ಕಾರವಾರ: ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ನೇತೃತ್ವದಲ್ಲೇ ಚುನಾವಣೆಗೆ ಹೋಗುತ್ತೇವೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಸಭೆಗಳಲ್ಲಿ ಸ್ಪಷ್ಟಪಡಿಸಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಗೊಂದಲ ಹುಟ್ಟು ಹಾಕುವ ಷಡ್ಯಂತ್ರವನ್ನು ಕೆಲವು ರಾಜಕೀಯ ಪಕ್ಷದ ನಾಯಕರು ಮಾಡ್ತಿದ್ದಾರೆ. ನಮ್ಮಲ್ಲಿ ಯಾವುದೇ ಗೊಂದಲವಿಲ್ಲ, ಸಿಎಂ ನೇತೃತ್ವದಲ್ಲೇ ಚುನಾವಣೆಗೆ ಹೋಗುತ್ತಿದ್ದೇವೆ. ಕಾಂಗ್ರೆಸ್ಸಿಗರು DNA ಮೂಲಕ ನಾಯಕತ್ವ ಬರುತ್ತೆ ಎಂದುಕೊಂಡಿದ್ದಾರೆ ಎಂದು ಸಿ.ಟಿ.ರವಿ ವಾಗ್ದಾಳಿ ಮಾಡಿದರು.
ಕಾಂಗ್ರೆಸ್ಸಿಗರು ನೆಹರೂ ಹಾಗೂ ಇಂದಿರಾ ಗಾಂಧಿಯನ್ನು ತಮ್ಮ ಲೀಡರ್ ಅಂದ್ರು, ಬಳಿಕ ರಾಜೀವ ಗಾಂಧಿಯನ್ನೂ ಕರ್ಕೊಂಡು ಬಂದ್ರು. ಪ್ರಿಯಾಂಕಾ ಗಾಂಧಿಗೆ, ಇಂದಿರಾ ತರಹನೇ ಕೆನ್ನೆಯಲ್ಲಿ ಗುಳಿ ಬೀಳುವುದರಿಂದ ಲೀಡರ್ ಆಗೋಕೆ ಸೂಕ್ತ ಅಂತಾರೆ. ಜನರ ನಡುವಿನಿಂದ ಲೀಡರ್ ಶಿಪ್‌ನಿಂದ ಬರೋದು, ಕೌಟುಂಬಿಕ ವಾರಿಸ್ಥಾರಿಕೆಯಿಂದಲ್ಲ. ಸುರ್ಜೇವಾಲರದ್ದು ಮಾನಸಿಕ ಗುಲಾಮಗಿರಿಯಾಗಿದ್ದು, ಇದರಿಂದ ಅವರು ಲೀಡರ್‌ಶಿಪ್ ಅಂತಿದ್ದಾರೆ. ಅವರು ಅಪ್ಪನಿಂದ ಮಗನಿಗೆ, ಮಗಳಿಗೆ ಬರೋದು ಅಂದ್ಕೊಂಡಿದ್ದು, ಅದು ಹಾಗಲ್ಲ. ಜನರ ನಡುವಿನಿಂದ ಬರುವಂತಹ ನಾಯಕತ್ವ ಬಿಜೆಪಿಯಲ್ಲಿ ಊರೂರಿನಲ್ಲೂ ಇದೆ ಎಂದು ಹೇಳಿದರು.
ಇದನ್ನೂ ಓದಿ: ರಮೇಶ್ ಜಾರಕಿಹೊಳಿ ‘ಆಪರೇಷನ್ ಕಮಲ’ ಹೇಳಿಕೆ ಸಮರ್ಥಿಸಿಕೊಂಡ ಸಿ.ಟಿ.ರವಿ; ಹೇಳಿದ್ದೇನು ನೋಡಿ
ಲವ್ ಜಿಹಾದ್‌ಗೆ ನಿಖರ ವ್ಯಾಖ್ಯಾನ ಇಲ್ಲ ಎಂಬ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ್ದು, ಆರಗ ಜ್ಞಾನೇಂದ್ರ ಯಾವ ಹಿನ್ನೆಲೆಯಲ್ಲಿ ಹೇಳಿದ್ದಾರೆಂದು ಗೊತ್ತಿಲ್ಲ. ಹಿಂದೂ ಹೆಣ್ಣುಮಕ್ಕಳ ಭವಿಷ್ಯ ಹಾಳುಮಾಡುವ ದುರುದ್ದೇಶದಿಂದ ತಮ್ಮ ಸಂಖ್ಯಾಬಲ ಹೆಚ್ಚಿಸಿಕೊಳ್ಳಲು ಮಾಡಿರುವುದೇ ಲವ್ ಜಿಹಾದ್. ತಮ್ಮ ನಂಬಿಕೆ ಒಪ್ಪುದಿರುವವರ ಮೇಲೆ ಯುದ್ಧ ಮಾಡುವುದು ಜಿಹಾದ್. ಮುಸ್ಲಿಮರು ಹಲವು ರೀತಿಯಲ್ಲಿ ಜಿಹಾದ್ ಮಾಡುತ್ತಾರೆ ಎಂದರು.
ಹಿಂದೂ ಹೆಸರು ಇಟ್ಟುಕೊಂಡು, ಹಿಂದೂ ಯುವತಿಯರು ನಂಬಿಸಿ ಪ್ರೀತಿಸುವ ನಾಟಕವಾಡಿ ಮತಾಂತರ ಮಾಡುವುದೇ ಲವ್ ಜಿಹಾದ್. ಲವ್ ಜಿಹಾದ್‌ಗೆ ನಮ್ಮ ಸಮಾಜದಲ್ಲಿ ಅವಕಾಶ ಇಲ್ಲ. ಮುಸ್ಲಿಂ ಹೆಣ್ಣುಮಕ್ಕಳ ಕಣ್ಣುಗಳು ಸಹ ಹೊರಗೆ ಕಾಣಬಾರದು. ಉಳಿದವರ ಹೆಣ್ಣುಮಕ್ಕಳ ಮೇಲೆ ಕಣ್ಣು ಹಾಕುವುದೇ ಲವ್ ಜಿಹಾದ್ ಎಂದು ಸಿ.ಟಿ.ರವಿ ಕಿಡಿಕಾರಿದರು.
ಇದನ್ನೂ ಓದಿ: ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಪಕ್ಷ ಸೇರ್ಪಡೆಯಾದ ಆರ್.ವಿ.ದೇಶಪಾಂಡೆ ಆಪ್ತ S.L.ಘೋಟ್ನೇಕರ್
ಇನ್ನು ಚಿಕ್ಕಮಗಳೂರು ಬಿಜೆಪಿ ಮುಖಂಡ ತಮ್ಮಯ್ಯ ‘ಕೈ’ ಸೇರ್ಪಡೆ ವಿಚಾರವಾಗಿ ಮಾತನಾಡಿ, ಹೀಗೆ ಬಿಜೆಪಿ ಮುಗಿಸಬೇಕು ಎಂಬುವುದು ಇದೇ ಮೊದಲ ಪ್ರಯತ್ನವಲ್ಲ. ಎಲ್ಲಾ ಸಂದರ್ಭದಲ್ಲಿ ಎಲ್ಲಾ ಸಮುದಾಯ ಬಿಜೆಪಿ ಬೆಂಬಲಕ್ಕೆ ನಿಂತಿದ್ದಾರೆ. ಕಳೆದ ಬಾರಿ 26,314 ಮತಗಳ ಅಂತರದಲ್ಲಿ ಗೆಲ್ಲಿಸಿದ್ದಾರೆ. ಈ ಬಾರಿ 1 ಲಕ್ಷ ಅಂತರದಿಂದ ಗೆಲ್ಲಿಸಲು ಕಾರ್ಯಕರ್ತರ ಸಂಕಲ್ಪ ಮಾಡಲಾಗಿದೆ.
ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಇರುವವರು ಬಿಜೆಪಿಯಲ್ಲಿ ಇರ್ತಾರೆ. ವೈಯಕ್ತಿಕ ಲಾಭ ನಷ್ಟ ಲೆಕ್ಕಾಚಾರ ಹಾಕುವವರು ಬಿಟ್ಟು ಹೋಗುತ್ತಾರೆ. ಹೆಚ್.ಡಿ.ತಮ್ಮಯ್ಯ ಬಗ್ಗೆ ಏನೂ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ. ಲಿಂಗಾಯತರು ಸೇರಿ ಎಲ್ಲಾ ಸಮುದಾಯಗಳು ಬಿಜೆಪಿ ಬೆಂಬಲಿಸುತ್ತವೆ. ಯಾವುದೇ ಸಂದರ್ಭದಲ್ಲಿ ಕೈ ಬಿಟ್ಟಿಲ್ಲ, ಮುಂದೆಯೂ ಕೈ ಬಿಡುವುದಿಲ್ಲ ಎಂದು ಹರಿಹಾಯ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:01 pm, Sun, 19 February 23