ಗುಜರಾತ್ ವಿಧಾನ ಸಭಾ ಚುನಾವಣೆ: ಜನಸಾಮಾನ್ಯರಂತೆ ಸಾಲಲ್ಲಿ ನಿಂತು ತಮ್ಮ ಮತದಾನದ ಹಕ್ಕು ಚಲಾಯಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ!
ಅವರಿಗಿಂತ ಮುಂದಿದ್ದ ಮಹಿಳೆಯೊಬ್ಬರು ಮೊದಲು ಪ್ರಧಾನಿಗಳಿಗೆ ಮತ ಚಲಾಯಿಸಲು ಮನವಿ ಮಾಡಿದಾಗಲೂ ಅವರು, ‘ನೀವು ವೋಟು ಮಾಡಿ’ ಅಂತ ಕೈಜೋಡಿಸಿ ವಿನಮ್ರತೆಯಿಂದ ಹೇಳುತ್ತಾರೆ.
ಅಹ್ಮದಾಬಾದ್: ಗುಜರಾತ್ ವಿಧಾನ ಸಭೆಗೆ (Gujarat Assembly Polls) ನಡೆಯುತ್ತಿರುವ ಎರಡನೇ ಹಂತದ ಚುನಾವಣೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ಅಹ್ಮದಾಬಾದ್ ಸಾಬರಮತಿ (Sabarmati) ಕ್ಷೇತ್ರದ ರಾಣಿಪ್ ನಲ್ಲಿರುವ ನಿಶಾನ್ ಪಬ್ಲಿಕ್ ಶಾಲೆಯ ಮತಗಟ್ಟೆಯಲ್ಲಿ ಒಬ್ಬ ಜನಸಾಮಾನ್ಯನಂತೆ ಸರತಿ ಸಾಲಿನಲ್ಲಿ ನಿಂತು ತಮ್ಮ ಮತದಾನದ ಹಕ್ಕು ಚಲಾಯಿಸಿದರು. ಕೇಂದ್ರದ ಒಳಗಡೆ ಚುನಾವಣಾಧಿಕಾರಿಗಳು ಪ್ರಧಾನಿ ಮೋದಿಯವರನ್ನು ನೋಡಿದಾಕ್ಷಣ ಎದ್ದುನಿಂತಾಗ ‘ದಯವಿಟ್ಟು ಕೂತ್ಕೊಳ್ಳಿ’ ಅಂತ ಹೇಳುತ್ತಾರೆ. ಹಾಗೆಯೇ, ಅವರಿಗಿಂತ ಮುಂದಿದ್ದ ಮಹಿಳೆಯೊಬ್ಬರು ಮೊದಲು ಪ್ರಧಾನಿಗಳಿಗೆ ಮತ ಚಲಾಯಿಸಲು ಮನವಿ ಮಾಡಿದಾಗಲೂ ಅವರು, ‘ನೀವು ವೋಟು ಮಾಡಿ’ ಅಂತ ಕೈಜೋಡಿಸಿ ವಿನಮ್ರತೆಯಿಂದ ಹೇಳುತ್ತಾರೆ. ಮತ ಚಲಾಯಿಸಿದ ನಂತರ ಅವರು ಅಲ್ಲಿದ್ದವರಿಗೆಲ್ಲ ಧನ್ಯವಾದಗಳನ್ನು ಹೇಳುತ್ತಾ ಹೊರಬರುತ್ತಾರೆ.
ಇನ್ನಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Published on: Dec 05, 2022 11:39 AM