AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಚಿಹ್ನೆ, ಪ್ರಣಾಳಿಕೆ ಬಿಡುಗಡೆ ಮಾಡಿದ ಜನಾರ್ದನ ರೆಡ್ಡಿ

ಕರ್ನಾಟಕ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಮುಖ್ಯಸ್ಥ ಜನಾರ್ಧನ ರೆಡ್ಡಿ ಪಕ್ಷದ ಚಿಹ್ನೆ, ಪ್ರಣಾಳಿಕೆ ಬಿಡುಗಡೆ ಮಾಡಿದರು.

ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಚಿಹ್ನೆ, ಪ್ರಣಾಳಿಕೆ ಬಿಡುಗಡೆ ಮಾಡಿದ ಜನಾರ್ದನ ರೆಡ್ಡಿ
ಜನಾರ್ದನ ರೆಡ್ಡಿ
Follow us
ಆಯೇಷಾ ಬಾನು
|

Updated on:Mar 27, 2023 | 1:30 PM

ಬೆಂಗಳೂರು: ಮಾಜಿ ಸಚಿವ, ಕರ್ನಾಟಕ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಮುಖ್ಯಸ್ಥ ಜನಾರ್ಧನ ರೆಡ್ಡಿ(Janardhana Reddy) ಪತ್ರಿಕಾಗೋಷ್ಠಿ ನಡೆಸಿದ್ದು ಪಕ್ಷದ ಚಿಹ್ನೆ, ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಕಲ್ಯಾಣ ಪ್ರಗತಿ ಪಕ್ಷದ(Kalyana Rajya Pragati Paksha) ಚಿಹ್ನೆ ಫುಟ್ ಬಾಲ್ ಬಿಡುಗಡೆ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಅವರು, ಡಿಸೆಂಬರ್ 26 ರಿಂದಲೇ ನಾನು ಗ್ರಾಮೀಣ ಭಾಗ ಹೋಬಳಿ ಮಟ್ಟದವರೆಗೂ ನಮ್ಮ ವಿಚಾರವನ್ನ ಮುಂದಿಟ್ಟಿದ್ದೇನೆ. ನಾನು ಊಹಿಸಿಕೊಂಡಿದ್ದಕ್ಕಿಂತ ಹೆಚ್ಚಿನ ಬೆಂಬಲ ಸಿಕ್ಕಿದೆ. ನನ್ನ ನಿರೀಕ್ಷೆ ಮೀರಿ ಜನರ ವಿಶ್ವಾಸಗಳಿಸಿಕೊಂಡಿದ್ದೇನೆ. 90 ದಿನಗಳಲ್ಲಿ 12 ಮಂದಿ ಅಭ್ಯರ್ಥಿ ಘೋಷಣೆ ಮಾಡಿದ್ದೇನೆ. ಇನ್ನು 19 ಅಭ್ಯರ್ಥಿಯನ್ನ ಇನ್ನೊಂದು ವಾರದಲ್ಲಿ ಘೋಷಣೆ ಮಾಡ್ತೀನಿ ಎಂದರು.

ಇನ್ನೂ 20 ಕ್ಷೇತ್ರಗಳಲ್ಲಿ ಅಭ್ಯರ್ಥಿ ಹಾಕಿಲಿದ್ದೇವೆ. 51 ಕ್ಷೇತ್ರಗಳಲ್ಲಿ ಜೋರಾಗಿ ಪಕ್ಷದ ಕಾರ್ಯಾಚರಣೆ ನಡಿತಾ ಇದೆ. 30 ಕ್ಷೇತ್ರ ಗೆಲ್ಲುವ ವಿಶ್ವಾಸ ಇದೆ. ಗ್ರಾಮಗಳಲ್ಲಿ ಸಮಸ್ಯೆ ಕಣ್ಣಾರೆ ಕಂಡಿರುವವನು ನಾನು. ನಮ್ಮ ಭಾಗದಪ್ರತಿ ಜಿಲ್ಲೆಯಲ್ಲಿ ನಾನು ಓಡಾಡಿದ್ದೇನೆ. ಹದಿನೈದು ವರ್ಷಗಳ ಹಿಂದೆ ನಾನು ಆ ಭಾಗದಲ್ಲಿ ಓಡಾಡಿದ್ದೇನೆ. ಇತ್ತೀಚೆಗೆ ಈ ಭಾಗಗಳಲ್ಲಿ ಅಭಿವೃದ್ಧಿ ಆಗಿಲ್ಲ ಎಂದರು.

ಇದನ್ನೂ ಓದಿ: ಜನಾರ್ಧನ ರೆಡ್ಡಿ ವಿರುದ್ದ ತೊಡೆತಟ್ಟಿದ ಕೇಸರಿ ಕಲಿಗಳು; ಗದ್ದುಗೆ ಹಿಡಿಯಲು ಸಾಲು ಸಾಲು ಕಾರ್ಯಕ್ರಮ ಆಯೋಜನೆ

ರಾಜಕೀಯದಲ್ಲಿ ನನ್ನವರು ಶತ್ರುಗಳು ಎಲ್ಲರು ಸೇರಿ ನನ್ನನ್ನ ಫುಟ್ ಬಾಲ್ ತರ ಆಡಿದ್ರು. ಈಗ ನಾನು ಎಲ್ಲರನ್ನು ಸೇರಿಸಿ ಫುಟ್ ಬಾಲ್ ಆಡಬಹುದು ಎಂದು ನಾನು ಫುಟ್ ಬಾಲ್ ಚಿಹ್ನೆಯನ್ನ ಆಯ್ಕೆ ಮಾಡಿಕೊಂಡಿದ್ದೇನೆ. ಬಿಜೆಪಿ ಜೊತೆ ಮಾತುಕತೆ ವಿಚಾರಕ್ಕೆ ಸಂಬಂಧಿಸಿ ಯಾರಿಗೆ ಯಾವ ರೀತಿ ಕನಸು ಬೀಳುತ್ತದೆಯೋ ಗೊತ್ತಿಲ್ಲ. ನಾನು ಯಾರ ಜೊತೆಗೆ ಮಾತನಾಡಿಲ್ಲ. ಆ ಸಮಯ ಈಗ ಮೀರಿ ಹೋಗಿದೆ. ಹಿರಿಯರಿಗೆಲ್ಲ ಅಂದೇ ಮಾತನಾಡಿ ಎಲ್ಲಾ ಆಗಿದೆ. ಯಾವುದೇ ರೀತಿಯ ಮಾತುಕತೆ ಈಗ ನಡೆದಿಲ್ಲ. ಯಾವ ಬಿಜೆಪಿ ನಾಯಕರ ಜೊತೆಯೂ ಸಂಪರ್ಕ ಇಲ್ಲ ಎಂದರು.

ಇನ್ನು ಇದೇ ವೇಳೆ ಜನಾರ್ಧನ ರೆಡ್ಡಿ ತಮ್ಮ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದರು.

ಪ್ರಣಾಳಿಕೆಯಲ್ಲಿ ನೀಡಲಾದ ಭರವಸೆ ಹೀಗಿದೆ

  • ಪ್ರತಿ ಮನೆಗೆ 250 ಯೂನಿಟ್ ವಿದ್ಯುತ್ ಉಚಿತ
  • ಎಸ್‌ಟಿ, ಎಸ್‌ಸಿ ಉಚಿತ ನಿವೇಶನ
  • 5 ಎಕರೆಗಿಂತ ಕಡಿಮೆ ಇದ್ರೆ ರೈತರಿಗೆ ಬಂಡವಾಳದ 15 ಸಾವಿರ ರೂ ನರೆವು
  • ರೈತರಿಗೆ ಬಡ್ಡಿ ರಹಿತ ಸಾಲ ನೀಡುವುದು
  • ಹೆಣ್ಣು ಮಕ್ಕಳ ಹೆಸರಿನಲ್ಲಿ ಮನೆ ಇಲ್ಲದೆ ಇರುವವರಿಗೆ 2 ಬಿಹೆಚ್‌ಕೆ ಮನೆ
  • ಎಲ್ಲಾ ಕ್ಷೇತ್ರದಲ್ಲಿ ಮಹಿಳೆಯರಿಗೆ ಸಮಾನ ವೇತನ
  • ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ
  • ಮಹಿಳೆಯರ ಭದ್ರತೆಗಾಗಿ ಹೊಸ ಮಹಿಳೆಯರ ತಂಡ ಸ್ಥಾಪನೆ
  • ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ 1000 ವೇತನ ಹೆಚ್ಚಳ
  • ಆರ್ಥಿಕ ದೌರ್ಬಲ್ಯ ಮಕ್ಕಳಿಗೆ ಉಚಿತ ಶಿಕ್ಷಣ

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:10 pm, Mon, 27 March 23

ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ಅಧಿಕಾರದಿಂದ ಕೆಳಗಿಳಿಯುವ ಫ್ರಸ್ಟ್ರೇಶನ್ ಸಿಎಂರನ್ನು ಕಾಡುತ್ತಿದೆ: ಅಶೋಕ
ಅಧಿಕಾರದಿಂದ ಕೆಳಗಿಳಿಯುವ ಫ್ರಸ್ಟ್ರೇಶನ್ ಸಿಎಂರನ್ನು ಕಾಡುತ್ತಿದೆ: ಅಶೋಕ
ಧಗಧಗನೆ ಹೊತ್ತಿ ಉರಿದ ಚೀನಾದ ರೆಸ್ಟೋರೆಂಟ್; 22 ಜನ ಸಾವು
ಧಗಧಗನೆ ಹೊತ್ತಿ ಉರಿದ ಚೀನಾದ ರೆಸ್ಟೋರೆಂಟ್; 22 ಜನ ಸಾವು
ಉಗ್ರರ ದಾಳಿ: ಮಂಜುನಾಥ್​ ಕುಟುಂಬಕ್ಕೆ ಸಾಂತ್ವಾನ ಹೇಳಿದ 103 ವರ್ಷದ ಅಜ್ಜಿ
ಉಗ್ರರ ದಾಳಿ: ಮಂಜುನಾಥ್​ ಕುಟುಂಬಕ್ಕೆ ಸಾಂತ್ವಾನ ಹೇಳಿದ 103 ವರ್ಷದ ಅಜ್ಜಿ
ದರಿದ್ರ ದೇಶವಾದ ಪಾಕಿಸ್ತಾನದ ವಿರುದ್ಧ ಯುದ್ಧವಾಗಲೇಬೇಕು; ಎಂ.ಬಿ ಪಾಟೀಲ್
ದರಿದ್ರ ದೇಶವಾದ ಪಾಕಿಸ್ತಾನದ ವಿರುದ್ಧ ಯುದ್ಧವಾಗಲೇಬೇಕು; ಎಂ.ಬಿ ಪಾಟೀಲ್
ಹೇಳಿಕೆ ಮೂಲಕ ಮುತ್ಸದ್ದಿತನದ ಪರಿಚಯ ನೀಡಿದ ಮಾಜಿ ಪ್ರಧಾನಿ ದೇವೇಗೌಡ
ಹೇಳಿಕೆ ಮೂಲಕ ಮುತ್ಸದ್ದಿತನದ ಪರಿಚಯ ನೀಡಿದ ಮಾಜಿ ಪ್ರಧಾನಿ ದೇವೇಗೌಡ
ಅಮೆರಿಕದಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಹೆಸರಲ್ಲಿ ಅಣ್ಣಾಮಲೈ ಪೂಜೆ
ಅಮೆರಿಕದಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಹೆಸರಲ್ಲಿ ಅಣ್ಣಾಮಲೈ ಪೂಜೆ
ತಾಯಿಯ ತ್ಯಾಗ... ತಂದೆಯ ಪರಿಶ್ರಮ: ನನ್ನೆಲ್ಲಾ ಸಾಧನೆಗೆ ಹೆತ್ತವರೇ ಕಾರಣ..!
ತಾಯಿಯ ತ್ಯಾಗ... ತಂದೆಯ ಪರಿಶ್ರಮ: ನನ್ನೆಲ್ಲಾ ಸಾಧನೆಗೆ ಹೆತ್ತವರೇ ಕಾರಣ..!
ಯುದ್ಧ ಬೇಡವೆಂಬ ತಮ್ಮ ಮಾತನ್ನು ಮಾಡಿಫೈ ಮಾಡಿ ಹೇಳಿದ ತಿಮ್ಮಾಪುರ
ಯುದ್ಧ ಬೇಡವೆಂಬ ತಮ್ಮ ಮಾತನ್ನು ಮಾಡಿಫೈ ಮಾಡಿ ಹೇಳಿದ ತಿಮ್ಮಾಪುರ