ಭಾರತದ ಉನ್ನತ ಎಂಜಿನಿಯರಿಂಗ್ ಕಾಲೇಜುಗಳ ಶ್ರೇಯಾಂಕ ಪಟ್ಟಿ ಬಿಡುಗಡೆ ಆಗಿದೆ. ಕೇಂದ್ರ ಶಿಕ್ಷಣ ಸಚಿವಾಲಯವು ರಾಷ್ಟ್ರೀಯ ಸಾಂಸ್ಥಿಕ ರ‍್ಯಾಂಕಿಂಗ್ ಫ್ರೇಮ್‌ವರ್ಕ್ (NIRF) ಶ್ರೇಯಾಂಕ 2023ರ ಪಟ್ಟಿ ಬಿಡುಗಡೆ ಮಾಡಿದ್ದು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಮದ್ರಾಸ್ ಅಗ್ರಸ್ಥಾನದಲ್ಲಿದೆ. ಐಐಟಿ ಮದ್ರಾಸ್ ದೇಶದ ಅತ್ಯುತ್ತಮ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಟಾಪ್ 1 ಆಗಿದ್ದು, ಭಾರತೀಯ ವಿಜ್ಞಾನ ಸಂಸ್ಥೆ ಬೆಂಗಳೂರು (IISc Bangalore) ಎರಡನೇ ಸ್ಥಾನದಲ್ಲಿದೆ. ಅತ್ಯುತ್ತಮ ವಿಶ್ವವಿದ್ಯಾನಿಲಯ ವಿಭಾಗದಲ್ಲಿ, IISc ಬೆಂಗಳೂರು ಯುನಿವರ್ಸಿಟಿ ಅಗ್ರ ಸ್ಥಾನದಲ್ಲಿದೆ.ಜೆಎನ್ಯು (JNU) ಮತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯಾ ನಂತರದ ಸ್ಥಾನದಲ್ಲಿದೆ. ಮೂರು ಖಾಸಗಿ ವಿಶ್ವವಿದ್ಯಾಲಯಗಳೂ ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
ಸತತ ಎಂಟನೇ ವರ್ಷಕ್ಕೆ ಅತ್ಯುತ್ತಮ ಎಂಜಿನಿಯರಿಂಗ್ ಸಂಸ್ಥೆಯಾಗಿ ಐಐಟಿ ಮದ್ರಾಸ್ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಟಾಪ್ ಮ್ಯಾನೇಜ್ ಮೆಂಟ್ ಕಾಲೇಜು ಐಐಎಂ-ಅಹಮದಾಬಾದ್ ಆಗಿದ್ದು ಮೂರು ಎಂಜಿನಿಯರಿಂಗ್ ಕಾಲೇಜುಗಳು ಟಾಪ್ 10 ಬಿ-ಸ್ಕೂಲ್ ವರ್ಗದ ಅಡಿಯಲ್ಲಿವೆ.
ಎನ್‌ಐಆರ್‌ಎಫ್ 2023 ರ ಶ್ರೇಯಾಂಕಕ್ಕೆ ಪ್ರತಿಕ್ರಿಯಿಸಿದ ಐಐಟಿ ಮದ್ರಾಸ್ ನಿರ್ದೇಶಕ ಪ್ರೊಫೆಸರ್ ವಿ ಕಾಮಕೋಟಿ, ಕೇಂದ್ರಶಿಕ್ಷಣ ಸಚಿವಾಲಯ ಪ್ರಕಟಿಸಿದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ರ‍್ಯಾಂಕಿಂಗ್ ಫ್ರೇಮ್‌ವರ್ಕ್ 2023ರಲ್ಲಿ ಮತ್ತು ಎಂಜಿನಿಯರಿಂಗ್ ವಿಭಾಗಗಳಲ್ಲಿ ಐಐಟಿ ಮದ್ರಾಸ್ ಮತ್ತೊಮ್ಮೆ ಟಾಪರ್ ಆಗಿರುವುದು ಸಂತೋಷದ ಸಂಗತಿ. ಇದು ಸಂಶೋಧನೆ ಮತ್ತು ಶಿಕ್ಷಣದಲ್ಲಿ ಜಾಗತಿಕ ನಾಯಕನಾಗಿ ಗುರುತಿಸಿಕೊಳ್ಳುವ ನಮ್ಮ ಪ್ರಯತ್ನಗಳನ್ನು ಪ್ರೋತ್ಸಾಹಿಸುತ್ತದೆ. ಐಐಟಿ ಮದ್ರಾಸ್‌ಗಾಗಿ ವಿವರಿಸಿರುವ ಕಾರ್ಯತಂತ್ರದ ಯೋಜನೆಯಲ್ಲಿ ನಾವು ಟ್ರ್ಯಾಕ್‌ನಲ್ಲಿದ್ದೇವೆ ಎಂಬುದರ ಬಗ್ಗೆ ಹೆಮ್ಮೆ ಇದೆ ಎಂದಿದ್ದಾರೆ.
ರ‍್ಯಾಂಕ್ 1: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮದ್ರಾಸ್
ರ‍್ಯಾಂಕ್ 2: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರು
ರ‍್ಯಾಂಕ್ 3: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ದೆಹಲಿ
ರ‍್ಯಾಂಕ್ 4: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬಾಂಬೆ
ರ‍್ಯಾಂಕ್ 5: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕಾನ್ಪುರ
NIRF ರ‍್ಯಾಂಕಿಂಗ್: ಒಟ್ಟಾರೆ ಶ್ರೇಯಾಂಕಗಳಲ್ಲಿ ಟಾಪ್ 10 ಕಾಲೇಜುಗಳು
ಐಐಟಿ ಮದ್ರಾಸ್
IISc ಬೆಂಗಳೂರು
ಐಐಟಿ ಬಾಂಬೆ
ಐಐಟಿ ದೆಹಲಿ
ಐಐಟಿ ಕಾನ್ಪುರ
ಐಐಟಿ ಖರಗ್‌ಪುರ
ಐಐಟಿ ರೂರ್ಕಿ
ಐಐಟಿ ಗುವಾಹಟಿ
ಏಮ್ಸ್ ದೆಹಲಿ
ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ
ಇದನ್ನೂ ಓದಿ:ಸಮಾಜದಲ್ಲಿ ನೈತಿಕತೆ ಮೂಡಿಸುವ ಶಿಕ್ಷಣ ಅವಶ್ಯಕತೆ ಇದೆ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
2022ರ ಶ್ರೇಯಾಂಕ
ಐಐಟಿ ಮದ್ರಾಸ್
ಐಐಟಿ ದೆಹಲಿ
ಐಐಟಿ ಬಾಂಬೆ
ಐಐಟಿ ಕಾನ್ಪುರ
ಐಐಟಿ ಖರಗ್‌ಪುರ
ಐಐಟಿ ರೂರ್ಕಿ
ಐಐಟಿ ಗುವಾಹಟಿ
ಎನ್ಐಟಿ ತಿರುಚ್ಚಿ
ಐಐಟಿ ಹೈದರಾಬಾದ್
ಎನ್ಐಟಿ ಕರ್ನಾಟಕ
ಜಾದವ್‌ಪುರ ವಿಶ್ವವಿದ್ಯಾಲಯ
ವಿಐಟಿ ವೆಲ್ಲೂರು
ಐಐಟಿ ಬಿಎಚ್ಯು
ಐಐಟಿ (ಇಂಡಿಯನ್ ಸ್ಕೂಲ್ ಆಫ್ ಮೈನ್ಸ್)
ಎನ್ಐಟಿ ರೂರ್ಕೆಲಾ
ಐಐಟಿ ಇಂದೋರ್
ಅಣ್ಣಾ ಯುನಿವರ್ಸಿಟಿ
ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ
ಅಮೃತ ವಿಶ್ವ ವಿದ್ಯಾಪೀಠ
ಐಐಟಿ ಮಂಡಿ
ಎನ್ಐಟಿ ವಾರಂಗಲ್
ಐಐಟಿ ರೋಪರ್
ಐಐಟಿ ಗಾಂಧಿನಗರ
ಎಸ್ಆರ್ ಎಂಐಎಸ್ಟಿ
ಅಮಿಟಿ ಯುನಿವರ್ಸಿಟಿ
ಶಿಕ್ಷಣ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:29 pm, Mon, 5 June 23