Congress Star Campaigners: 40 ಸ್ಟಾರ್ ಪ್ರಚಾರಕರ ಹೆಸರು ಘೋಷಿಸಿದ ಕಾಂಗ್ರೆಸ್; ಪಟ್ಟಿಯಲ್ಲಿ ಯಾರೆಲ್ಲ? ಇಲ್ಲಿದೆ ನೋಡಿ

Karnataka Assembly Election 2023; ಕರ್ನಾಟಕ ವಿಧಾನಸಭೆ ಚುನಾವಣೆಗೆ 40 ನಾಯಕರನ್ನೊಳಗೊಂಡ ತಾರಾ ಪ್ರಚಾರಕರ ಪಟ್ಟಿಯನ್ನು ಕಾಂಗ್ರೆಸ್ ಬುಧವಾರ ಬಿಡುಗಡೆ ಮಾಡಿದೆ.

Congress Star Campaigners: 40 ಸ್ಟಾರ್ ಪ್ರಚಾರಕರ ಹೆಸರು ಘೋಷಿಸಿದ ಕಾಂಗ್ರೆಸ್; ಪಟ್ಟಿಯಲ್ಲಿ ಯಾರೆಲ್ಲ? ಇಲ್ಲಿದೆ ನೋಡಿ
ಡಿಕೆಶಿ, ಖರ್ಗೆ, ರಾಹುಲ್ ಗಾಂಧಿ

Updated on: Apr 19, 2023 | 5:54 PM

ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Election 2023) 40 ನಾಯಕರನ್ನೊಳಗೊಂಡ ತಾರಾ ಪ್ರಚಾರಕರ ಪಟ್ಟಿಯನ್ನು ಕಾಂಗ್ರೆಸ್ (Congress Star Campaigners) ಬುಧವಾರ ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿ ಸೋನಿಯಾ ಗಾಂಧಿ, ರಾಹುಲ್​ ಗಾಂಧಿ, ಪ್ರಿಯಾಂಕಾ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್​​, ಶಶಿ ತರೂರ್, ರಮ್ಯಾ, ಉಮಾಶ್ರೀ, ಜಗದೀಶ್​ ಶೆಟ್ಟರ್​, ಸತೀಶ್​ ಜಾರಕಿಹೊಳಿ, ಡಿ.ಕೆ.ಸುರೇಶ್​​, ವೀರಪ್ಪ ಮೊಯ್ಲಿ, ಡಾ.ಪರಮೇಶ್ವರ್​, ರಣದೀಪ್ ಸಿಂಗ್ ಸುರ್ಜೇವಾಲ, ಚಿದಂಬರಂ ಸೇರಿ 40 ನಾಯಕರನ್ನು ಹೆಸರಿಸಲಾಗಿದೆ.

ಜಗದೀಶ ಶೆಟ್ಟರ್​​ಗೆ ಸ್ಥಾನ

ಬಿಜೆಪಿ ತೊರೆದು ಕಾಂಗ್ರೆಸ್​ಗೆ ಸೇರ್ಪಡೆಯಾಗಿರುವ ಹಿರಿಯ ನಾಯಕ ಜಗದೀಶ ಶೆಟ್ಟರ್ ಅವರಿಗೆ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸ್ಥಾನ ದೊರೆತಿದೆ. ಶೆಟ್ಟರ್​ ಅವರಿಗೆ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಟಿಕೆಟ್​​ ಅನ್ನು ಮಂಗಳವಾರವಷ್ಟೇ ಘೋಷಿಸಲಾಗಿತ್ತು.

ಇದನ್ನೂ ಓದಿ: Karnataka Assembly Elections 2023: 40 ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ

ಪಟ್ಟಿಯಲ್ಲಿ ಯಾರೆಲ್ಲ?

ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ಕೆಸಿ ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ, ಎಂಬಿ ಪಾಟೀಲ್, ಜಿ ಪರಮೇಶ್ವರ್, ಬಿಕೆ ಹರಿಪ್ರಸಾದ್, ಕೆಎಚ್ ಮುನಿಯಪ್ಪ, ಜಯರಾಮ್ ರಮೇಶ್, ವಿರಪ್ಪ ಮೊಯಿಲಿ, ರಾಮಲಿಂಗಾರೆಡ್ಡಿ, ಸತೀಶ್ ಜಾರಕಿಹೊಳಿ, ಜಗದೀಶ ಶೆಟ್ಟರ್, ಡಿಕೆ ಸುರೇಶ್, ಜಿಸಿ ಚಂದ್ರಶೇಖರ್, ಸೈಯದ್ ನಾಸಿರ್ ಹುಸೇನ್, ಜಮೀರ್ ಅಹಮದ್ ಖಾನ್, ಹೆಚ್​​ಎಂ ರೇವಣ್ಣ, ಉಮಾಶ್ರೀ, ಅಶೋಕ್ ಗೆಹ್ಲೋಟ್, ಭೂಪೇಶ್ ಬಘೆಲ್, ಸುಖ್ವಿಂದರ್ ಸಿಂಗ್ ಸುಕ್ಕು, ಪಿ. ಚಿದಂಬರಂ, ಪೃಥ್ವಿರಾಜ್ ಚೌಹಾಣ್, ಅಶೋಕ್ ಚೌಹಾಣ್, ರೇವನಾಥ್ ರೆಡ್ಡಿ, ರಮೇಶ್ ಚೆನ್ನಿತಲ, ಬಿವಿ ಶ್ರೀನಿವಾಸ್, ರಾಜ್ ಬಬ್ಬರ್, ಮಹಮ್ಮದ್ ಅಜರುದ್ದೀನ್, ದಿವ್ಯ ಸ್ಪಂದನ/ ರಮ್ಯಾ, ಇಮ್ರಾನ್ ಪ್ರತಾಪ್​ಗರಿ, ಕನ್ನಯ್ಯ ಕುಮಾರ್, ರೂಪ ಶಶಿಧರ್ ಹಾಗೂ ಸಾಧುಕೋಕಿಲ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 4:27 pm, Wed, 19 April 23