ಕೈಯಲ್ಲಿ ಡಮರು, ತ್ರಿಶೂಲ ಹಿಡಿದ ಮೋದಿ! ಅಸ್ಸಾಂನಲ್ಲಿ ಬಿಜೆಪಿಯ ಭರ್ಜರಿ ಮುನ್ನಡೆಗೆ ಎಐ ವೀಡಿಯೋ ಹಂಚಿಕೊಂಡು ಸಂಭ್ರಮ

Updated on: May 04, 2026 | 1:13 PM

ಅಸ್ಸಾಂ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು, ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ (NDA) ಮೈತ್ರಿಕೂಟ ಸತತ ಮೂರನೇ ಬಾರಿಗೆ ಅಧಿಕಾರಕ್ಕೇರುವತ್ತ ದಾಪುಗಾಲು ಹಾಕಿದೆ. ಒಟ್ಟು 126 ಕ್ಷೇತ್ರಗಳಿರುವ ಅಸ್ಸಾಂನಲ್ಲಿ ಬಹುಮತಕ್ಕೆ 64 ಸ್ಥಾನಗಳ ಅಗತ್ಯವಿದ್ದು, ಮಧ್ಯಾಹ್ನ 11.45ರ ಸುಮಾರಿಗೆ ಬಿಜೆಪಿ ಬರೊಬ್ಬರಿ 101 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಳ್ಳುವ ಮೂಲಕ ವಿರೋಧ ಪಕ್ಷಗಳನ್ನು ಧೂಳೀಪಟ ಮಾಡಿದೆ. ಈ ಅಭೂತಪೂರ್ವ ಹ್ಯಾಟ್ರಿಕ್ ಗೆಲುವಿನ ಮುನ್ಸೂಚನೆಯಿಂದ ಅಸ್ಸಾಂ ಬಿಜೆಪಿ ಘಟಕವು ಸಖತ್ ಖುಷಿಯಲ್ಲಿದೆ. ಈ ಸಂಭ್ರಮವನ್ನು ವ್ಯಕ್ತಪಡಿಸಲು ಅಸ್ಸಾಂ ಬಿಜೆಪಿ ತನ್ನ ಅಧಿಕೃತ ಎಕ್ಸ್ (X) ಖಾತೆಯಲ್ಲಿ ವಿಶೇಷ ಎಐ (AI) ವೀಡಿಯೋವೊಂದನ್ನು ಹಂಚಿಕೊಂಡಿದೆ. ಈ ವೀಡಿಯೋದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಒಂದು ಕೈಯಲ್ಲಿ ಡಮರು ಮತ್ತು ಮತ್ತೊಂದು ಕೈಯಲ್ಲಿ ತ್ರಿಶೂಲ ಹಿಡಿದಿರುವಂತೆ ಬಿಂಬಿಸಲಾಗಿದ್ದು, ಸದ್ಯ ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ಬೆಂಗಳೂರು, ಮೇ 04: ಅಸ್ಸಾಂ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು, ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ (NDA) ಮೈತ್ರಿಕೂಟ ಸತತ ಮೂರನೇ ಬಾರಿಗೆ ಅಧಿಕಾರಕ್ಕೇರುವತ್ತ ದಾಪುಗಾಲು ಹಾಕಿದೆ. ಒಟ್ಟು 126 ಕ್ಷೇತ್ರಗಳಿರುವ ಅಸ್ಸಾಂನಲ್ಲಿ ಬಹುಮತಕ್ಕೆ 64 ಸ್ಥಾನಗಳ ಅಗತ್ಯವಿದ್ದು, ಮಧ್ಯಾಹ್ನ 11.45ರ ಸುಮಾರಿಗೆ ಬಿಜೆಪಿ ಬರೊಬ್ಬರಿ 101 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಳ್ಳುವ ಮೂಲಕ ವಿರೋಧ ಪಕ್ಷಗಳನ್ನು ಧೂಳೀಪಟ ಮಾಡಿದೆ.

ಈ ಅಭೂತಪೂರ್ವ ಹ್ಯಾಟ್ರಿಕ್ ಗೆಲುವಿನ ಮುನ್ಸೂಚನೆಯಿಂದ ಅಸ್ಸಾಂ ಬಿಜೆಪಿ ಘಟಕವು ಸಖತ್ ಖುಷಿಯಲ್ಲಿದೆ. ಈ ಸಂಭ್ರಮವನ್ನು ವ್ಯಕ್ತಪಡಿಸಲು ಅಸ್ಸಾಂ ಬಿಜೆಪಿ ತನ್ನ ಅಧಿಕೃತ ಎಕ್ಸ್ (X) ಖಾತೆಯಲ್ಲಿ ವಿಶೇಷ ಎಐ (AI) ವೀಡಿಯೋವೊಂದನ್ನು ಹಂಚಿಕೊಂಡಿದೆ. ಈ ವೀಡಿಯೋದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾಶಿಗೆ ಹೋಗಿದ್ದ ಸಂದರ್ಭದಲ್ಲಿ ಒಂದು ಕೈಯಲ್ಲಿ ಡಮರು ಮತ್ತು ಮತ್ತೊಂದು ಕೈಯಲ್ಲಿ ತ್ರಿಶೂಲ ಹಿಡಿದಿದ್ದ ವೀಡಿಯೋವನ್ನು ಎಐ ಮೂಲಕ ಎಡಿಟ್ ಮಾಡಿ ಹಚಿಕೊಂಡಿದ್ದಾರೆ. ಸದ್ಯ ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ಚುನಾವಣಾ ಫಲಿತಾಂಶದ ಲೈವ್​ ಅಪ್​​ಡೇಟ್​​ಗಾಗಿ ಇಲ್ಲಿ ಕ್ಲಿಕ್ ಮಾಡಿ

 

Follow Us