ಗುಜರಾತ್‌ನಲ್ಲಿ(Gujarat) ಬುಧವಾರ ತಮ್ಮ ಪಕ್ಷದ ಅಭ್ಯರ್ಥಿಯೊಬ್ಬರ ಅಪಹರಣ ನಡೆದಿದೆ. ಆ ಅಭ್ಯರ್ಥಿಯನ್ನು ಚುನಾವಣಾ ಕಚೇರಿಗೆ ಎಳೆದೊಯ್ದು ಮುಂಬರುವ ಗುಜರಾತ್ ಚುನಾವಣೆಗೆ ನಾಮಪತ್ರ ಹಿಂಪಡೆಯಲು ಬಂದೂಕು ತೋರಿಸಿ ಒತ್ತಾಯಿಸಲಾಗಿದೆ ಎಂದು ಆಮ್ ಆದ್ಮಿ ಪಕ್ಷ (Aam Aadmi Party) ಆರೋಪಿಸಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ. ಕಾಂಚನ್ ಜರಿವಾಲಾ (Kanchan Jariwala) ತಮ್ಮಕುಟುಂಬದೊಂದಿಗೆ ನಾಪತ್ತೆಯಾಗಿದ್ದಾರೆ ಎಂದು ಬೆಳಗ್ಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal) ಆರೋಪಿಸಿದ್ದು ಇದಕ್ಕೆ ಬಿಜೆಪಿಯನ್ನು ದೂಷಿಸಿದ್ದರು. ಕಾಂಚನ್ ಜರಿವಾಲಾ ಸೂರತ್‌ನಿಂದ (ಪೂರ್ವ) ನಾಮಪತ್ರ ಸಲ್ಲಿಸಿದ್ದರು. ಅಪಹರಣದ ಬಗ್ಗೆ ಟ್ವೀಟ್ ಗಳು ಅಭ್ಯರ್ಥಿಯ ವಿಡಿಯೊಗಳು ಹರಿದಾಡಿದ ಕೂಡಲೇ ಚುನಾವಣಾ ಕಚೇರಿಯಲ್ಲಿ ಪೊಲೀಸರು ಸುತ್ತುವರೆದಿದ್ದಾರೆ. ಜರಿವಾಲಾ ಅವರನ್ನು 500 ಪೊಲೀಸರು ಸುತ್ತುವರೆದಿರುವ ಗುಜರಾತ್ ಚುನಾವಣಾ ರಿಟರ್ನಿಂಗ್ ಕಚೇರಿಗೆ ಕರೆತರಲಾಯಿತು ಎಂದು ಎಎಪಿಯ ಹಿರಿಯ ನಾಯಕ ಮನೀಶ್ ಸಿಸೋಡಿಯಾ ಹೇಳಿದ್ದಾರೆ.
“ಅವರ ಮೇಲೆ ನಾಮಪತ್ರ ಹಿಂಪಡೆಯುವಂತೆ ಒತ್ತಡವಿದೆ. ಅವರನ್ನು ಚುನಾವಣಾ ಕಚೇರಿಯಲ್ಲಿ ಕುಳಿತುಕೊಳ್ಳುವಂತೆ ಒತ್ತಾಯಿಸಲಾಗಿದೆ ಮತ್ತು ಪೊಲೀಸರಿಂದ ಒತ್ತಡ ಹೇರಲಾಗುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಬಹಿರಂಗ ಬೆದರಿಕೆ ಎಂದು ನಾನು ಚುನಾವಣಾ ಆಯೋಗಕ್ಕೆ ಹೇಳಲು ಬಯಸುತ್ತೇನೆ” ಎಂದು ಸಿಸೋಡಿಯಾ ಆರೋಪಿಸಿದ್ದಾರೆ.
#WATCH | Gujarat: AAP candidate from Surat (East) from Gujarat, Kanchan Jariwala, takes back his nomination after he was allegedly kidnapped last evening pic.twitter.com/E1vqqkveNi
— ANI (@ANI) November 16, 2022
ಈ ಬಗ್ಗೆ ಟ್ವೀಟ್ ಮಾಡಿದ ಸಿಸೋಡಿಯಾ,ಅಭ್ಯರ್ಥಿಯನ್ನು ಅಪಹರಿಸಲಾಗಿದೆ. ಅವರು ಅವರನ್ನು ಬಂದೂಕು ತೋರಿಸಿ ನಾಮಪತ್ರ ಹಿಂತೆಗೆದುಕೊಳ್ಳುವಂತೆ ಮಾಡಿದರು. ಚುನಾವಣಾ ಆಯೋಗಕ್ಕೆ ಇದಕ್ಕಿಂತ ದೊಡ್ಡ ತುರ್ತು ಏನು? ಹೀಗಾಗಿ ಕೂಡಲೇ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದೇವೆ ಎಂದಿದ್ದಾರೆ.
ಎಎಪಿ ನಾಯಕ ರಾಘವ್ ಚಡ್ಡಾ ಅವರು ಜರಿವಾಲಾ ಎಳೆತಂದು ನಾಮಪತ್ರವನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದರು ಎಂದು ವಿಡಿಯೊವೊಂದನ್ನು ಟ್ವೀಟ್ ಮಾಡಿದ್ದಾರೆ.”ಪೊಲೀಸರು ಮತ್ತು ಬಿಜೆಪಿ ಗೂಂಡಾಗಳು ಹೇಗೆ ಒಟ್ಟಾಗಿ ನಮ್ಮ ಸೂರತ್ ಪೂರ್ವ ಅಭ್ಯರ್ಥಿ ಕಾಂಚನ್ ಜರಿವಾಲಾ ಅವರನ್ನು RO ಕಚೇರಿಗೆ ಎಳೆದೊಯ್ದು ನಾಮಪತ್ರವನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸುತ್ತಿರುವುದನ್ನು ನೋಡಿ. ‘ಮುಕ್ತ ಮತ್ತು ನ್ಯಾಯಯುತ ಚುನಾವಣೆ’ ಎಂಬ ಪದವು ತಮಾಷೆಯಾಗಿದೆ!” ಎಂದು ಟ್ವೀಟ್ ಮಾಡಿದ್ದಾರೆ.
Watch how police and BJP goons together – dragged our Surat East candidate Kanchan Jariwala to the RO office, forcing him to withdraw his nomination
The term ‘free and fair election’ has become a joke! pic.twitter.com/CY32TrUZx8
— Raghav Chadha (@raghav_chadha) November 16, 2022
“ಬಿಜೆಪಿ ‘ಎಎಪಿ’ಗೆ ಎಷ್ಟು ಹೆದರುತ್ತಿದೆ ಎಂದರೆ ಅದು ಗೂಂಡಾಗಿರಿಯನ್ನು ಆಶ್ರಯಿಸಿದೆ. ಕೆಲ ದಿನಗಳಿಂದ ಸೂರತ್ ಪೂರ್ವದಿಂದ ಸ್ಪರ್ಧಿಸಿದ್ದಕ್ಕಾಗಿ ಬಿಜೆಪಿ ನಮ್ಮ ಕಾಂಚನ್ ಜರಿವಾಲಾ ಅವರ ಹಿಂದೆ ಬಿದ್ದಿತ್ತು. ಇಂದು ಅವರು ನಾಪತ್ತೆಯಾಗಿದ್ದಾರೆ! ಬಿಜೆಪಿಯ ಗೂಂಡಾಗಳು ಅವರನ್ನು ಕರೆದೊಯ್ದಿದ್ದಾರೆ ಎಂದು ನಂಬಲಾಗಿದೆ! ಅವರ ಕುಟುಂಬವೂ ಕಾಣೆಯಾಗಿದೆ! ಬಿಜೆಪಿ ಎಷ್ಟು ಕೆಳಮಟ್ಟಕ್ಕೆ ಹೋಗುತ್ತಿದೆ? ಎಂದು ಗುಜರಾತ್ ಮುಖ್ಯಮಂತ್ರಿ ಅಭ್ಯರ್ಥಿ ಇಸುದನ್ ಗಧ್ವಿ ಟ್ವೀಟ್ ಮಾಡಿದ್ದಾರೆ.
ಬಿಜೆಪಿ ಅಧಿಕಾರಿಯೊಬ್ಬರು ಈ ಆರೋಪಕ್ಕೆ ಪ್ರತಿಕ್ರಿಯಿಸಿದ್ದು, ಎಎಪಿ ಇಂತಹ ಆಧಾರರಹಿತ ಆರೋಪಗಳನ್ನು ಮಾಡುವ ಮೂಲಕ ಗಮನ ಸೆಳೆಯಲು ಹತಾಶ ಪ್ರಯತ್ನ ಮಾಡುತ್ತಿದೆ. “ತಮ್ಮ ಅಭ್ಯರ್ಥಿ ಅಥವಾ ಅವರ ಕುಟುಂಬದ ಸದಸ್ಯರು ನಾಪತ್ತೆಯಾಗಿದ್ದಲ್ಲಿ ಅವರು ಮೊದಲು ದೂರು ದಾಖಲಿಸಲಿ. ತನಿಖಾ ಪ್ರಾಧಿಕಾರವು ಸತ್ಯವನ್ನು ಕಂಡುಕೊಳ್ಳುತ್ತದೆ. ಯಾವುದೇ ಪುರಾವೆಗಳಿಲ್ಲದೆ ಎಎಪಿ ಅಂತಹ ಕೀಳುಮಟ್ಟಕ್ಕೆ ಇಳಿದಿರುವುದು ಈ ಚುನಾವಣೆಯಲ್ಲಿ ಪ್ರಸ್ತುತವಾಗಲು ಅವರ ಹತಾಶೆಯನ್ನು ತೋರಿಸುತ್ತದೆ ಎಂದಿದ್ದಾರೆ.
ಎಎಪಿ ಮುಖ್ಯ ಚುನಾವಣಾ ಅಧಿಕಾರಿಗೆ ಮಾಹಿತಿ ನೀಡಿದೆ. ಶೀಘ್ರದಲ್ಲೇ ಔಪಚಾರಿಕ ದೂರನ್ನು ಸಲ್ಲಿಸಲಿದೆ ಎಂದು ಚಡ್ಡಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
Published On - 5:12 pm, Wed, 16 November 22