ನವದೆಹಲಿ: ರೈಲ್ವೇ ನೇಮಕಾತಿ ಮಂಡಳಿಯು ಶನಿವಾರ (ಜನವರಿ 15) ಬಹುತೇಕ ಎಲ್ಲಾ ಪ್ರದೇಶಗಳ ‘RRB NTPC ಪರೀಕ್ಷೆ 2021’ ರ ಫಲಿತಾಂಶಗಳನ್ನು ಪ್ರಕಟಿಸಿದೆ. ಮೊದಲ ಹಂತದ ಪರೀಕ್ಷೆಯು ಆನ್ಲೈನ್ ಮೂಲಕ ನಡೆದಿತ್ತು. ಪರೀಕ್ಷೆಗಳನ್ನು 2020ರ ಡಿಸೆಂಬರ್ 28ರಿಂದ 2021ರ ಜುಲೈ 31ರವರೆಗೆ ದೇಶಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗಿತ್ತು. ಅದರಲ್ಲಿ ಭಾಗವಹಿಸಿದ ಅಭ್ಯರ್ಥಿಗಳು ತಮ್ಮ ಪ್ರದೇಶವಾರು ಫಲಿತಾಂಶಗಳನ್ನು ಆರ್ಆರ್ಬಿ (RRB)ಯ ಅಧಿಕೃತ ಜಾಲತಾಣದಲ್ಲಿ ಪರಿಶೀಲಿಸಬಹುದು.
ರಿಸಲ್ಟ್ ಪರಿಶೀಲಿಸುವುದು ಹೇಗೆ?
1. ರೈಲ್ವೆ ನೇಮಕಾತಿ ಮಂಡಳಿಯ ಸಂಬಂಧಿತ ಪ್ರಾದೇಶಿಕ ವೆಬ್‌ಸೈಟ್‌ಗೆ ಭೇಟಿ ನೀಡಿ
2. ಮುಖಪುಟಕ್ಕೆ (Home Page) ಹೋಗಿ ಮತ್ತು ‘RRB NTPC ಫಲಿತಾಂಶ 2021’ ಲಿಂಕ್ ಅನ್ನು ಕ್ಲಿಕ್ ಮಾಡಿ
3. ಅಭ್ಯರ್ಥಿಯ ಲಾಗಿನ್ ಆಗಬೇಕು. ಆಗ ಡೌನ್‌ಲೋಡ್ ಮಾಡಬಹುದಾದ PDF ಫೈಲ್ ಕಾಣಿಸಿಕೊಳ್ಳುತ್ತದೆ.
4. ಫೈಲ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ನಿಮ್ಮ ಫಲಿತಾಂಶವನ್ನು ಪರಿಶೀಲಿಸಿ.
ಬೆಂಗಳೂರಿನಲ್ಲಿ ಪರೀಕ್ಷೆ ಬರೆದವರು ನೇರವಾಗಿ ಫಲಿತಾಂಶವನ್ನು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.
ರೈಲ್ವೆ ನೇಮಕಾತಿ ಮಂಡಳಿಯು ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳ ಪಟ್ಟಿಯನ್ನು ಸಹ ಬಿಡುಗಡೆ ಮಾಡಿದೆ. ಇಲಾಖೆಯಲ್ಲಿ ಖಾಲಿ ಇರುವ 30 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲು ಮಂಡಳಿಯು ಅರ್ಜಿ ಆಹ್ವಾನಿಸಿತ್ತು. ರೈಲ್ವೆ ಅಧಿಸೂಚನೆಗಳ ಪ್ರಕಾರ ಕ್ಲರ್ಕ್ ಕಮ್ ಟೈಪಿಸ್ಟ್, ಅಕೌಂಟ್ಸ್ ಕ್ಲರ್ಕ್ ಕಮ್ ಟೈಪಿಸ್ಟ್, ಟೈಮ್ ಕೀಪರ್, ಟ್ರೈನ್ಸ್ ಕ್ಲರ್ಕ್, ಕಮರ್ಷಿಯಲ್ ಕಮ್ ಟಿಕೆಟ್ ಕ್ಲರ್ಕ್, ಗೂಡ್ಸ್, ಟ್ರಾಫಿಕ್ ಕ್ಲರ್ಕ್ ಮುಂತಾದ ತಾಂತ್ರಿಕವಲ್ಲದ ವರ್ಗಗಳ ಅಡಿಯಲ್ಲಿ 35,281 ಖಾಲಿ ಹುದ್ದೆಗಳ ನೇಮಕಾತಿಗಾಗಿ ಮೊದಲ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ನಡೆಸಲಾಯಿತು. 1.25 ಕೋಟಿಗೂ ಹೆಚ್ಚು ಅರ್ಹ ಅಭ್ಯರ್ಥಿಗಳು ಪರೀಕ್ಷೆ ಎದುರಿಸಿದ್ದರು.
CBT 1 ಪರೀಕ್ಷೆಯಲ್ಲಿ ಅರ್ಹತೆ ಪಡೆಯುವ ಅಭ್ಯರ್ಥಿಗಳು CBT 2 ಪರೀಕ್ಷೆಗೆ ಹಾಜರಾಗಲು ಅರ್ಹರಾಗಿರುತ್ತಾರೆ. CBT-1 ರಲ್ಲಿ ಶಾರ್ಟ್‌ಲಿಸ್ಟ್ ಆಗುವ ಅಭ್ಯರ್ಥಿಗಳಿಗೆ 2 ನೇ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT-2) ಪರೀಕ್ಷೆಯನ್ನು ಫೆಬ್ರವರಿ 14-18, 2022 ರವರೆಗೆ ನಡೆಸಲು ನಿರ್ಧರಿಸಲಾಗಿದೆ. ಇದು ಸರ್ಕಾರದ ಪ್ರಸ್ತುತ ಕೊವಿಡ್ ನಿಯಮಾವಳಿಗಳಿಗೆ ಅನುಗುಣವಾಗಿ ನಿರ್ಧರಿತವಾಗಿದೆ. ಒಂದು ವೇಳೆ ನಿಯಮಗಳು ಬದಲಾದರೆ ಮಂಡಳಿ ತನ್ನ ನಿರ್ಧಾರ ಬದಲಿಸುವ ಸಾಧ್ಯತೆ ಇದೆ.
ಇದನ್ನೂ ಓದಿ:
10ನೇ ವರ್ಷಕ್ಕೆ ಎರಡು ಕಂಪನಿಗಳ ಒಡತಿಯಾದ ಈ ಬಾಲಕಿಗೆ 15ನೇ ವಯಸ್ಸಿಗೇ ನಿವೃತ್ತಿ
ಚಳಿ, ಮಳೆ, ಬಿಸಿಲು ಯಾವುದನ್ನೂ ಲೆಕ್ಕಿಸದೇ ಸೇವೆ ಸಲ್ಲಿಸುವ ಭಾರತೀಯ ಸೈನಿಕರು; ಇಲ್ಲಿವೆ ಮೈ ನವಿರೇಳಿಸುವ ಫೋಟೋಗಳು