ಅಧಿಕಾರಿಗಳ ವರ್ಗಾವಣೆ: ಗುಜರಾತ್ ಸರ್ಕಾರಕ್ಕೆ ತರಾಟೆಗೆ ತೆಗೆದುಕೊಂಡು ಚುನಾವಣೆ ಆಯೋಗ

| Updated By: ರಮೇಶ್ ಬಿ. ಜವಳಗೇರಾ

Updated on: Oct 22, 2022 | 6:06 PM

ಅಧಿಕಾರಿಗಳ ವರ್ಗಾವಣೆ ಮತ್ತು ಹುದ್ದೆ ನಿಯೋಜನೆ ಸಂಬಂಧ ಗುಜರಾತ್ ಸರ್ಕಾರದ ವಿರುದ್ಧ ಚುನಾವಣಾ ಆಯೋಗ ಕೆಂಡಾಮಂಡಲವಾಗಿದೆ.

ಅಧಿಕಾರಿಗಳ ವರ್ಗಾವಣೆ: ಗುಜರಾತ್ ಸರ್ಕಾರಕ್ಕೆ ತರಾಟೆಗೆ ತೆಗೆದುಕೊಂಡು ಚುನಾವಣೆ ಆಯೋಗ
Chief Election Commissioner Rajiv Kumar
Follow us on

ನವದೆಹಲಿ: ಮುಂದಿನ ವಿಧಾನಸಭೆ ಚುನಾವಣೆಗೂ ಮುನ್ನ ಅಧಿಕಾರಿಗಳ ವರ್ಗಾವಣೆ ಮತ್ತು ಹುದ್ದೆ ನಿಯೋಜನೆಯ ಕುರಿತ ವರದಿಯನ್ನು ಸಲ್ಲಿಸಲು ಗುಜರಾತ್ ಸರ್ಕಾರ ವಿಫಲವಾಗಿದೆ. ಇದರಿಂದ ಚುನಾವಣೆ ಆಯೋಗ (Election Commission) ಗರಂ ಆಗಿದ್ದು, ಈ ಬಗ್ಗೆ ಗುಜರಾತ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಅಲ್ಲದೇ ಸರ್ಕಾರದ ಮುಖ್ಯ ಕಾರ್ಯದರ್ಶಿ, ಡಿಜಿಪಿಯಿಂದ ವಿವರಣೆ ಕೇಳಿದೆ.

ಗುಜರಾತ್ ಮುಖ್ಯ ಕಾರ್ಯದರ್ಶಿಗೆ ಶುಕ್ರವಾರ ಪತ್ರ ಬರೆದಿರುವ ಚುನಾವಣಾ ಆಯೋಗ, ಕೆಲವು ಶ್ರೇಣಿಯ ಅಧಿಕಾರಿಗಳ ವರ್ಗಾವಣೆ ಮತ್ತು ಪೋಸ್ಟಿಂಗ್ ಬಗ್ಗೆ ಅನುಸರಣೆ ವರದಿಗಳನ್ನು ಕಳುಹಿಸಲು ವಿಫಲರಾಗಿರುವ ಬಗ್ಗೆ ಅಸಮಧಾನ ವ್ಯಕ್ತಪಡಿಸಿದೆ. ನಿಗದಿತ ಅವಧಿ ಮುಗಿದ ನಂತರವೂ ಸಹ ಅನುಪಾಲನ ವರದಿ ಕಳುಹಿಸದಿರುವ ಕುರಿತು ವಿವರಣೆ ಕೇಳಿದೆ. ಅಲ್ಲದೇ ಅಧಿಕಾರಿಗಳ ವರ್ಗಾವಣೆ ಮತ್ತು ನಿಯೋಜನೆ ಕುರಿತ ಅನುಪಾಲನಾ ವರದಿಯನ್ನು 30.09.2022 ರೊಳಗೆ ಆಯೋಗಕ್ಕೆ ಒದಗಿಸುವಂತೆ ಪತ್ರದಲ್ಲಿ ಸೂಚಿಸಲಾಗಿದೆ.

ಗುಜರಾತ್ ಚುನಾವಣಾ ದಿನಾಂಕ ಘೋಷಣೆ ಮಾಡಿಲ್ಲ, ಈ ಬಗ್ಗೆ ಚುನಾವಣಾ ಆಯೋಗ ಹೇಳಿದ್ದೇನು?

ಹಿಮಾಚಲ ಪ್ರದೇಶಕ್ಕೆ ನವೆಂಬರ್ 12 ರಂದು ಚುನಾವಣೆ ನಡೆಯಲಿದ್ದು, ಗುಜರಾತ್ ಚುನಾವಣೆಯ ದಿನಾಂಕಗಳು ಇನ್ನೂ ಘೋಷಣೆಯಾಗಬೇಕಿದೆ. ತವರು ಜಿಲ್ಲೆಗಳಲ್ಲಿ ನಿಯೋಜನೆಗೊಂಡಿರುವ ಅಧಿಕಾರಿಗಳು ಮತ್ತು ಕಳೆದ ನಾಲ್ಕು ವರ್ಷಗಳಲ್ಲಿ ಒಂದೇ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಆಯೋಗವು ಎರಡು ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.

ವಿಧಾನಸಭೆಗೆ ಚುನಾವಣೆ ನಡೆಯುವ ಹಿಮಾಚಲ ಪ್ರದೇಶ ಮತ್ತು ಗುಜರಾತ್‍ಗೆ ಅಧಿಕಾರಿಗಳ ವರ್ಗಾವಣೆ ಮತ್ತು ಹುದ್ದೆಗೆ ಸಂಬಂಧಿಸಿದಂತೆ ಆಯೋಗ ಎರಡು ಸರ್ಕಾರಗಳಿಗೆ ಸೂಚನೆ ನೀಡಿ ಪತ್ರ ಬರೆದಿತ್ತು. ಪಾರದರ್ಶಕ ಮತ್ತು ನ್ಯಾಯಸಮ್ಮತವಾದ ಚುನಾವಣೆಯನ್ನು ಖಚಿತಪಡಿಸಿಕೊಳ್ಳಲು ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗೂ ಮುನ್ನ ಚುನಾವಣಾ ಆಯೋಗವು ಇಂತಹ ನಿರ್ದೇಶನಗಳನ್ನು ನೀಡುವುದು ಸಾಮಾನ್ಯ ಪ್ರಕ್ರಿಯೆಯಾಗಿದೆ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಇಂತಹ ನಿರ್ದೇಶನಗಳನ್ನು ಆಯೋಗ ನೀಡಲಿದೆ. ಆದ್ರೆ, ಗುಜರಾತ್ ಸರ್ಕಾರ ಆಯೋಗದ ಸೂಚನೆ ಪಾಲನೆ ಮಾಡುವಲ್ಲಿ ವಿಫಲವಾಗಿದೆ.