
ಬೆಂಗಳೂರು: ಕೊರೊನಾ ರೂಪಾಂತರಿ(Coroanvirus) ಚೀನಾದಲ್ಲಿ ಅಬ್ಬರಿಸುತ್ತಾ ಭಾರತಕ್ಕೂ ಕಾಲಿಟ್ಟಿದ್ದು, ಕರ್ನಾಟಕಕ್ಕೂ ಲಗ್ಗೆ ಇಡುವ ಆತಂಕ ಶುರುವಾಗಿದೆ. ಹೀಗಾಗಿ ರೂಪ್ಸಾ ತನ್ನ ಅಧೀನದಲ್ಲಿ ಬರುವ ಕರ್ನಾಟಕದ ಖಾಸಗಿ ಶಾಲೆಗಳ ಜೊತೆ ಸಭೆ ಮಾಡಿದ್ದು, ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಖಾಸಗಿ ಶಾಲೆಗಳಲ್ಲಿ ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕೆಂದು ಮಾರ್ಗಸೂಚಿ ಬಿಡುಗಡೆ ಮಾಡಿದೆ. ನಾಳೆಯಿಂದಲೇ (ಡಿಸೆಂಬರ್ 24) ಅನ್ವಯವಾಗಲಿದೆ.
ರುಪ್ಸಾ ಸಂಘಟನೆಗೆ ಒಳಪಡುವ ಶಾಲೆಗಳ ಜೊತೆ ಇಂದು(ಡಿಸೆಂಬರ್ 23) ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದು, ದೇಶದಲ್ಲಿ ಕೊರೊನಾ ಆತಂಕ ಹೆಚ್ಚಾಗುತ್ತಿದೆ. ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಶಾಲೆಗಳಲ್ಲಿ ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಎಂದು ಖಾಸಗಿ ಶಾಲೆಗಳಿಗೆ ಸೂಚಿಸಿದ್ದಾರೆ. ಅಲ್ಲದೇ ಪಬ್ಲಿಕ್ ಪರೀಕ್ಷೆ ಬಿಟ್ಟು ಉಳಿದ ತರಗತಿಗಳ ಪರೀಕ್ಷೆಯನ್ನ ಅವಧಿಗೂ ಮುಂಚೆಯೇ ನಡೆಸುವ ಬಗ್ಗೆ ಚರ್ಚೆ ನಡೆಸಿದರು.
ಪೋಷಕರು ನಿತ್ಯ ತಮ್ಮ ಮಕ್ಕಳ ಆರೋಗ್ಯದ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಸಹ ಕಟ್ಟುನಿಟ್ಟಾಗಿ ನಿಯಮ ಅನುಸರಿಸಬೇಕು ಎಂದು ರುಪ್ಸಾ ಹೇಳಿದ್ದು, ಕೊರೊನಾ ಆತಂಕದ ನಡುವೆ 5, 8ನೇ ತರಗತಿ ವಿದ್ಯಾರ್ಥಿಗಳಿಗೆ ಮೌಲ್ಯಂಕನ ಪರೀಕ್ಷೆ ನಡೆಸಲು ಮುಂದಾಗಿರುವ ಶಿಕ್ಷಣ ಇಲಾಖೆ ನಡೆಗೆ ವಿರೋಧ ವ್ಯಕ್ತಪಡಿಸಿದೆ.
ಖಾಸಗಿ ಶಾಲೆಗಳಿಗೆ ಮಾರ್ಗಸೂಚಿ
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 8:58 pm, Fri, 23 December 22