ಚಿಕ್ಕಮಗಳೂರು: ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಚಿಕ್ಕಮಗಳೂರು ಲಿಂಗಾಯತ​ ಮುಖಂಡ; ಸಿಟಿ ರವಿಗೆ ತಲೆ ಬಿಸಿ

ಚಿಕ್ಕಮಗಳೂರು ಲಿಂಗಾಯತ​ ಮುಖಂಡ, ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಅತ್ಯಪ್ತ, ಬಿಜೆಪಿ ಜಿಲ್ಲಾ ಪ್ರಕೋಷ್ಟಗಳ ಸಂಯೋಜಕ ಹೆಚ್​. ಡಿ ತಿಮ್ಮಯ್ಯ ಬಿಜೆಪಿಗೆ ಗುಡ್​ ಬೈ ಹೇಳಿ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.

Follow us
| Updated By: ವಿವೇಕ ಬಿರಾದಾರ

Updated on:Feb 19, 2023 | 2:07 PM

ಚಿಕ್ಕಮಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ (Karanataka Assembly Election) ಹತ್ತಿರವಾಗುತ್ತಿದ್ದು, ನಾಯಕರು ಪಕ್ಷಾಂತರದ ಮಾತುಗಳನ್ನು ಆಡುತ್ತಿದ್ದಾರೆ. ಈ ಮಧ್ಯೆ ಬಿಜೆಪಿ (BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (CT Ravi) ಅವರಿಗೆ ಸ್ವಕ್ಷೇತ್ರದಲ್ಲೇ ದೊಡ್ಡ ಆಘಾತ ಉಂಟಾಗಿದೆ. ಚಿಕ್ಕಮಗಳೂರು (Chikkamagaluru) ಲಿಂಗಾಯತ​ (Lingayat) ಮುಖಂಡ, ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ (BS Yadiyurappa) ಅತ್ಯಾಪ್ತ, ಬಿಜೆಪಿ ಜಿಲ್ಲಾ ಪ್ರಕೋಷ್ಟಗಳ ಸಂಯೋಜಕ ಹೆಚ್​. ಡಿ ತಿಮ್ಮಯ್ಯ (HD Thimayya) ಬಿಜೆಪಿಗೆ ಗುಡ್​ ಬೈ ಹೇಳಿ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಇಂದು (ಫೆ.19) ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ (KPCC Office), ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ನೇತೃತ್ವದಲ್ಲಿ ಹೆಚ್​.ಡಿ.ತಮ್ಮಯ್ಯ ಕಾಂಗ್ರೆಸ್ (Congress)​ ಸೇರ್ಪಡೆಯಾಗಿದ್ದಾರೆ.

ಇನ್ನು ಹೆಚ್ ಡಿ ತಮ್ಮಯ್ಯ ಚಿಕ್ಕಮಗಳೂರು ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯದ ಮುಖಂಡರಾಗಿದ್ದಾರೆ. ಇದರಿಂದ ಬಿಜೆಪಿಗೆ ವರದಾನವಾಗಿತ್ತು. ಆದರೆ ಈಗ ಕಾಂಗ್ರೆಸ್​ ಸೇರ್ಪಡೆಯಿಂದ ಬಿಜೆಪಿಗೆ ಭಾರೀ ಹೊಡೆತ ಬೀಳುವ ಸಾಧ್ಯತೆ ಇದೆ. ಚಿಕ್ಕಮಗಳೂರಲ್ಲಿ 15 ಸಾವಿರ ಒಕ್ಕಲಿಗ ಮತವಿದ್ದು, 40 ಸಾವಿರಕ್ಕೂ ಹೆಚ್ಚು ಲಿಂಗಾಯತ ಸಮುದಾಯ ಮತಗಳಿವೆ. ಆದರೆ ಈಗ ತಮ್ಮಯ್ಯ ಕಾಂಗ್ರೆಸ್​ ಸೇರ್ಪಡೆಯಿಂದ ಬಿಜೆಪಿ ಪಾಲಿನ ಲಿಂಗಾಯತ ಮತ ಒಡೆಯುವ ಸಾಧ್ಯತೆ ಇದೆ.

ಟಿಕೆಟ್​ ಆಕಾಂಕ್ಷಿಯಾಗಿದ್ದ ಹೆಚ್​. ಡಿ ತಿಮ್ಮಯ್ಯ

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕಳೆದ 20 ವರ್ಷಗಳಿಂದ ಸಿ.ಟಿ.ರವಿ 4 ಬಾರಿ ಶಾಸಕರಾಗಿದ್ದಾರೆ. ಇವರ ಎದುರಾಳಿಯೇ ಇಲ್ಲದಂತೆ ಗೆದ್ದು ಬಂದಿದ್ದಾರೆ. ಆದರೆ ಈಗ ತಮ್ಮ ಪಕ್ಷದ ಮಾಜಿ ನಾಯಕ ಎದುರಾಳಿಯಾಗಿದ್ದಾರೆ. ಹೆಚ್​. ಡಿ ತಿಮ್ಮಯ್ಯ ಈ ಬಾರಿ ತಮಗೆ ಟಿಕೆಟ್​ ನೀಡುವಂತೆ ಬಿಜೆಪಿ ಜಿಲ್ಲಾಧ್ಯಕ್ಷರಲ್ಲಿ ಮನವಿ ಮಾಡಿದ್ದರು. ಆದರೆ ಇದಕ್ಕೆ ಬಿಜೆಪಿ ಜಿಲ್ಲಾ ಘಟಕ ವರಿಷ್ಠರತ್ತ ಬೆರಳು ಮಾಡಿತ್ತು. ನಂತರ ಪಕ್ಷದ ಕಾರ್ಯಕರ್ತರೊಂದಿಗೆ ಸುದ್ದಿಗೋಷ್ಠಿ ನಡೆಸಿ ನಾನು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದೇನೆ, ಕಾಂಗ್ರೆಸ್​ಗೆ ಸೇರುತ್ತೇನೆ ಎಂದು ಘೋಷಿಸುವ ಮೂಲಕ ಬಿಜೆಪಿಗೆ ಭಾರೀ ಹೊಡೆತ ನೀಡಿದ್ದರು.

ಚಿಕ್ಕಮಗಳೂರಲ್ಲಿ ಬಿಜೆಪಿ ಅಂದ್ರೆ ಸಿ. ಟಿ. ರವಿ. ಸಿ. ಟಿ. ರವಿ ಅಂದ್ರೆ ಬಿಜೆಪಿ ಎಂಬಂತಿತ್ತು. ಆದರೆ, ಈ ಬಾರಿ ಶಿಸ್ತಿನ ಪಕ್ಷದಲ್ಲಿ ಎಲ್ಲವೂ ಸರಿ ಇಲ್ವಾ ಎಂಬ ಪ್ರಶ್ನೆ ಮೂಡಿದೆ. 15 ವರ್ಷಗಳಿಂದ ಸಿ.ಟಿ.ರವಿಯ ಜೊತೆಗೆ ಇರುವ ಹೆಚ್. ಡಿ. ತಮ್ಮಯ್ಯ ಕಾಂಗ್ರೆಸ್ ಸೇರಿದ್ದು ಬಿಜೆಪಿಗರಿಗೆ ಚಕಿತ ಮೂಡಿಸಿದೆ. ಒಟ್ಟಾರೆ, ಚಿಕ್ಕಮಗಳೂರಲ್ಲಿ 20 ವರ್ಷದಿಂದ ನಾಲ್ಕು ಬಾರಿ ಗೆದ್ದು 5ನೇ ಬಾರಿಗೆ ಸಿಎಂ ಆಕಾಂಕ್ಷಿಯಾಗಿ ಚುನಾವಣೆ ಎದುರಿಸಲು ಸನ್ನದ್ಧರಾಗಿರುವ ಸಿ. ಟಿ. ರವಿಗೆ ಈಗ ಎದುರಾಳಿ ಹುಟ್ಟಿಕೊಂಡಿರೋದು ಬಿಜೆಪಿ ವಲಯದಲ್ಲಿ ತೀವ್ರ ಸಂಚಲನದ ಜೊತೆ ಆತಂಕ ಕೂಡ ಮೂಡಿಸಿದೆ.

ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:06 pm, Sun, 19 February 23