ದೇವನಹಳ್ಳಿ: ಲಕ್ಷಾಂತರ ಮೌಲ್ಯದ ಹೆಲ್ಮೆಟ್​, ಕ್ರೀಡಾ ಕಿಟ್​ ಪತ್ತೆ: ಕಾಂಗ್ರೆಸ್​ ನಾಯಕನಿಗೆ ಸೇರಿದ ದಾಖಲೆ ಇಲ್ಲದ ಹಣ ಜಪ್ತಿ

|

Updated on: Mar 27, 2023 | 4:04 PM

ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರಿಗೆ ಹಂಚಲೆಂದು ಯಲಹಂಕದ ಹಯಗ್ರೀವ ಪಬ್ಲಿಕ್ ಶಾಲೆಯಲ್ಲಿ ಸಂಗ್ರಹಿಸಿಟ್ಟಿದ್ದ ಲಕ್ಷಾಂತರ ಮೌಲ್ಯದ ಹಣ ಮತ್ತು ಗಿಫ್ಟ್​​ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ದೇವನಹಳ್ಳಿ: ಲಕ್ಷಾಂತರ ಮೌಲ್ಯದ ಹೆಲ್ಮೆಟ್​, ಕ್ರೀಡಾ ಕಿಟ್​ ಪತ್ತೆ: ಕಾಂಗ್ರೆಸ್​ ನಾಯಕನಿಗೆ ಸೇರಿದ ದಾಖಲೆ ಇಲ್ಲದ ಹಣ ಜಪ್ತಿ
ಜಪ್ತಿ ಮಾಡಿಕೊಂಡ ವಸ್ತುಗಳು
Follow us on

ದೇವನಹಳ್ಳಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assmbly Election) ಹತ್ತಿರದಲ್ಲಿದ್ದು, ರಾಜಕೀಯ ನಾಯಕರು (Political Leaders) ಮತದಾರರನ್ನು ಸೆಳೆಯಲು ನಾನಾ ತಂತ್ರ, ಕಸರತ್ತುಗಳನ್ನು ಮಾಡುತ್ತಿದ್ದಾರೆ. ಅಬ್ಬರದ ಪ್ರಚಾರದ ನಡುವೆಯೇ ಕಳೆದ 1-2 ತಿಂಗಳಿಂದ ಗಿಫ್ಟ್​ ಪಾಲಿಟಿಕ್ಸ್​​ ಕೂಡ ಶುರುವಾಗಿದೆ. ಮತದಾರರಿಗೆ ಆಮೀಷ ಒಡ್ಡಿ ಮತ ಪಡೆಯುವ ದಾರಿ ಹಿಡಿದಿದ್ದಾರೆ. ಈ ಹಿನ್ನೆಲೆ ರಾಜ್ಯಾದ್ಯಂತ ಕೇಂದ್ರ ಚುನಾವಣಾ ಅಧಿಕಾರಿಗಳ ಸೂಚನೆ ಮೇರೆಗೆ ಪೊಲೀಸರು ರೇಡ್​ ಮಾಡುತ್ತಿದ್ದು, ಸಾಕಷ್ಟು ಹಣ, ಹೆಂಡ, ಸಾಮಾಗ್ರಿಗಳು ಪತ್ತೆಯಾಗಿವೆ. ಅದರಂತೆ ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ (Devanahalli Assembly constituency) ಮತದಾರರಿಗೆ ಹಂಚಲೆಂದು ಯಲಹಂಕದ (Yelahank) ಹಯಗ್ರೀವ ಪಬ್ಲಿಕ್ ಶಾಲೆಯಲ್ಲಿ (Hayagriva Public School) ಸಂಗ್ರಹಿಸಿಟ್ಟಿದ್ದ ಲಕ್ಷಾಂತರ ಮೌಲ್ಯದ ಹಣ ಮತ್ತು ಗಿಫ್ಟ್​​ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪೊಲೀಸರ ದಾಳಿ ವೇಳೆ 3.60 ಲಕ್ಷ ರೂ. ಮೌಲ್ಯದ 450 ಹೆಲ್ಮೆಟ್ಸ್​, 1.40 ಲಕ್ಷ ರೂ. ಬೆಲೆಯ 35 ಕ್ರೀಡಾ ಕಿಟ್​ಗಳು, 25,000 ರೂ. ಮೌಲ್ಯದ ಹೊದಿಕೆಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಸಂಪಿಗೆಹಳ್ಳಿ ಪೊಲೀಸರು ಕಾಂಗ್ರೆಸ್​ ನಾಯಕ ಸೈಯದ್​ ಸಾದಿಕ್​ ಅವರಿಗೆ ಸೇರಿದ 90,000 ರೂ. ಮೌಲ್ಯದ 150 ರೇಶನ್ ಕಿಟ್​ಗಳನ್ನು  ಜಪ್ತಿ ಮಾಡಿದ್ದಾರೆ.

ಇನ್ನು ಮೊತ್ತೊಂದು ಪ್ರಕರಣದಲ್ಲಿ ದೇವನಹಳ್ಳಿ ಪೊಲೀಸರು, ಬೆಂಗಳೂರಿನಿಂದ ಚಿಕ್ಕಬಳ್ಳಾಪುರಕ್ಕೆ ಸಾಗಿಸುತ್ತಿದ್ದ ದಾಖಲೆ ಇಲ್ಲದ 1.42 ಲಕ್ಷ ರೂ.ವನ್ನು ಕಬ್ಜ ಮಾಡಿಕೊಂಡಿದ್ದಾರೆ. ಜೊತೆಗೆ 6.45 ಲಕ್ಷ ರೂ. ಮೌಲ್ಯದ ತಂಬಾಕು ಮತ್ತು 14 ಸಾವಿರ ಮೌಲ್ಯದ 35.5 ಲೀಟರ್​ ಸಾರಾಯಿಯನ್ನು ಜಪ್ತಿ ಮಾಡಿದ್ದಾರೆ.

ಇದನ್ನೂ ಓದಿ: ಮತದಾರರಿಗೆ ಹಂಚಲು ಬ್ಯಾಗ್‌ ಸಂಗ್ರಹಿಸಿದ್ದ ಆರೋಪ: ಕೆಸಿ ನಾರಾಯಣಗೌಡ ಫೋಟೋ ಇರುವ 450 ಶಾಲಾ ಬ್ಯಾಗ್ ಜಪ್ತಿ

ಮತದಾರರಿಗೆ ಹಂಚಲು ಸಾಗಿಸುತ್ತಿದ್ದ 22 ಲಕ್ಷ ಮೌಲ್ಯದ ಸೀರೆಗಳನ್ನು ಜಪ್ತಿ

ಚಿಕ್ಕಬಳ್ಳಾಪುರ: ಮತದಾರರಿಗೆ ಹಂಚಲು ಸಾಗಿಸುತ್ತಿದ್ದ 22 ಲಕ್ಷ ಮೌಲ್ಯದ 2 ಲೋಡ್​ ಸೀರೆಗಳನ್ನು GST ಅಧಿಕಾರಿಗಳು ನಿನ್ನೆ (ಮಾ.26) ರಂದು ಜಪ್ತಿ ಮಾಡಿಕೊಂಡಿದ್ದರು. ಬೆಂಗಳೂರಿನಿಂದ ಚಿಂತಾಮಣಿಗೆ ಟೆಂಪೋದಲ್ಲಿ ಸಾಗಿಸುತ್ತಿದ್ದಾಗ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೈವಾರ ಕ್ರಾಸ್​​ ಬಳಿ ದಾಳಿ ಮಾಡಿ ಜಪ್ತಿ ಮಾಡಲಾಗಿತ್ತು. ಶಿಡ್ಲಘಟ್ಟ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಸೀಕಲ್ ರಾಮಚಂದ್ರಗೌಡ ಎಂಬುವರಿಗೆ ಸೇರಿದ್ದು ಎನ್ನಲಾಗಿತ್ತು. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 15 ಲಕ್ಷ ರೂಪಾಯಿಯನ್ನು ಪೊಲೀಸರು ಹುಬ್ಬಳ್ಳಿಯ ಕಾರವಾರ ರಸ್ತೆಯ ಚೆಕ್​​ಪೋಸ್ಟ್​​ನಲ್ಲಿ ಜಪ್ತಿ ಮಾಡಿದ್ದರು. ಅಂಕೋಲಾದಿಂದ ಹುಬ್ಬಳ್ಳಿಗೆ ಬರುತ್ತಿದ್ದ ಕಾರಿನಲ್ಲಿ 15 ಲಕ್ಷ ರೂ. ಹಣ ಪತ್ತೆ ಆಗಿತ್ತು. ಕೂಡಲೇ ಹಿರಿಯ ಅಧಿಕಾರಿಗಳ ಗಮನಕ್ಕೆ ಚೆಕ್ ಪೋಸ್ಟ್ ಸಿಬ್ಬಂದಿಗಳು ತಂದಿದ್ದರು. ಸ್ಥಳಕ್ಕೆ ತಹಶಿಲ್ದಾರ್ ಹಾಗೂ ಹಿರಿಯ ಪೊಲೀಸ್ ಅಧಿಕಾರುಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದರು. ಸದ್ಯ ಕಾರು ಚಾಲಕನನ್ನು ವಶಕ್ಕೆ ಪಡೆದು ಹಳೇ ಹುಬ್ಬಳ್ಳಿ ಪೊಲೀಸ್​ ಠಾಣೆಯಲ್ಲಿ ವಿಚಾರಣೆ ಮಾಡಿದ್ದಾರೆ.
60 ಲಕ್ಷ ರೂ. ಬೆಲೆಬಾಳುವ ಇಸ್ತ್ರಿ ಪೆಟ್ಟಿಗೆಗಳು ಸೀಜ್

ಬಾಗಲಕೋಟೆ: ಅಕ್ರಮವಾಗಿ ಇಸ್ತ್ರಿ ಪೆಟ್ಟಿಗೆಗಳನ್ನು ಸಾಗಿಸುತ್ತಿದ್ದ ಕ್ಯಾಂಟರ್ ವಾಹನದ ಮೇಲೆ ಎಸ್.ಪಿ

ಜಯಪ್ರಕಾಶ್ ನೇತೃತ್ವದಲ್ಲಿ ದಾಳಿ ಮಾಡಿ, 60 ಲಕ್ಷ ರೂ. ಬೆಲೆಬಾಳುವ ಇಸ್ತ್ರಿ ಪೆಟ್ಟಿಗೆಗಳನ್ನು ಸೀಜ್ ಮಾಡಿತ್ತು. ಜಿಲ್ಲೆಯ ಹೊರವಲಯದ ಮಹಾರುದ್ರಪ್ಪನ ಹಳ್ಳದ ಬಳಿ ದಾಳಿ ಮಾಡಲಾಗಿತ್ತು. ಇಸ್ತ್ರಿ ಪೆಟ್ಟಿಗೆ ಸಾಗಿಸುತ್ತಿದ್ದ ವಾಹನದ ಚಾಲಕನ ಬಳಿ ಸರಿಯಾದ ಬಿಲ್ ಇಲ್ಲ ಎಂಬ ಅನುಮಾನದ ಮೇಲೆ ದಾಳಿ ಮಾಡಲಾಗಿತ್ತು.
ರಾಜಕೀಯ ನಾಯಕರಿಗೆ ಸೇರಿದ ಇಸ್ತ್ರಿ ಪೆಟ್ಟಿಗೆಗಳು ಇರಬಹುದೆಂಬ ಶಂಕೆ ವ್ಯಕ್ತವಾಗಿತ್ತು. ಮತದಾರರಿಗೆ ಆಮಿಷ ಒಡ್ಡಲು ಇಸ್ತ್ರಿ ಪೆಟ್ಟಿಗಳನ್ನು ತರಿಸಲಾಗಿದೆ ಎಂಬ ಆರೋಪಿಸಲಾಗಿತ್ತು. ಇಸ್ತ್ರಿ ಪೆಟ್ಟಿಗೆ ಯಾರಿಗೆ ಸೇರಿದ್ದು, ಎಲ್ಲಿ ಸಾಗಿಸಲಾಗುತ್ತಿತ್ತು ಎಂಬ ಬಗ್ಗೆ ಪೊಲೀಸರು ವಿಚಾರಣೆ ‌ನಡೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 3:00 pm, Mon, 27 March 23