Pariksha Pe Charcha 2023: ಪರೀಕ್ಷಾ ಪೆ ಚರ್ಚಾ ಆರಂಭ: ಇದು ನನ್ನ ಪರೀಕ್ಷೆ ಎಂದ ಪ್ರಧಾನಿ ಮೋದಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 27, 2023 | 11:22 AM

Pariksha Pe Charcha 2023 PM Modi Live Interaction Updates: ನನ್ನ ದೇಶದ ಯುವಮನಸ್ಸುಗಳು ಏನು ಯೋಚಿಸುತ್ತಿವೆ ಎಂದು ತಿಳಿಯಲು ಪರೀಕ್ಷಾ ಪೆ ಚರ್ಚಾ ಉತ್ತಮ ಅವಕಾಶ ಎಂದು ಹೇಳಿದರು.

Pariksha Pe Charcha 2023: ಪರೀಕ್ಷಾ ಪೆ ಚರ್ಚಾ ಆರಂಭ: ಇದು ನನ್ನ ಪರೀಕ್ಷೆ ಎಂದ ಪ್ರಧಾನಿ ಮೋದಿ
ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.
Follow us on

ದೆಹಲಿ: ಪರೀಕ್ಷಾ ಪೆ ಚರ್ಚಾ (Pariksha Pe Charcha 2023) ಎನ್ನುವುದು ನನ್ನ ಪರೀಕ್ಷೆಯೂ ಹೌದು. ದೇಶದ ಕೋಟ್ಯಂತರ ವಿದ್ಯಾರ್ಥಿಗಳು ನನ್ನ ಮೌಲ್ಯಮಾಪನ ಮಾಡುತ್ತಾರೆ. ಇದು ನನಗೆ ಖುಷಿಯ ಸಂಗತಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಬಹುನಿರೀಕ್ಷಿತ ‘ಪರೀಕ್ಷಾ ಪೆ ಚರ್ಚಾ’ದ 6ನೇ ಆವೃತ್ತಿಯಲ್ಲಿ ಮಾತನಾಡಿದ ಅವರು, ನನ್ನ ದೇಶದ ಯುವಮನಸ್ಸುಗಳು ಏನು ಯೋಚಿಸುತ್ತಿವೆ ಎಂದು ತಿಳಿಯಲು, ಅವರು ಸರ್ಕಾರಗಳಿಂದ ಏನು ನಿರೀಕ್ಷಿಸುತ್ತಿದ್ದಾರೆ ಎನ್ನುವುದನ್ನು ಅರಿಯಲು ಇದು ನನಗೆ ಅತ್ಯುತ್ತಮ ಖಜಾನೆಯಾಗಿದೆ ಎಂದು ಹೇಳಿದರು.

‘ಪರೀಕ್ಷಾ ಪೆ ಚರ್ಚಾಗೆ ಬರುವ ಎಲ್ಲ ಪ್ರಶ್ನೆಗಳನ್ನು ಒಂದುಕಡೆ ಹುಷಾರಾಗಿ ಇರಿಸುವಂತೆ ನನ್ನ ಕಚೇರಿಗೆ ನಾನು ಸೂಚನೆ ನೀಡಿದ್ದೇನೆ. ಮುಂದೆ ಸಮಯಾವಕಾಶವಾದಾಗ ಸಮಾಜ ವಿಜ್ಞಾನಿಗಳು ಇದನ್ನು ವಿಶ್ಲೇಷಿಸಲಿದ್ದಾರೆ’ ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಸ್ವಾಗತ ಭಾಷಣ ಮಾಡಿದ ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್, ‘ಭಾರತದ ವಿದ್ಯಾರ್ಥಿಯು ಇಂದು ವಿಶ್ವದಲ್ಲಿ ಏನೆಲ್ಲಾ ಆಗುತ್ತಿದೆ ಎನ್ನುವುದನ್ನು ಸುಲಭವಾಗಿ ತಿಳಿದುಕೊಳ್ಳುತ್ತಿದ್ದಾನೆ. ವಿಶ್ವದ ಪರಿಸರ, ತಂತ್ರಜ್ಞಾನದ ಬಗ್ಗೆಯೂ ಯೋಚಿಸುತ್ತಾನೆ. ಇದು ಸಾಧ್ಯವಾಗಬೇಕು ಎನ್ನುವುದು ಪ್ರಧಾನಿಗಳ ಚಿಂತನೆಯಾಗಿತ್ತು. ಪರೀಕ್ಷಾ ಪೆ, ಎಕ್ಸಾಂ ವಾರಿಯರ್​ಗಳು ಇಂಥ ಕ್ರಮದ ಭಾಗವೇ ಆಗಿವೆ. ದೇಶದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡಲಾಗಿದೆ. ಭಾರತದ ವಿದ್ಯಾರ್ಥಿ ಕೇವಲ ಶಿಕ್ಷಣದ ಬಗ್ಗೆಯಷ್ಟೇ ಯೋಚಿಸುವುದಿಲ್ಲ’ ಎಂದು ಹೇಳಿದರು.

ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮಕ್ಕೆ ಈ ಬಾರಿ ಸುಮಾರು 38.8 ಲಕ್ಷ ಮಕ್ಕಳು, 155 ವಿವಿಧ ದೇಶಗಳಿಂದ ನೋಂದಣಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಇಂದು ಸಂಜೆ 7ಕ್ಕೆ ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಪರೀಕ್ಷಾ ಪೆ ಚರ್ಚಾ; ನೀವೂ ವೀಕ್ಷಿಸಬಹುದು- ಎಲ್ಲಿ? ಹೇಗೆ? ಇಲ್ಲಿದೆ ಮಾಹಿತಿ

ಪರೀಕ್ಷಾ ಪೆ ಚರ್ಚಾ ಕುರಿತ ಮತ್ತಷ್ಟು ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:19 am, Fri, 27 January 23