ರಮೇಶ್ ಜಾರಕಿಹೊಳಿ ‘ಆಪರೇಷನ್ ಕಮಲ’ ಹೇಳಿಕೆ ಸಮರ್ಥಿಸಿಕೊಂಡ ಸಿ.ಟಿ.ರವಿ; ಹೇಳಿದ್ದೇನು ನೋಡಿ

ಹಂಡ್ರೆಡ್ ಪರ್ಸಂಟ್ ಆಪರೇಷನ್ ಕಮಲ ಆಗುತ್ತದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ನಾನು ಬಿಡುವುದಿಲ್ಲ ಎಂದು ರಮೇಶ್ ಜಾರಕಿಹೊಳಿ ಹೇಳಿಕೆ ನೀಡಿದ್ದರು. ಇದೀಗ, ಇವರ ಹೇಳಿಕೆಯನ್ನು ಸಮರ್ಥಿಸಿಕೊಂಡ ಸಿ.ಟಿ.ರವಿ, ಕಾಂಗ್ರೆಸ್‌ನಲ್ಲಿ ಇದ್ದರು ಕೂಡ ಕರೆದಾಗ ಬರುವುದಾಗಿ ಹೇಳಿರಬಹುದು ಎಂದಿದ್ದಾರೆ.

ರಮೇಶ್ ಜಾರಕಿಹೊಳಿ 'ಆಪರೇಷನ್ ಕಮಲ' ಹೇಳಿಕೆ ಸಮರ್ಥಿಸಿಕೊಂಡ ಸಿ.ಟಿ.ರವಿ; ಹೇಳಿದ್ದೇನು ನೋಡಿ
ಸಿ.ಟಿ.ರವಿ ಮತ್ತು ರಮೇಶ್ ಜಾರಕಿಹೊಳಿ
Follow us
TV9 Web
| Updated By: Rakesh Nayak Manchi

Updated on:Feb 19, 2023 | 3:18 PM

ಕಾರವಾರ: ಕಳೆದ ಚುನಾವಣೆಯಲ್ಲಿ ಭಾರೀ ಸುದ್ದು ಮಾಡಿದ್ದ ಆಪರೇಷನ್ ಕಮಲ (Operation Kamala) 2023ರ ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election 2023) ಸಮೀಪಿಸುತ್ತಿದ್ದಂತೆ ಮತ್ತೆ ಸುದ್ದು ಮಾಡಲು ಆರಂಭಿಸಿದೆ. ಈಗಾಗಲೇ ಸಿಡಿ ಪ್ರಕರಣದಲ್ಲಿ ತನ್ನ ವಿರುದ್ಧ ಷಡ್ಯಂತರ ನಡೆದಿದೆ ಎಂದು ಕಾಂಗ್ರೆಸ್ ವಿರುದ್ಧ ತೊಡೆ ತಟ್ಟಿ ನಿಂತಿರುವ ಮಾಜಿ ಸಚಿವರೂ ಆಗಿರುವ ಶಾಸಕ ರಮೇಶ್ ಜಾರಕಿಹೊಳಿ (Ramesh Jarakiholi) ನೂರಕ್ಕೆ ನೂರಷ್ಟು ಆಪರೇಷನ್ ಕಮಲ ನಡೆಯುತ್ತದೆ ಎಂದಿದ್ದರು. ಈ ಹೇಳಿಕೆಗೆ ಇದೀಗ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (C.T. Ravi) ಸಮರ್ಥನೆ ಮಾಡಿಕೊಂಡಿದ್ದು, ಕಾಂಗ್ರೆಸ್‌ನಲ್ಲಿ ಇದ್ದರು ಕೂಡ ಕರೆದಾಗ ಬರುವುದಾಗಿ ಹೇಳಿರಬಹುದು ಎಂದು ಹೇಳಿದ್ದಾರೆ.

ಕಾರವಾರದಲ್ಲಿ ಮಾತನಾಡಿದ ಅವರು, ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ಗೋವಾದಲ್ಲಿ ಕಾಂಗ್ರೆಸ್​ ಪಕ್ಷದಿಂದ 12 ಶಾಸಕರು ಗೆದ್ದಿದ್ದರು. ಭಾರತೀಯ ಜನತಾ ಪಕ್ಷದಿಂದ 20 ಶಾಸಕರು ಆಯ್ಕೆ ಆಗಿದ್ದರು. ಪಕ್ಷೇತರರ ಬೆಂಬಲ ಪಡೆದು ಗೋವಾದಲ್ಲಿ ನಾವು ಸರ್ಕಾರ ರಚಿಸಿದ್ದೆವು. ನಮ್ಮ ಪಕ್ಷ ಬಹುಮತದಲ್ಲಿ ಇತ್ತು, ಆದರೂ ಕಾಂಗ್ರೆಸ್​ನವರು ಬಂದರು. ಕಾಂಗ್ರೆಸ್‌ ಪಕ್ಷ ತೊರೆದು 8 ಶಾಸಕರು ಬಿಜೆಪಿ ಸೇರ್ಪಡೆಯಾದರು. ಎಂಟು ಶಾಸಕರು ಬಿಜೆಪಿ ಸೇರ್ಪಡೆಯಾಗಿರುವುದು ಅಪರಾಧ ಆಗುತ್ತಾ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: “ರಿಕ್ಷಾ ರಿಪೇರಿ ಮಾಡುವ ಇಂಜಿನಿಯರ್ ಅವನು, ಫೇಲ್ ಆಗಿ ಮತ್ ಪಾಸ್ ಆಗಿದ್ದಾನೆ” – ರಮೇಶ್ ಜಾರಕಿಹೊಳಿ

ರಮೇಶ್ ಜಾರಕಿಹೊಳಿ ಸಂಪರ್ಕದಲ್ಲಿ ಇರುವವರು ನಮ್ಮ ಪಕ್ಷಕ್ಕೆ ಬರುವ ಬಗ್ಗೆ ಹೇಳಿರಬಹುದು. ಏನು ಚಿಂತೆ ಮಾಡಬೇಡ ಅಣ್ಣಾ, ನೀವು ಯಾವಾಗ ಕರೆಯುತ್ತೀರೋ ಆಗ ಬರುತ್ತೇನೆ ಅಂತಾ ಹೇಳಿರಬಹುದು. ಕಾಂಗ್ರೆಸ್‌ನಲ್ಲಿ ಇದ್ದರು ಕೂಡ ಕರೆದಾಗ ಬರುವುದಾಗಿ ಹೇಳಿರಬಹುದು, ಅದರಲ್ಲಿ ಏನಿದೆ ಎಂದು ಸಿ.ಟಿ.ರವಿ ಹೇಳಿದ್ದಾರೆ.

ಎಲ್ಲಾ ಸಂದರ್ಭದಲ್ಲಿ ಎಲ್ಲಾ ದಮುದಾಯದ ಜನ ಬಿಜೆಪಿ ಬೆಂಬಲಕ್ಕೆ ನಿಂತಿದ್ದಾರೆ. ಕಳೆದ ಬಾರಿ 26,314 ಲೀಡ್​ನಲ್ಲಿ ಗೆಲ್ಲಿಸಿದ್ದಾರೆ. ಈಸಲ ನಮ್ಮ ಕಾರ್ಯಕರ್ತರು ಸಂಕಲ್ಪ ಮಾಡಿದ್ದಾರೆ ಒಂದು ಲಕ್ಷ ವೋಟ್ ಕ್ರಾಸ್ ಮಾಡ್ತೀವಿ ಎಂದಿದ್ದಾರೆ. ಸೈದಾಂತಿಕ ನೆಲಗಟ್ಟಿನಲ್ಲಿ ಇರುವವರು ಬಿಜೆಪಿಯಲ್ಲಿ ಇರುತ್ತಾರೆ. ವೈಯಕ್ತಿಕ ಲಾಭ ನಷ್ಟ ಲೆಕ್ಕಾಚಾರ ಹಾಕುವವರು ಹೋಗುವವರು ಹೋಗುತ್ತಾರೆ. ನಾನು ಅವರ ಬಗ್ಗೆ ಏನೂ ಕಾಮೆಂಟ್ ಮಾಡಲು ಬಯಸುವುದಿಲ್ಲ. ಲಿಂಗಾಯಿತರು ಸೇರಿದಂತೆ ಎಲ್ಲಾ ಸಮುದಾಯಗಳು ಅತೀ ಹೆಚ್ಚು ಬೆಂಬಲಿಸುವ ಪಾರ್ಟಿ ಬಿಜೆಪಿ. ಅವರು ಯಾವುದೇ ಸಂದರ್ಭದಲ್ಲಿ ಕೈ ಬಿಟ್ಟಿಲ್ಲ, ಮುಂದೆಯೂ ನಮ್ಮನ್ನು ಯಾರೂ ಬಿಟ್ಟುಕೊಡುವುದಿಲ್ಲ ಎಂದರು.

ಲವ್ ಜಿಹಾದ್ ವ್ಯಾಖ್ಯಾನ ನೀಡಿದ ಸಿಟಿ ರವಿ

ಲವ್ ಜಿಹಾದ್‌ಗೆ ನಿಖರ ವ್ಯಾಖ್ಯಾನ ಇಲ್ಲ ಎಂಬ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿಟಿ ರವಿ, ಆರಗ ಜ್ಞಾನೇಂದ್ರ ಯಾವ ಹಿನ್ನಲೆಯಲ್ಲಿ ಹೇಳಿದ್ದಾರೆಂದು ಗೊತ್ತಿಲ್ಲ. ಹಿಂದೂ ಹೆಣ್ಣುಮಕ್ಕಳ ಭವಿಷ್ಯ ಹಾಳುಮಾಡುವ ದುರುದ್ದೇಶದಿಂದ ತಮ್ಮ ಸಂಖ್ಯಾಬಲ ಹೆಚ್ಚಿಸಿಕೊಳ್ಳಲು ಮಾಡಿರುವುದೇ ಲವ್ ಜಿಹಾದ್. ತಮ್ಮ ನಂಬಿಕೆ ಒಪ್ಪದಿರುವವರ ಮೇಲೆ ಯುದ್ಧ ಮಾಡುವುದು ಜಿಹಾದ್, ಮುಸ್ಲಿಮರು ಹಲವು ರೀತಿಯಲ್ಲಿ ಜಿಹಾದ್ ಮಾಡುತ್ತಾರೆ‌‌. ಹಿಂದೂ ಹೆಸರು ಇಟ್ಟುಕೊಂಡು, ಹಿಂದೂ ಯುವತಿಯರು ನಂಬಿಸಿ ಪ್ರೀತಿಸುವ ನಾಟಕವಾಡಿ ಮತಾಂತರ ಮಾಡುವುದೇ ಲವ್ ಜಿಹಾದ್, ಲವ್ ಜಿಹಾದ್‌ಗೆ ನಮ್ಮ ಸಮಾಜದಲ್ಲಿ ಅವಕಾಶ ಇಲ್ಲ. ಮುಸ್ಲಿಂ ಹೆಣ್ಣುಮಕ್ಕಳ ಕಣ್ಣುಗಳು ಕಾಣದಂತೆ ಮಾಡಿ ಉಳಿದವರ ಹೆಣ್ಣುಮಕ್ಕಳ ಮೇಲೆ ಕಣ್ಣು ಹಾಕುವುದೇ ಲವ್ ಜಿಹಾದ್ ಎಂದರು.

ಮುಖ್ಯಮಂತ್ರಿ ಬೊಮ್ಮಾಯಿ ನೇತೃತ್ವದಲ್ಲೇ ಚುನಾವಣೆ

ಈ ಬಾರಿಯ ಚುನಾವಣೆಯನ್ನು ಮುಖ್ಯಮಂತ್ರಿ ಬೊಮ್ಮಾಯಿ ನೇತೃತ್ವದಲ್ಲೇ ಮುನ್ನಡೆಸಲಿದ್ದೇವೆ ಎಂದು ಸಿಟಿ ರವಿ ಹೇಳಿದ್ದಾರೆ. ರಾಷ್ಟ್ರೀಯ ನಾಯಕ ಅಮಿತ್ ಶಾ ಕೂಡಾ ಸಭೆಗಳಲ್ಲಿ ಸ್ಪಷ್ಟಪಡಿಸಿದ್ದಾರೆ. ಗೊಂದಲ ಹುಟ್ಟು ಹಾಕುವ ಷಡ್ಯಂತ್ರವನ್ನು ಕೆಲವು ರಾಜಕೀಯ ಪಕ್ಷದ ನಾಯಕರು ಮಾಡ್ತಿದ್ದಾರೆ. ಈ ಮೂಲಕ ಚಾಲ್ತಿಯಲ್ಲಿರಲು, ಗೊಂದಲ ಹುಟ್ಟು ಹಾಕಲು ಹಾಗೂ ತಮ್ಮ ಮನೆ ಜಗಳ ಮರೆ ಮಾಚಲು ಕೂಡಾ ಈ ರೀತಿಯ ಪ್ರಯತ್ನ ನಡೆಸ್ತಿದ್ದಾರೆ. ನಮ್ಮಲ್ಲಿ ಯಾವುದೇ ಗೊಂದಲವಿಲ್ಲ, ಬೊಮ್ಮಾಯಿ ನೇತೃತ್ವದಲ್ಲೇ ಚುನಾವಣೆ ಎದುರಿಸ್ತೇವೆ. ಕಾಂಗ್ರೆಸ್‌ನವರು ಡಿಎನ್‌ಎ ಮೂಲಕ ನಾಯಕತ್ವ ಬರುತ್ತದೆ ಅಂದ್ಕೊಂಡಿದ್ದಾರೆ. ಅದಕ್ಕೆ ನೆಹರೂ ಹಾಗೂ ಇಂದಿರಾ ಗಾಂಧಿಯನ್ನು ತಮ್ಮ ಲೀಡರ್ ಅಂದರು, ಬಳಿಕ ರಾಜೀವ ಗಾಂಧಿಯನ್ನೂ ಕರೆದುಕೊಂಡು ಬಂದರು. ಪ್ರಿಯಾಂಕಾ ಗಾಂಧಿಗೆ ಇಂದಿರಾ ತರಹನೇ ಕೆನ್ನೆಯಲ್ಲಿ ಗುಳಿ ಬೀಳುವುದರಿಂದ ಲೀಡರ್ ಆಗೋಕೆ ಸೂಕ್ತ ಅಂತಾರೆ. ಜನರ ನಡುವಿನಿಂದ ಲೀಡರ್ ಶಿಪ್‌ನಿಂದ ಬರೋದು, ಕೌಟುಂಬಿಕ ವಾರಿಸ್ಥಾರಿಕೆಯಿಂದಲ್ಲ. ಸುರ್ಜೇವಾಲರದ್ದು ಮಾನಸಿಕ ಗುಲಾಮಗಿರಿಯಾಗಿದ್ದು, ಇದರಿಂದ ಅವರು ಲೀಡರ್‌ಶಿಪ್ ಅಂತಿದ್ದಾರೆ. ಅವರು ಅಪ್ಪನಿಂದ ಮಗನಿಗೆ- ಮಗಳಿಗೆ ಬರೋದು ಅಂದ್ಕೊಂಡಿದ್ದಾರೆ. ಜನರ ನಡುವಿನಿಂದ ಬರುವಂತಹ ನಾಯಕತ್ವ ಬಿಜೆಪಿಯಲ್ಲಿ ಊರೂರಿನಲ್ಲೂ ಇದೆ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:07 pm, Sun, 19 February 23