ದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (National Testing Agency – NTA) ನೀಟ್ 2022ರ ಅರ್ಜಿ ಸಲ್ಲಿಕೆ ವಿಧಿಸಿದ್ದ ಗಡುವನ್ನು ವಿಸ್ತರಿಸಿದೆ (NEET 2022 Application Date Extended). ವಿವಿಧ ಪದವಿ ತರಗತಿಗಳಿ ಪ್ರವೇಶ ದೊರಕಿಸಲು ನಡೆಸುವ NEET UG 2022 ಪರೀಕ್ಷೆಗಳ ಅಂತಿಮ ದಿನಾಂಕ ವಿಸ್ತರಣೆಯಾಗಿದೆ. ಈ ಹಿಂದೆ ಘೋಷಣೆಯಾಗಿದ್ದಂತೆ ಮೇ 6 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿತ್ತು. ಎಎಂಎಫ್ಎಸ್ (Armed Forces Medical Services – AMFS) ಮೂಲಕ ಬಿಎಸ್ಸಿ ನರ್ಸಿಂಗ್ ಪದವಿ ಪಡೆಯಲು ಬಯಸುವ ಅಭ್ಯರ್ಥಿಗಳ ವಿನಂತಿ ಮೇರೆಗೆ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವನ್ನು ಇನ್ನೂ ಒಂದು ವಾರ ವಿಸ್ತರಿಸಲಾಗಿದೆ. ಆದರೆ ಪರೀಕ್ಷೆಯ ದಿನಾಂಕ ಬದಲಾಗಿಲ್ಲ. ಪರೀಕ್ಷೆಗಳು ಈ ಮೊದಲು ನಿಗದಿಯಾಗಿದ್ದಂತೆ ಜುಲೈ 17ರಂದೇ ನಡೆಯಲಿದೆ. ಈವರೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪೂರ್ಣಗೊಳಿಸದ ವಿದ್ಯಾರ್ಥಿಗಳು neet.nta.ac.in ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ಬಳಕೆಯಾಗುವ ನೇರ ಲಿಂಕ್ ಅನ್ನು ಈ ಲೇಖನದ ಕೊನೆಯಲ್ಲಿಯೂ ಕೊಡಲಾಗಿದೆ.
ಶಿಕ್ಷಣಕ್ಕೆ ಸಂಬಂಧಿಸಿದ ಇನ್ನಷ್ಟು ಮಾಹಿತಿಗೆ ಲಿಂಕ್ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಕೆ ವಿಧಿಸಿದ್ದ ಕೊನೆಯ ದಿನಾಂಕ ವಿಸ್ತರಣೆಯನ್ನು ಎನ್ಟಿಎ ತನ್ನ ವೆಬ್ಸೈಟ್ನಲ್ಲಿ ಪ್ರಕಟಣೆಯೊಂದನ್ನು ಪ್ರಕಟಿಸುವ ಮೂಲಕ ದೃಢಪಡಿಸಿದೆ. NEET UG 2022 ಪರೀಕ್ಷೆ ಫಲಿತಾಂಶವನ್ನು ಆಧರಿಸಿ ಎಎಂಎಫ್ಎಸ್ ಸಹ ಪ್ರವೇಶ ನೀಡುವುದಾಗಿ ಘೋಷಿಸಿದೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಕೇಂದ್ರೀಯ ಪರೀಕ್ಷಾ ಸಂಸ್ಥೆಯು NEET UG 2022 ಪರೀಕ್ಷೆಗಳ ಗಡುವು ವಿಸ್ತರಿಸಿದೆ. ಈವರೆಗೆ ಅರ್ಜಿ ಸಲ್ಲಿಸದ ವಿದ್ಯಾರ್ಥಿಗಳು ತಕ್ಷಣ ನೀಟ್ ವೆಬ್ಸೈಟ್ಗೆ ಲಾಗಿನ್ ಆಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.
ಒಟ್ಟು 220 ಅಭ್ಯರ್ಥಿಗಳಿಗೆ ಎಎಂಎಫ್ಎಸ್ ಕಾಲೇಜುಗಳಲ್ಲಿ ಪ್ರವೇಶವಿದೆ. ಈ ಪೈಕಿ ಪುಣೆ 40, ಕೊಲ್ಕತ್ತಾ 30, ಮುಂಬೈ 40, ದೆಹಲಿ 30, ಲಖನೌ 40, ಬೆಂಗಳೂರು 40 ಅಭ್ಯರ್ಥಿಗಳಿಗೆ ಪ್ರವೇಶ ಲಭ್ಯವಿದೆ.
NEET 2022 ಮೂಲಕ ಪ್ರವೇಶ ನೀಡುವ ಎಎಂಎಫ್ಎಸ್ ಕಾಲೇಜುಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಭಾರತೀಯ ಸೇನೆಯ ನೇಮಕಾತಿ ವೆಬ್ಸೈಟ್ಗೆ ಭೇಟಿ ನೀಡಿ. ಇದರ ಜೊತೆಗೆ ನೀಟ್ ವೆಬ್ಸೈಟ್ನಲ್ಲಿಯೂ ಸಾಕಷ್ಟು ಮಾಹಿತಿ ಲಭ್ಯವಿದೆ. ಆಸಕ್ತ ಅಭ್ಯರ್ಥಿಗಳು ದೂರವಾಣಿ ಸಂಖ್ಯೆ 011-40759000 ಅಥವಾ ಇಮೇಲ್ neet@nta.ac.in ಮೂಲಕವೂ ಹೆಚ್ಚಿನ ಮಾಹಿತಿ ಪಡೆಯಬಹುದು.
ಸಂಪೂರ್ಣ ಅಧಿಸೂಚನೆ ಓದಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ: NEET UG Exam 2022 Date: ನೀಟ್ ಪದವಿಪೂರ್ವ ಪರೀಕ್ಷೆ ದಿನಾಂಕ ಘೋಷಣೆ; ಜೆಇಇ ಮುಖ್ಯ ಪರೀಕ್ಷೆ ಮುಂದೂಡಿಕೆ
ಇದನ್ನೂ ಓದಿ: NEET PG 2022: ನೀಟ್ ಪಿಜಿ ಅಪ್ಲಿಕೇಷನ್ ತಿದ್ದುಪಡಿ ವಿಂಡೋ ಓಪನ್; ಬದಲಾವಣೆಗಳನ್ನು ಮಾಡಲು ಹೀಗೆ ಮಾಡಿ
Published On - 1:21 pm, Wed, 4 May 22