Textbooks Revision: ಈ ವರ್ಷವೇ ಪಠ್ಯ ಪರಿಷ್ಕರಣೆ: ಎಲ್ಲಾ ಗೊಂದಗಳಿಗೆ ತೆರೆ ಎಳೆದ ಸಚಿವ ಮಧು ಬಂಗಾರಪ್ಪ

| Updated By: Digi Tech Desk

Updated on: Jun 08, 2023 | 1:56 PM

ಈ ಬಾರಿಯ ಶಾಲೆಗಳ ಆರಂಭದ ಜೊತೆಗೆ ಪಠ್ಯ ಪರಿಷ್ಕರಣೆ ಜಟಾಪಟಿ ಶುರುವಾಗಿದೆ. ಒಂದೆಡೆ ಬರಗೂರು ರಾಮಚಂದ್ರಪ್ಪ ಪಠ್ಯ ಪರಿಷ್ಕರಣೆ ಅಧ್ಯಕ್ಷರಾಗಲು ಹಿಂದೆ ಸರಿದಿದ್ದಾರೆ. ಆದರೂ ಸಹ ಸರ್ಕಾರ ಇದೇ ವರ್ಷ ಪಠ್ಯ ಪರಿಷ್ಕರಣೆ ಮಾಡಲು ತೀರ್ಮಾನಿಸಿದೆ.

Textbooks Revision: ಈ ವರ್ಷವೇ ಪಠ್ಯ ಪರಿಷ್ಕರಣೆ: ಎಲ್ಲಾ ಗೊಂದಗಳಿಗೆ ತೆರೆ ಎಳೆದ ಸಚಿವ ಮಧು ಬಂಗಾರಪ್ಪ
ಮಧು ಬಂಗಾರಪ್ಪ
Follow us on

ಬೆಂಗಳೂರು: ಒಂದೆಡೆ ಶಾಲಾ ಪಠ್ಯ ಪರಿಷ್ಕರಣೆ (school textbooks revision) ಫೈಟ್ ಜೋರಾಗಿದ್ರೆ ಮತ್ತೊಂದಡೆ ಪಠ್ಯ ಪರಿಷ್ಕರಣೆಯಿಂದ ಸಾಹಿತಿ ಬರಗೂರು ರಾಮಚಂದ್ರಪ್ಪ ಹಿಂದೆ ಸರಿದಿದ್ದಾರೆ. ಪಠ್ಯ ಪರಿಷ್ಕರಣೆ ಸಮಿತಿ ಅಧ್ಯಕ್ಷತೆಗೆ ಬರಗೂರು ತಿರಸ್ಕಾರ ಮಾಡಿದ್ದು, ನಾನು ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಗೆ ಅಧ್ಯಕ್ಷನಾಗಿಲ್ಲ ಎಂದಿದ್ದಾರೆ. ಆದರೂ ಈ ವರ್ಷವೇ ಪಠ್ಯ ಪರಿಷ್ಕರಣೆ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಈ ವರ್ಷವೇ ಪಠ್ಯ ಪರಿಷ್ಕರಣೆಯಾಗಲಿದೆ. ಈ ಬಗ್ಗೆ ಸ್ವತಃ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ(Madhu Bangarappa) ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು(ಜೂನ್ 08) ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಈ ವರ್ಷವೇ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಲಾಗುತ್ತೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬದಲಾವಣೆ ಮಾಡಿಯೇ ಮಾಡುತ್ತೇವೆ. ಈ ವರ್ಷ ಮಾಡಲ್ಲ ಮುಂದಿನ ವರ್ಷ ಅಂತೆಲ್ಲ ಕೆಲವು ಮಾಧ್ಯಮಗಳಲ್ಲಿ ಬರುತ್ತಿವೆ. ಮಕ್ಕಳು ತಪ್ಪು ಓದಬಾರದು, ತಪ್ಪು ಪಠ್ಯಗಳನ್ನು ಮುಂದಿನ ವರ್ಷದ ತನಕ ಕಾಯಬೇಕಿಲ್ಲ. ಹೀಗಾಗಿ ತಜ್ಞರೂ ಕೂಡ ಅದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ

ಸ್ವತಃ ಸಿಎಂ ಅವರೇ ಈ ಬಗ್ಗೆ ಹೆಚ್ಚು ಆಸಕ್ತಿ ಇಟ್ಟುಕೊಂಡಿದ್ದಾರೆ. ಈ ಕ್ಷಣದಲ್ಲೂ ಕೂಡ ಪಠ್ಯ ಪುಸ್ತಕ ಪರಿಷ್ಕರಣೆ ಸಂಬಂಧಿಸಿ ಸಭೆ ನಡೆಯುತ್ತಿದೆ. ಸಪ್ಲಿಮೆಂಟ್ ಮಾದರಿಯ ಪುಸ್ತಕ ನೀಡುತ್ತೇವೆ ಎಂದು ಮಾಹಿತಿ ನೀಡಿದರು.

ಸರ್ಕಾರದ ಮಟ್ಟದಲ್ಲಿ ಪಠ್ಯಗಳಿಗೆ ಕತ್ತರಿ

ಈ ಬಾರಿಯ ಶಾಲೆಗಳ ಆರಂಭದ ಜೊತೆಗೆ ಪಠ್ಯ ಪರಿಷ್ಕರಣೆ ಜಟಾಪಟಿ ಶುರುವಾಗಿದ್ದು, ಕಳೆದ ಬಾರಿ ಸಾಕಷ್ಟು ವಿರೋಧದ ನಡುವೆ ಬಿಜೆಪಿ ಸರ್ಕಾರ ಪಠ್ಯ ಪರಿಷ್ಕರಣೆ ಮಾಡಿತ್ತು.‌ ಹಲವು ಸಾಹಿತಿಗಳ ಬರೆದ ಪಠ್ಯವನ್ನು ತೆಗೆದು ಹಾಕಿದಕ್ಕೆ ಕೆಲ ಸಾಹಿತಿಗಳು, ವಿಚಾರವಾದಿಗಳು, ಪ್ರಗತಿಪರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಿದ್ದರು, ಇದೀಗ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬರುತ್ತಿದ್ದಂತೆಯೇ ಸಾಹಿತಿಗಳು ಮುಖ್ಯಮಂತ್ರಿಗಳನ್ನ ಭೇಟಿ ಮಾಡಿ ಈ ಹಿಂದೆ ಬಿಜೆಪಿ ಸರ್ಕಾರ ವೇಳೆ ರೋಹಿತ್ ಚಕ್ರತೀರ್ಥ ಸಮಿತಿ ರಚನೆ ಮಾಡಿರುವ ಪಠ್ಯವನ್ನು ಕೈಬಿಡಬೇಕು. ಪಠ್ಯ ಬದಲಾವಣೆ ಮಾಡ್ಬೇಕೆಂದು ಸಮಾನ ಮನಸ್ಕರ ಒಕ್ಕೂಟದ ಅಧ್ಯಕ್ಷ ಅಧ್ಯಕ್ಷ ಡಾ.ಎಸ್.ಜಿ ಸಿದ್ದರಾಮಯ್ಯ ನೇತೃತ್ವದಲ್ಲಿ 20 ಸಾಹಿತಿಗಳು ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.

ಇನ್ನು ಕಾಂಗ್ರೆಸ್ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ಸಹ ಪಠ್ಯ ಪರಿಷ್ಕರಣೆ ಮಾಡುವುದಾಗಿ ತಿಳಿಸಿತ್ತು. ಇದೀಗ ಸಾಹಿತಿಗಳು ಕೂಡ ಮಾಡಿದ್ದು, ಮತ್ತೆ ಪಠ್ಯ ಪರಿಷ್ಕರಣೆ ಜಟಾಪಟಿ ಶುರುವಾಗಿದೆ. ಆದ್ರೆ, ಪಠ್ಯ ಪರಿಷ್ಕರಣೆಯಿಂದ ಸಾಹಿತಿ ಬರಗೂರು ರಾಮಚಂದ್ರಪ್ಪ ಹಿಂದೆ ಸರಿದಿದ್ದಾರೆ. ಪಠ್ಯ ಪರಿಷ್ಕರಣೆ ಸಮಿತಿ ಅಧ್ಯಕ್ಷತೆಗೆ ಬರಗೂರು ತಿರಸ್ಕಾರ ಮಾಡಿದ್ದು, ನಾನು ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಗೆ ಅಧ್ಯಕ್ಷನಾಗಿಲ್ಲ. ಪಠ್ಯಪರಿಷ್ಕರಣೆಗೆ ಹೊಸ ಸಮಿತಿ ಆಗಿಲ್ಲ. ನಾನು ಅಧ್ಯಕ್ಷನಾಗಲು ಒಪ್ಪಿಲ್ಲ ಎಂದು ಬರಗೂರು ರಾಮಚಂದ್ರಪ್ಪ ಟಿವಿ9ಗೆ ಮಾಹಿತಿ ನೀಡಿದ್ದಾರೆ. ಬರಗೂರು ರಾಮಚಂದ್ರಪ್ಪ ಸಮಿತಿ ಅಧ್ಯಕ್ಷತೆ ವಹಿಸಲು ನಿರಾಕರಣೆ ಹಿನ್ನೆಲೆಯಲ್ಲಿ ಸರ್ಕಾರದ ಮಟ್ಟದಲ್ಲಿ ತಾತ್ಕಲಿಕವಾಗಿ ವಿವಾದಿತ ಮೂರು ಪಠ್ಯಗಳ ಕತ್ತರಿಗೆ ಚಿತಂನೆ ನಡೆದಿದ್ದು, ಶಿಕ್ಷಣ ತಜ್ಞ ನೇತೃತ್ವದಲ್ಲಿ ಸಲಹೆ ಮೇರೆಗೆ ಕೆಲವು ಪಠ್ಯಕ್ಕೆ ಮಾತ್ರ ಕತ್ತರಿ ಹಾಕಲು ಪ್ಲ್ಯಾನ್ ಮಾಡಲಾಗಿದೆ.

ಒಟ್ಟಿನಲ್ಲಿ ಶಾಲೆ ಆರಂಭವಾಗ್ತಿದ್ದಂತೆ ಪಠ್ಯ ಪುಸ್ತಕ ಪರುಷ್ಕರಣೆ ಸಮಿತಿ ಅಧ್ಯಕ್ಷರಾಗಲು ಸಾಹಿತಿ ಬರಗೂರು ನಿರಾಕರಿಸಿದ್ದು, ಇದರ ಮಧ್ಯೆ ಇದೇ ವರ್ಷ ಪಠ್ಯ ಪರಿಷ್ಕರಣೆಗೆ ಸರ್ಕಾರ ತೀರ್ಮಾನಿಸಿದೆ.

Published On - 1:32 pm, Thu, 8 June 23