ಆಮ್ ಆದ್ಮಿ ಪಕ್ಷ (AAP) ಈ ವರ್ಷಾಂತ್ಯದಲ್ಲಿ ನಡೆಯಲಿರುವ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ (Gujarat Election 2022) 12 ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳ ಐದನೇ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದೆ. ಅರವಿಂದ ಕೇಜ್ರಿವಾಲ್ ನೇತೃತ್ವದ ಎಎಪಿ 182 ವಿಧಾನಸಭಾ ಸ್ಥಾನಗಳಿರುವ ಗುಜರಾತಿನಲ್ಲಿ ಮುಂಬರುವ ಚುನಾವಣೆಗೆ ಇದುವರೆಗೆ 53 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ಇದುವರೆಗೆ ಚುನಾವಣೆಗೆ ತಮ್ಮ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿಲ್ಲ. ಬಿಜೆಪಿಗೆ ಪ್ರಮುಖ ಸ್ಪರ್ಧಿಯಾಗಿ ನಿಲ್ಲಲು ಪ್ರಯತ್ನಿಸುತ್ತಿರುವ ಎಎಪಿ ಅಕ್ಟೋಬರ್ 6 ರಂದು ತನ್ನ 12 ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯನ್ನು ಪ್ರಕಟಿಸಿದ್ದು ರಾಜ್ಯದ ಎಲ್ಲಾ 182 ಸ್ಥಾನಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದೆ.
ગુજરાત વિધાનસભા ચૂંટણી ૨૦૨૨ અંતર્ગત આમ આદમી પાર્ટી તરફથી પાંચમી યાદીમાં સ્થાન મેળવનાર તમામ ઉમેદવારોને અભિનંદન સહ શુભકામનાઓ!
બસ હવે તો પરિવર્તન જોઈએ જ!#એક_મોકો_કેજરીવાલને pic.twitter.com/v0rTV0UgfD
— AAP Gujarat | Mission2022 (@AAPGujarat) October 16, 2022
ಎರಡು ಪರಿಶಿಷ್ಟ ಜಾತಿಗಳಿಗೆ (ಎಸ್‌ಸಿ) ಮೀಸಲಾಗಿದೆ. ಈ 12 ಸ್ಥಾನಗಳಲ್ಲಿ, ಪ್ರಸ್ತುತ ಆರು ಕಾಂಗ್ರೆಸ್, ಐದು ಬಿಜೆಪಿ ಮತ್ತು ಒಂದು ಭಾರತೀಯ ಬುಡಕಟ್ಟು ಪಕ್ಷ (ಬಿಟಿಪಿ), ಛೋಟು ವಾಸವ ನೇತೃತ್ವದ ಸಂಘಟನೆ ಅಧಿಕಾರದಲ್ಲಿದೆ. ಛೋಟು ವಾಸವ ನೇತೃತ್ವದ ಸಂಘಟನೆ ಇತ್ತೀಚೆಗೆ ಎಎಪಿ ಜತೆ ಮೈತ್ರಿ ಮುರಿದಿತ್ತು
ಪಟ್ಟಿಯನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ,ಎಎಪಿ ಗುಜರಾತ್ ಅಧ್ಯಕ್ಷ ಗೋಪಾಲ್ ಇಟಾಲಿಯಾ, ತಮ್ಮ ಪಕ್ಷವು ಸಾರ್ವಜನಿಕರನ್ನು ತಲುಪಲು ಸಾಕಷ್ಟು ಸಮಯವನ್ನು ಪಡೆಯುವ ಕಲ್ಪನೆಯೊಂದಿಗೆ ಅಭ್ಯರ್ಥಿಗಳ ಹೆಸರನ್ನು ಮುಂಚಿತವಾಗಿ ಘೋಷಿಸುವ ಮೂಲಕ ಮಾದರಿಯಾಗಿದೆ ಎಂದು ಹೇಳಿದರು.
ಪಟ್ಟಿಯ ಪ್ರಕಾರ, ಭುಜ್‌ನಿಂದ ರಾಜೇಶ್ ಪಂಡೋರಿಯಾ , ಇದಾರ್‌ನಿಂದ ಜಯಂತಿಭಾಯಿ ಪರ್ನಾಮಿ, ನಿಕೋಲ್‌ನಿಂದ ಅಶೋಕ್ ಗಜೆಯಾ, ಸಬರಮತಿಯಿಂದ ಜಸ್ವಂತ್ ಠಾಕೋರ್, ಟಂಕರಾದಿಂದ ಸಂಜಯ್ ಭಟಸ್ನಾ, ಕೊಡಿನಾರ್‌ನಿಂದ ವಲ್ಜಿಭಾಯ್ ಮಕ್ವಾನಾ (ಎಸ್‌ಸಿ), ಮಹುದಾದಿಂದ ರಾವ್ಜಿಭಾಯಿ ವಘೇಲಾ, ಬಲಸಿನೋರ್‌ನಿಂದ ಉದೇಸಿನ್ಹ್ ಚೌಹಾಣ್, ಮೊರ್ವಾ ಹದಾಫ್ (ಎಸ್‌ಟಿ) ನಿಂದ ಬನಾಭಾಯ್ ದಾಮೋರ್, ಝಲೋಡ್‌ನಿಂದ ಅನಿಲ್ ಗರಾಸಿಯಾ (ಎಸ್‌ಟಿ), ದೇಡಿಯಾಪಾದದಿಂದ ಚೈತಾರ್ ವಾಸವ (ಎಸ್‌ಟಿ), ಮತ್ತು ವ್ಯಾರಾದಿಂದ ಬಿಪಿನ್ ಚೌಧರಿ (ಎಸ್‌ಟಿ) ಸ್ಪರ್ಧಿಸಲಿದ್ದಾರೆ.
ಅಸಾದುದ್ದೀನ್ ಓವೈಸಿ ನೇತೃತ್ವದ ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಇದುವರೆಗೆ ತನ್ನ ಮೂರು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಡ್ಯಾನಿಲಿಮ್ಡಾ (ಎಸ್‌ಸಿ), ಜಮಾಲ್ಪುರ್ ಖಾಡಿಯಾ ಮತ್ತು ಸೂರತ್ (ಪೂರ್ವ)ದಲ್ಲಿ ಎಐಎಂಐಎಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ಎಎಪಿಯ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಗುಜರಾತ್‌ನಲ್ಲಿ ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ರ್ಯಾಲಿಗಳು ಮತ್ತು ಸಮಾವೇಶಗಳನ್ನು ನಡೆಸುತ್ತಿರುವ ಅವರು ಉಚಿತ ವಿದ್ಯುತ್, ಉತ್ತಮ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು ಸೇರಿದಂತೆ ಹಲವಾರು ಭರವಸೆಗಳನ್ನು ನೀಡಿದ್ದಾರೆ.
Published On - 3:04 pm, Sun, 16 October 22