ದೆಹಲಿ ನವೆಂಬರ್ 15: ಈ ಬಾರಿ ಛತ್ತೀಸ್‌ಗಢದ (Chhattisgarh) ಚುನಾವಣಾ ಪ್ರಚಾರದ ವೇಳೆ ನನ್ನ ಅನುಭವಗಳು ಅದ್ಭುತ ಮತ್ತು ಅಭೂತಪೂರ್ವವಾಗಿವೆ. ಛತ್ತೀಸ್‌ಗಢಿಯಾ..ಸಬ್ ಸೇ ಬಡಿಯಾ (ಛತ್ತೀಸಗಢ ಎಲ್ಲಕ್ಕಿಂತ ಉತ್ತಮ) ಎಂದು ಹೇಳಲಾಗುತ್ತದೆ. ಸುತ್ತಲೂ ಅದರ ಪ್ರತಿಧ್ವನಿಯನ್ನು ನಾನು ಅನುಭವಿಸಿದೆ. ಛತ್ತೀಸ್‌ಗಢದ ಕಷ್ಟಪಟ್ಟು ದುಡಿಯುವ ಜನರು ತಮ್ಮ ರಾಜ್ಯವನ್ನು ಉತ್ತಮ ಮತ್ತು ಅತ್ಯುತ್ತಮವಾಗಿಸಲು ಹೊಸ ಭರವಸೆಗಳು ಮತ್ತು ಹೊಸ ಶಕ್ತಿಯಿಂದ ತುಂಬಿದ್ದಾರೆ. ಛತ್ತೀಸ್‌ಗಢವನ್ನು ದುರಾಡಳಿತ ಮತ್ತು ಭ್ರಷ್ಟಾಚಾರದ ಕಪಿಮುಷ್ಠಿಯಿಂದ ಯಾರಾದರೂ ಮುಕ್ತಗೊಳಿಸಲು ಸಾಧ್ಯವಾದರೆ ಅದು ಬಿಜೆಪಿಯಿಂದ (BJP) ಮಾತ್ರ ಎಂಬುದು ಅವರಿಗೆ ತಿಳಿದಿದೆ. ಬಿಜೆಪಿ ಮಾಡಿದೆ, ಬಿಜೆಪಿ ಮಾತ್ರ ಸುಧಾರಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇನ್ನು ಕೆಲವೇ ವರ್ಷಗಳಲ್ಲಿ ಛತ್ತೀಸ್‌ಗಢ ತನ್ನ 25 ವರ್ಷಗಳನ್ನು ಪೂರೈಸುತ್ತಿದೆ. ಇಂದು ಪ್ರಥಮ ಬಾರಿಗೆ ಮತದಾನ ಮಾಡಲಿರುವ ರಾಜ್ಯದ ಯುವಜನತೆ ಛತ್ತೀಸ್‌ಗಢದ ಸಮೃದ್ಧ ಕನಸುಗಳೊಂದಿಗೆ ಮುನ್ನಡೆಯುತ್ತಿದ್ದಾರೆ. ಮುಂದಿನ 25 ವರ್ಷಗಳಲ್ಲಿ ಅಭಿವೃದ್ಧಿ ಹೊಂದಿದ ಭಾರತ ಎಂಬ ಪ್ರತಿಜ್ಞೆಯೊಂದಿಗೆ ಅವರು ಅಭಿವೃದ್ಧಿ ಹೊಂದಿದ ಛತ್ತೀಸ್‌ಗಢದ ಪ್ರತಿಜ್ಞೆಯನ್ನು ಸಹ ತೆಗೆದುಕೊಂಡಿದ್ದಾರೆ. ಅವರು ತಮ್ಮ ಜೀವನದ ಮುಂದಿನ 25 ವರ್ಷಗಳನ್ನು ಅಭಿವೃದ್ಧಿ ಹೊಂದಿದ ಛತ್ತೀಸ್‌ಗಢ-ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪಕ್ಕಾಗಿ ಮೀಸಲಿಡುವ ಗುರಿಯನ್ನು ಹೊಂದಿದ್ದಾರೆ.
छत्तीसगढ़ में इस बार चुनाव अभियान के दौरान मेरे अनुभव बहुत ही अद्भुत रहे, अभूतपूर्व रहे। कहा जाता है- छत्तीसगढ़िया…सबसे बढ़िया। मैंने इसकी प्रतिध्वनि चारों तरफ महसूस की। छत्तीसगढ़ के परिश्रमी लोग अपने राज्य को और बेहतर बनाने के लिए, सर्वश्रेष्ठ बनाने के लिए नई उम्मीदों और नई…
— Narendra Modi (@narendramodi) November 15, 2023
ರಾಜ್ಯದ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ವರ್ಗಗಳ ಯುವಕರು ನಮ್ಮ ಅಭಿವೃದ್ಧಿ ಮಾದರಿಯೊಂದಿಗೆ ಸಂಪರ್ಕ ಸಾಧಿಸುತ್ತಿರುವ ರೀತಿ ತುಂಬಾ ಉತ್ತೇಜನಕಾರಿಯಾಗಿದೆ. ಛತ್ತೀಸ್‌ಗಢದ ಯುವಕರ ಈ ಶಕ್ತಿ ಬದಲಾವಣೆಯ ಹೊಸ ಅಧ್ಯಾಯವನ್ನೇ ಬರೆಯಲಿದೆ.
ಇದನ್ನೂ ಓದಿ: ಅಭಿವೃದ್ಧಿ ಹೊಂದಿದ ಮಧ್ಯಪ್ರದೇಶಕ್ಕಾಗಿ ಬಿಜೆಪಿ ಆಯ್ಕೆ ಮಾಡಿ: ಮತದಾರರಲ್ಲಿ ಮೋದಿ ಮನವಿ
ಛತ್ತೀಸ್‌ಗಢದ ಮಹತಾರಿ, ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳು ಕೂಡ ರಾಜ್ಯದ ಅಭಿವೃದ್ಧಿಯ ಪತಾಕೆಯನ್ನು ಹಾರಿಸಿದ್ದಾರೆ. ಇಂದು, ಭಾರತವು ಮಹಿಳಾ ಸಬಲೀಕರಣಕ್ಕಾಗಿ ಪ್ರಯತ್ನಿಸುತ್ತಿರುವ ರೀತಿಯಲ್ಲಿ, ಛತ್ತೀಸ್‌ಗಢದಲ್ಲೂ ಅದರ ಪರಿಣಾಮವನ್ನು ನಾವು ನೋಡಬಹುದು.
ಈ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಖಚಿತ. ಜನರು ಬಿಜೆಪಿಯ ಉತ್ತಮ ಆಡಳಿತವನ್ನು ನಂಬುತ್ತಿದ್ದಾರೆಯೇ ಹೊರತು ಕಾಂಗ್ರೆಸ್‌ನ ಪೊಳ್ಳು ಭರವಸೆಗಳನ್ನಲ್ಲ. ಬಿಜೆಪಿ ತನ್ನ ಪ್ರತಿಯೊಂದು ನಿರ್ಣಯವನ್ನು ಈಡೇರಿಸಲು ಬದ್ಧವಾಗಿದೆ.
ರಾಜ್ಯದಲ್ಲಿ ಬರಲಿರುವ ಬಿಜೆಪಿ ಸರ್ಕಾರವು ನಿಮ್ಮ ಆಕಾಂಕ್ಷೆಗಳು ಮತ್ತು ರಾಜ್ಯದ ಏಳಿಗೆಯ ಸರ್ಕಾರದ ಎಂದು ಛತ್ತೀಸ್‌ಗಢದ ಜನತೆಗೆ ಭರವಸೆ ನೀಡುತ್ತೇನೆ ಎಂದು ಮೋದಿ ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:21 pm, Wed, 15 November 23