್ದಾರೆ.
ನೀಟ್ ಪರೀಕ್ಷೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಪರೀಕ್ಷಾರ್ಥಿಗಳು ಅರ್ಜಿ ಸಲ್ಲಿಸಲು ಈ ಕೆಳಗೆ ನೀಡಲಾದ ಸರಳ ವಿಧಾನವನ್ನು ಅನುಸರಿಸಬಹುದು.
1. ಮೊದಲು ಎನ್ಟಿಎ ನೀಟ್ನ ಅಧಿಕೃತ ವೆಬ್ಸೈಟ್ ntaneet.nic.in.ಗೆ ಭೇಟಿ ಕೊಡಿ
2. ಅದರ ಹೋಂಪೇಜ್ನಲ್ಲಿ ಕಾಣುವ NEET 2021 ಲಿಂಕ್ ಮೇಲೆ ಕ್ಲಿಕ್ ಮಾಡಿ.
3. ಅಲ್ಲಿ ಲಾಗಿನ್ ವಿವರಗಳನ್ನು ತುಂಬಿ, ಸಬ್ಮಿಟ್ ಎಂಬಲ್ಲಿ ಕ್ಲಿಕ್ ಮಾಡಿ.
4. ನಿಮಗೆ ಅಪ್ಲಿಕೇಶನ್ ಫಾರಂ ಕಾಣಿಸುತ್ತದೆ. ಅಪ್ಲಿಕೇಶನ್ನಲ್ಲಿ ಕೇಳಲಾದ ಎಲ್ಲ ವಿವರಗಳನ್ನೂ ತುಂಬಿ ಮತ್ತು ಪರೀಕ್ಷಾ ಶುಲ್ಕವನ್ನೂ ತುಂಬಿ.
5. ದೃಢೀಕರಣ ಪುಟವನ್ನು ಡೌನ್ಲೋಡ್ ಮಾಡಿಕೊಳ್ಳಿ
6. ಅದರ ಹಾರ್ಡ್ ಕಾಪಿ ಒಂದನ್ನು ನೀವು ಇಟ್ಟುಕೊಳ್ಳಿ.
ಇದನ್ನೂ ಓದಿ: Cinema Writing : ‘ಬೆಲ್ ಬಾಟಮ್’ ಟ್ರಂಪ್ಕಾರ್ಡಿನೊಂದಿಗೆ ಕನ್ನಡದ ನಿರ್ದೇಶಕ ಟಿ.ಕೆ. ದಯಾನಂದ ತೆಲುಗಿಗೆ
NEET 2021 Registration to begin today Check here to know the process